ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಲ್ಲಿ ಶ್ರೀ ಎನ್ ವೈ ಚೇತನ್ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿ ಇಂದು ಅಂತ್ಯವಾಯಿತು ಪ್ರಥಮ ಬಹುಮಾನವಾಗಿ ಹಾನಗಲ್ ತಂಡಕ್ಕೆ 25 ಸಾವಿರ ಮೌಲ್ಯದ ಚೆಕ್ ಹಾಗೂ ಟ್ರೋಫಿ ಅದೇ ರೀತಿ ಎರಡನೇ ತಂಡವಾಗಿ ರಾಂಪುರ 15 ಸಾವಿರ ಮೌಲ್ಯದ ಚೆಕ್ ಹಾಗೂ ಟ್ರೋಫಿ ಮ್ಯಾನ್ ಆಫ್ ದಿ ಮ್ಯಾಚ್ ಮ್ಯಾನ್ ಆಫ್ ದಿ ಸೀರೀಸ್ ತಂಡದ ಸದಸ್ಯರಿಗೆ ಟ್ರೋಫಿಗಳನ್ನು ಯುವ ನಾಯಕರಾದ ಶ್ರೀ ಎನ್ ವೈ ಚೇತನ್ ಅವರು ವಿತರಿಸಲಾಯಿತು. ಒಟ್ಟು 40 ತಂಡಗಳು ಭಾಗವಹಿಸಿದ್ದ. ಪ್ರಥಮವಾಗಿ ಹಮ್ಮಿಕೊಂಡಿದ್ದ ಈ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿ ತಂಡಗಳು ಭಾಗವಹಿಸಿರುವುದು ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಟೂರ್ನಿ ಹಮ್ಮಿಕೊಳ್ಳಲು ಸ್ಫೂರ್ತಿ ತಂದಿದೆ’ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡರಾದ ಶ್ರೀ ಎನ್ ವೈ ಚೇತನ್ ರವರು ಮಾತನಾಡಿ ಸೋಲು ನಮಗೆ ಜೀವನದ ಅನುಭವವನ್ನು ನೀಡುತ್ತದೆ ಅದೇ ರೀತಿ ಗೆಲುವು ಸಹ ನಮಗೆ ಮುಂದಿನ ದಾರಿಯಾಗಿ ಉಜ್ವಲ ಭವಿಷ್ಯ ನೀಡುತ್ತದೆ ಈ ಒಂದು ಪಂದ್ಯಾವಳಿ ಯಶಸ್ವಿಗೆ ಕಾರಣೀಭೂತರಾದ ತಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು ಎಂದು ತಿಳಿಸಿದರು ರಾಂಪುರ ಗ್ರಾಮಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಪ್ಪ, ಸದಸ್ಯರಾದ ರಹೀಂ, ಸಿದ್ದನಗೌಡ, ಕೃಷ್ಣಮೂರ್ತಿ, ಬಸವರಾಜ, ಬಿಜೆಪಿ ಮುಖಂಡರಾದ ಜಿರಳ್ಳಿ ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ಹೊನ್ನೂರಪ್ಪ, ಗೋವಿಂದಪ್ಪ, ಜಿ.ಬಿ.ಭರತ್ ಕುಮಾರ್, ಹೊನ್ನೂರಸ್ವಾಮಿ, ನರಸಿಂಹ ರೆಡ್ಡಿ, ಶಾಹಿದ್, ನೂರಿ ತಂಡದ ಪ್ರಮುಖರಾದ ಉಮೇಶ್, ಮಹಂತೇಶ್, ಅಕ್ರಮ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
