ವರದಿ. ಮಂಜುನಾಥ್, ಎಚ್

ಚಿತ್ರದುರ್ಗ:ಮೊಳಕಾಲ್ಮುರು ಕೋವಿಡ್-19 ಸೋಂಕಿತರು ಹಾಗೂ ಗರ್ಭಿಣಿಯರ ಅನುಕೂಲಕ್ಕಾಗಿ ಜಿಲ್ಲೆಯ ನಾನಾ ಆಸ್ಪತ್ರೆಗಳಿಗೆ ಒಟ್ಟು ಎಂಟು ಹೊಸ ಆ್ಯಂಬುಲೆನ್ಸ್ ಖರೀದಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರ
ಆವರಣದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಆ್ಯಂಬುಲೆನ್ಸ್ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 1.90 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿರುವ ಈ ಎಂಟು ಆ್ಯಂಬುಲೆನ್ಸ್‌ಗಳನ್ನು ಮೊಳಕಾಲ್ಮುರು ಪಟ್ಟಣ, ರಾಂಪುರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಲಾ 1 ವಾಹನ ಹಾಗೂ ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ ತಾಲೂಕುಗಳಿಗೆ ಮತ್ತು ಧರ್ಮಪುರ, ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ವಾಹನಗಳು ತಮ್ಮ ಸೇವೆ ನೀಡಲಿವೆ ಎಂದರು. ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಅನೇಕ ವರ್ಷಗಳಿಂದಲೂ ಈ ಭಾಗದಲ್ಲಿ ಆ್ಯಂಬುಲೆನ್ಸ್ ಕೊರತೆ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಈ ವಾಹನಗಳನ್ನು ಖರೀದಿಸಲಾಗಿದೆ. ಈ ವಾಹನಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ಸಾರ್ವಜನಿಕರಿಗೆ ಸೇವೆ ಒದಗಿಸಲಿವೆ ಎಂದರು. ಡಿಎಚ್‌ಒ ಡಾ. ಪಾಲಾಕ್ಷ, ಟಿಎಚ್‌ಒ ಡಾ.ಸುಧಾ, ವೈದ್ಯಾಧಿಕಾರಿ ಡಾ. ಅಭಿನವ್, ಡಾ.ಮಂಜುನಾಥ್, ಪಪಂ ಅಧ್ಯಕ್ಷ ಪಿ.ಲಕ್ಷ್ಮಣ್, ಉಪಾಧ್ಯಕ್ಷೆ ಶುಭ, ಸದಸ್ಯರಾದ ಮಂಜಣ್ಣ ಎನ್, ಮಂಡಲ ಅಧ್ಯಕ್ಷ ಡಾಕ್ಟರ್ ಪಿ.ಎಂ ಮಂಜುನಾಥ್, ಮುಖಂಡರಾದ ಹಾನಗಲ್ ಪರಮೇಶ್, ರೂಪ, ವಿಜಯ್ ಬಿ, ಸರ್ವಮಂಗಳ, ಕಿರಣ್ ಗಾಯಕವಾಡ್, ವಿನಯ್ ಇನ್ನು ಮುಂತಾದ ಬಿಜೆಪಿ ಮುಖಂಡರು ಆರೋಗ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
