;

ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಯುವ ಸೇನೆ (ರೀ) ರವರ ವತಿಯಿಂದ 130 ನೇ ಜನ್ಮದಿನಾಚರಣೆ…!!!

ವರದಿ. ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ

ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಯುವ ಸೇನೆ (ರೀ) ರವರ ವತಿಯಿಂದ 130 ನೇ ಜನ್ಮದಿನಾಚರಣೆ

ಏ14:- ಶಿಡ್ಲಘಟ್ಟ ತಾಲ್ಲೂಕಿನ ಮಾದೇನಹಳ್ಳಿ ಗ್ರಾಮ ದಲ್ಲಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ರವರ 130 ನೇ ಜನ್ಮದಿನಾಚರಣೆಯನ್ನು ಕೇಕ್ ಕಟ್ ಮಾಡುವ ಮುಖೇನ ಆಚರಿಸಲಾಯಿತು ಈ ಸಂದರ್ಭದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಯಲ್ಲಿ ಪಾಲ್ಗೊಂಡಿದ್ದವರಿಗೆ  ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನ ಮತ್ತು ಸಮಾಧಾನಕರ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಶ್ರೀಮತಿ ರಂಗಮ್ಮ ,ದ್ವಿತೀಯ ಬಹುಮಾನ ಕುಮಾರಿ ಇಂದ್ರಜ ಹಾಗೂ ತೃತೀಯ ಬಹುಮಾನವನ್ನು  ಶ್ರೀಮತಿ ಮಂಜುಳಮ್ಮ ನವರು ಪಡೆದರು ,ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಸದಸ್ಯರಾದ ಎಂ ಪಿ ರವಿ ರವರು ಮಾತನಾಡಿ ಅಂಬೇಡ್ಕರ್ ರವರ ನಡೆದುಬಂದ ಹಾದಿ ಅವರ ಜೀವನ ಚರಿತ್ರೆ ವಿವರಿಸಿ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ತಿಳಿಸಿ ಅರಿವು ಮೂಡಿಸಿದ್ದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ದೇವರೆಡ್ಡಿ ,ಈರಪ್ಪ, ಮಂಜುನಾಥ,ತಿಮ್ಮಯ್ಯ, ನರಸಿಂಹಪ್ಪ ,ವೆಂಕಟಸುಬ್ಬರೆಡ್ಡಿ ,ಶಿವರೆಡ್ಡಿ ,ನರಸಿಂಹಪ್ಪ ,ಶಿವಶಂಕರ,ನಾರಾಯಣಪ್ಪ ಮುಂತಾದವರು ಉಪಸ್ಥಿತರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;