;

ಒಂದು ದಿನದ ಶಾಲಾ ಸಿದ್ಧಿ ಅನುಷ್ಠಾನ ಕಾರ್ಯಗಾರ…!!!

 

ಒಂದು ದಿನದ ಶಾಲಾ ಸಿದ್ಧಿ ಅನುಷ್ಠಾನ ಕಾರ್ಯಗಾರವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮಯಲ್ಲಿ ನಡೆದ ಹೊಸಹಳ್ಳಿ ವಲಯದ 8 ಸಿ.ಆರ್ ಸಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಗುರುಗಳಿಗೆ ಒಂದು ದಿನದ ಶಾಲಾ ಸಿದ್ಧಿ ಅನುಷ್ಠಾನ ಕಾರ್ಯಗಾರವನ್ನು ವೈಭವ ಆಂಗ್ಲ ಮಾಧ್ಯಮ ಶಾಲೆ ಹೊಸಹಳ್ಳಿಯಲ್ಲಿ ನಡೆಸಿಕೊಡಲಾಯಿತು.

ಶಾಲಾ ಸಿದ್ಧಿ ಅನುಷ್ಠಾನ ಕಾರ್ಯಕ್ರಮವು ರಾಷ್ಟ್ರ ಹಂತದ ಕಾರ್ಯಕ್ರಮವಾಗಿದ್ದು ಸಮಗ್ರ ಶಿಕ್ಷಣ ಹಾಗೂ ಮೌಲ್ಯಾಂಕ ದ ಅಡಿಯಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮ ಶೈಕ್ಷಣಿಕ ಹಾಗೂ ಶಾಲಾ ಸುಧಾರಣೆಯ ಪ್ರಮುಖ ಗುರಿಯಾಗಿದ್ದು. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದಿನಾಂಕ 09 /04 /2021 ರಂದು 22/04 /2021ರ ತನಕ ನಡೆಯುವುದು
ಶಾಲಾ ಮೌಲ್ಯಮಾಪನವನ್ನು ಸಾಧನೆಯಾಗಿ ಬಳಸಿ ಶಾಲಾ ಸುಧಾರಣೆಯನ್ನು ಗುರಿಯನ್ನಾಗಿ ಇಟ್ಟುಕೊಂಡು ಎಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜು. ಪ್ರೌಢಶಾಲೆ. ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನ ಮಾಡುವ ಗುರಿಯೇ ಶಾಲಾಸಿದ್ಧಿ ಕಾರ್ಯವಾಗಿದೆ.
ಶಾಲಾ-ಕಾಲೇಜುಗಳಲ್ಲಿ ಸಾಮರ್ಥ್ಯಗಳ ಅಭಿವೃದ್ಧಿ ಯೋಜಿತ ವಾಗಿ ಅವುಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು .ಎಂದು ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ್ ಮತ್ತು ಮಹೇಶ್ ಇವರುಗಳು ಮಾಹಿತಿಯನ್ನು ಮುಖ್ಯಗುರುಗಳಿಗೆ ಹಂಚಿಕೊಂಡರು. ಈ ಕಾರ್ಯಕ್ರಮದ ಪ್ರಾಸ್ತವಿಕವಾಗಿ ಶ್ರೀ ಮಂಜುನಾಥ ಬಿ ಆರ್ ಪಿ ಕೂಡ್ಲಿಗಿ ಅವರು ಕಾರ್ಯಕ್ರಮವು 2018-2019 ರಲ್ಲಿ ರಾಜ್ಯದ ಆಯ್ದ ಶಾಲೆಗಳಲ್ಲಿ ಅನುಷ್ಠಾನಗೊಳಿಸಿದ್ದು ಅದರ ಮುಂದುವರಿದ ಭಾಗವಾಗಿ 2019-2020 ರಲ್ಲಿ ಅನುಷ್ಠಾನಗೊಳಿಸ ಬೇಕಾಗಿತ್ತು. ಆದರೆ ಅನುಷ್ಠಾನಗೊಳಿಸಲು ಆಗಲಿಲ್ಲ 2020 -2021 ನೇ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು ಸಮುದಾಯದವರು ಶಿಕ್ಷಕರು ಮಕ್ಕಳು ಮೌಲ್ಯಮಾಪನ ಪ್ರಮುಖ ಪಾತ್ರವನ್ನು ವಹಿಸಿದೆ. ಶಾಲೆಯ ಮೂಲಭೂತ ಸೌಕರ್ಯಗಳ ಜೊತೆ ಜೊತೆಯಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಅತಿಮುಖ್ಯ ಜವಾಬ್ದಾರಿಯಾಗಿದ್ದು .ರಾಷ್ಟ್ರೀಯ ಮಾನವ ಸಂಪನ್ಮೂಲ ಇಲಾಖೆಯವರು ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು .ಕಾರ್ಯಕ್ರಮದಲ್ಲಿ ಪಿ.ಆರ್.ಪಿ ಗಳಾದ ತಳವಾರ್ ಶರಣಪ್ಪ ಹಾಗೂ ಸಿ.ಆರ್.ಪಿ ಗಳಾದ ಲೋಕೇಶ್, ಜಿ ಟಿ ಸಿದ್ದೇಶ್ವರ ,ಮೋಹನ್ ಕುಮಾರ್, ಶ್ರೀಮತಿ ವಾಣಿ ಮೇಡಂ . ಸಂಪನ್ಮೂಲ ವ್ಯಕ್ತಿಯಾದ ಸಂದೀಪ್ ಸಿಆರ್ಪಿ ಮಾಹಿತಿಯನ್ನು ಹಂಚಿಕೊಂಡರು
ಹೊಸಹಳ್ಳಿ ಸಿರ್ಸಿ ಆಲೂರು ಸಿಆರ್ಸಿ ಕುಲುಮೆ ಹಟ್ಟಿ ಎಂಬಿ ಅಯ್ಯನಹಳ್ಳಿ ಚಿಕ್ಕಜೋಗಿಹಳ್ಳಿ ಹುರುಳಿಹಾಳು ಹಾಗೂ ಚಿರತಗುಂಡು ಸಿಆರ್ಸಿಆರ್ ಎಲ್ಲ ಮುಖ್ಯಗುರುಗಳು ಹಾಗೂ ಗುರುಮಾತೆ ಇತರರು ಭಾಗವಹಿಸಿದ್ದರು.
ವರದಿ ಕೆ.ಎಸ್. ವೀರೇಶ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;