ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರರು

ದಿನಾಂಕ 14/04/2021 ರಂದು *ಹರಪನಹಳ್ಳಿ* ತಾಲೂಕಿನ *ಹಿರೇಮೇಗಳಗೆರೆ* ಗ್ರಾಮದಲ್ಲಿ *ಅಂಬೇಡ್ಕರ್ ಜಯಂತಿಯನ್ನು* ವಿಜೃಂಭಣೆಯಿಂದ ಆಚರಿಸಿದರು. *ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್* ಅಧ್ಯಕ್ಷರು ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಮಾಧ್ಯಮ ವಿಶ್ಲೇಷಕರು ಕೆಪಿಸಿಸಿ ಬಳ್ಳಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು . ಅತಂತ್ಯ ಕೆಳಪದರಗಳ ಸಮುದಾಯದಿಂದ ಹೊರಹೊಮ್ಮಿದ ಈ ಬೆಳಕು ಅಧ್ಯಯನ , ಶಿಕ್ಷಣ ಹೋರಾಟಗಳ ಮುಖಾಂತರ ಸಮಾಜದಲ್ಲಿ, ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮದೇ ಆದ ವ್ಯಕ್ತಿತ್ವ ಛಾಪು ಮೂಡಿಸಿ ಭಾರತದ ಸಂವಿಧಾನಕ್ಕೆ ಅಡಿಪಾಯ ಇಟ್ಟವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಗೌರವ ಸಲ್ಲಿಸಲಾಯಿತು . ಬಾಬಾಸಾಹೇಬ್ ಅಂಬೇಡ್ಕರ ಅವರ ಆದರ್ಶಗಳನ್ನು ವೈಯುಕ್ತಿಕ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು , ಆರೋಗ್ಯ , ಶೈಕ್ಷಣಿಕವಾಗಿ ಆದ್ಯತೆ ನೀಡಬೇಕು, ಸರಕಾರದ ಯೋಜನೆಗಳನ್ನು ಯುವಕರು ಸದುಪಯೋಗ ಪಡಿಸಿಕೊಂಡು ಶಾಲಾ ಕಾಲೇಜುಗಳ ಮೆಟ್ಟಲೇರಬೇಕು , ಸಮಾಜದ ಅಭಿವೃದ್ಧಿಗೆ ಕಂಕಣಬದ್ಧರಾಗಿರಬೇಕೆಂದು ಕರೆ ಕೊಟ್ಟರು . ಗ್ರಾಮದ ಮುಖಂಡರು , ಮಹಿಳೆಯರು , ಯುವಕರು ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
