ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ ರಾಂ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪೂರ್ವ ಭಾವಿ ಸಭೆ ಕರೆಯಲಾಯಿತು. ಬಾಬು ಜಗಜೀವನ ರಾಂ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಪ್ರತಿಯೊಬ್ಬ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ್ ಕೆ.ಎಸ್. ಸುರೇಶ ಹೇಳಿದರು. ಕೊರೋನಾ ಎರಡನೆ ಅಲೆವ್ಯಾಪಕವಾಗಿ ಹರಡುತ್ತಿದೆ. ಈ ಆತಂಕದ ನಡುವೆಯೂ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಜಯಂತಿಯನ್ನು ಸರ್ಕಾರದ ನಿಯಮಾವಳಿ ಪ್ರಕಾರ ಆಚರಿಸಬೇಕಿದ್ದು ಪ್ರತಿಯೊಬ್ಬರೂ ಕೊರೋನಾ ಮಾರ್ಗ ಸೂಚಿಗಳನ್ನು ಪಾಲಿಸಬೇಕು. ಮೇಲಾಧಿಕಾರಿಗಳ ಆದೇಶದಂತೆ ಈಬಾರಿ ಮೆರವಣಿಗೆ ಅವಕಾಶ ನೀಡಿಲ್ಲ. ಸಮುದಾಯದ ಮುಖಂಡರು ಸಹಕರಿಸಬೇಕು. ಕಾರ್ಯ ಕ್ರಮದಲ್ಲಿ ಸಮುದಾಯದ ಮುಖಂಡರ ಸಹಕಾರದ ಜೊತೆಗೆ ಕಡ್ಡಾಯವಾಗಿ ಇಲಾಖೆ ಅಧಿಕಾರಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಮುಖಂಡರಾದ ಎಸ್. ಜಯಣ್ಣ, ನಾಗಭೂಷಣ, ಶ್ರೀರಾಮುಲು ಆಪ್ತ ಕಾರ್ಯದರ್ಶಿ ಪಾಪಾಏಶ್, ರವಿ ಕುಮಾರ್, ಸಿದ್ದಣ್ಣ, ತಿಪ್ಪೇಸ್ವಾಮಿ, ಪತ್ರಕರ್ತ ನಾಗರಾಜ ಕಟ್ಟೆ ಸುಧಾ, ಸಿಡಿಪಿಒ ಸವಿತ, ಸಮಾಜ ಕಲ್ಯಾಧಿಕಾರಿ ಪ್ರೇಮ್ ಕುಮಾರ್, ವಾರ್ಡನ್ ಹಾಲೇಶ, ಗುರುಸಿದ್ದನಗೌಡ ಸೇರಿದಂತೆ ಇನ್ನಿತರರು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
