ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ನ್ಯಾಯಾಲಯದ ಆವರಣದಲ್ಲಿ:ಕೋವಿಡ್ ಜಾಗೃತಿ, ವ್ಯಾಕ್ಸಿನೇಷನ್ ಕಾರ್ಯಕ್ರಮ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಎ20ರಂದು,
ತಾಲೂಕು ಕಾನೂನು ಸೇವೆಗಳ ಸಮಿತಿ,ತಾಲೂಕು ವಕೀಲರ ಸಂಘ,ಹಾಗೂ ತಾಲೂಕು ಸಹಕಾರದೊಂದಿಗೆ ಕೋವಿಡ್ 19ಸೋಂಕು ಮತ್ತು ವ್ಯಾಕ್ಸಿನೇಷನ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.ಹಿರಿಯಶ್ರೇಣಿ ನ್ಯಾಯಾಲಯಧೀಶರಾದ ಕೆ.ಎ.ನಾಗೇಶರವರು ಕಾರ್ಯಕ್ರಮ ಉದ್ಘಾಟಿಸಿದರು,ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ, ಉಪಾಧ್ಯಕ್ಷ ಪಾಪನಾಯಕ,ಹಿರಿಯ ಮಹಿಳಾ ನ್ಯಾಯವಾದಿ ಕೆ.ಹೆಚ್.ಎಮ್.ಶೈಲಜಮ್ಮ ಸೇರಿದಂತೆ ತಾಲೂಕು ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು ಪ್ರಮುಖರು ಹಾಗೂ ಹಿರಿಯ ವಕೀಲರು ವೇದಿಕೆಯಲ್ಲಿದ್ದರು.

ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ವಕೀಲರು,ನ್ಯಾಯಾಲಯದ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.ವಕೀಲರ ಸಂಘದ ಸದಸ್ಯರು ಮತ್ತಿತರರು ಲಸಿಕೆಯನ್ನ ಪಡೆದರು.ವಕೀಲರಾದ ಪರಸಪ್ಪ ಸ್ವಾಗತಿಸಿದರು,
ವಿರುಪಾಕ್ಷಪ್ಪ ನಿರೂಪಿಸಿದರು.
ಜಿ.ಎಮ್.ಮಲ್ಲಿಕಾರ್ಜುನಸ್ವಾಮಿ ವಂದಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
