ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಗುಡೆಕೋಟೆ:ಅತಿಕ್ರಮಣ ವಾಣಿಜ್ಯ ಮಳಿಗೆ ನಿರ್ಮಾಣ- ತೆರವಿಗೆ ಗ್ರಾಮಸ್ಥರ ಆಗ್ರಹ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದಲ್ಲಿ,ಸಾರ್ವಜನಿಕ ಸ್ಥಳ ಹಾಗೂ ಶಾಲೆಯ ಆವರಣನ್ನು ದೇವಸ್ಥಾನದ ಕಮಿಟಿ ಹೆಸರಲ್ಲಿ ಅತಿಕ್ರಮಿಸಿದ್ದು.ನಿರ್ಮಾಣ ಹಂತರಲ್ಲಿರುವ ವಾಣಿಜ್ಯ ಕಟ್ಟಡ ತೆರವುಗೊಳಿಸಿ ಗುಡೇಕೊಟೆ ಗ್ರಾಮದ ಶಾಲಾವರಣವನ್ನ ರಕ್ಷಿಸಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಅಗ್ರಹಿಸಿದ್ದಾರೆ.
ಶಾಲಾವರಣಕ್ಕೆ ಹೊಂದಿಕೊಂಡಂತೆ ವಾಣಿಜ್ಯ ಮಳಿಗೆಗಳನ್ನ ನಿರ್ಮಸಲಾಗಿದ್ದು,ಶಾಲಾವರಣವು ತುಂಬಾ ಕಿರಿದಾಗಿದ್ದು ಕಾರಣ ವಾಣಿಜ್ಯ ಮಳಿಗೆಗಳನ್ನು ಶೀಘ್ರವೇ, ತೆರವುಗೊಳಿಸುಂತೆ ಸ್ಥಳೀಯ ಆಡಳಿತಕ್ಕೆ ಗ್ರಾಮಸ್ಥರು ಈ ಮೂಲಕ ಆಗ್ರಹಿಸಿದ್ದಾರೆ.ದೇವಸ್ಥಾನದ ಹೆಸರಲ್ಲಿ ಸರ್ಕಾರಿ ಹಿರಿ ಪ್ರಥಮಿಕ ಶಾಲಾವರಣವನ್ನ ಕಬಳಿಸುವ ಹುನ್ನಾರ ನಡೆದಿದೆ,ಆದರೂ ಸ್ಥಳೀಯ ಆಡಳಿತ ಕಾನೂನು ರೀತ್ಯ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳದೆ ಮೌನವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗುಡೇಕೋಟೆ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳ ಒಕ್ಕೂಟ ಆರೋಪಿಸಿದೆ.
ಕೆಲ ಸಂಘಟನೆಗಳ ಪದಾಧಿಕಾರಿಗಳು ಅದನ್ನ ಈಗ ತೆರವುಗೊಳಿಸಿ ಶಾಲಾ ಆವರಣವನ್ನ ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಹೋರಾಟಗಾರರು ಅಕ್ರೋಶ ವ್ಯೆಕ್ತಪಡಿಸಿದ್ದಾರೆ.
ಗುಡೇಕೋಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಲಾಗಿದೆ.ಇವುಳಿಗೆ ಹೊಂದಿಕೊಂಡಿರುವ ಜಾಗದಲ್ಲಿ ಈ ಹಿಂದೆ ಶಿಶುವಿಹಾರ ಕೇಂದ್ರ ಇತ್ತು, ಶಾಲಾವರಣದಲ್ಲಿಯೇ ದೇವಸ್ಥಾನದ ಟ್ರಸ್ಟ್ ಹೆಸರಲ್ಲಿ ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಲಾಗಿದೆ. ಶಾಲಾವರಣ ಹಾಗೂ ಗ್ರಾಪಂಗೆ ಸೇರಿದ ಸಾರ್ವಜನಿಕ ಸ್ಥಳವನ್ನು ಅತಿಕ್ರಮಣ ಮಾಡಲಾಗಿದೆ,ಕಾರಣ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ಧೇಶಕರು ಶೀಘ್ರವೇ ಸ್ಥಳ ಪರಿಶೀಲಿಸಿ,ವಾಣಿಜ್ಯ ಮಳಿಗೆಗಳ ತೆರವಿಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಶಾಲೆಯ ಹಳೇ ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯಿಸಿದೆ.ಶಾಲಾ ಮೈದಾನ ಸಾರ್ವಜನಿಕರ ಸ್ವತ್ತಾಗಿದೆ ಯಾವುದೇ ಕೋಮಿಗೆ ಧಾರ್ಮಿಕ ಕೇಂದ್ರಕ್ಕೆ ಸೀಮಿತವಾದದ್ದಲ್ಲ, ಶೈಕ್ಷಣಿಕ ಪ್ರಗತಿಗೆ ಪೂರಕವಾದ ಮನೋಧರ್ಮ ಪ್ರತಿಯೊಬ್ಬ ಅಧಿಕಾರಿ ಹಾಗೂ ನಾಗರೀಕರು ಹೊಂದಬೇಕಾಗಿದೆ.ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಮಳಿಗೆಗಳನ್ನ ಶೀಘ್ರವೇ ತೆರವು ಗೊಳಿಸಿ,ಮಕ್ಕಳಿಗೆ ಶಾಲಾ ಆವರಣವನ್ನ ಮುಕ್ತವಾಗಿಸಬೇಕಿದೆ ಎಂದು ಒಕ್ಕೂಟ ತಾಲೂಕಾಡಳಿತಕ್ಕೆ ಒತ್ತಾಯಿಸಿದೆ.
*ಭ್ರಷ್ಠರ ಬಣ್ಣ ಬಯಲು- ಎಚ್ಚರಿಕೆ*-
ನಿರ್ಲಕ್ಷ್ಯ ತೋರಿದ್ದಲ್ಲಿ ಸಂಘ ಸಂಸ್ಥೆಗಳ ಸಹಯೋಗ ಹಾಗೂ ಜನಪ್ರತಿನಿಧಿಗಳ ಸಹಯೋಗದಲ್ಲಿ,ಗ್ರಾಪಂ ಹಾಗೂ ತಾಪಂ ಮತ್ತು ತಾಲೂಕು ಕಚೇರಿ ಮುಂದೆ ಹಂತ ಹಂತವಾಗಿ ಹೋರಾಟ ಮಾಡಲಾಗುವುದು.
ಸಾರ್ವಜನಿಕರ ಆಸ್ಥಿಯನ್ನ ಕಬಳಿಸುವ ಹಾಗೂ
ಸದಾ ಅಕ್ರಮಗಳನ್ನೇ ಮಾಡುವ ಅಕ್ರಮ ಕೋರರಿಗೆ ಬುದ್ಧಿ ಕಲಿಸಲಾಗುವುದು, ಅಂತಹವರಿಗರ ಸಹಕರಿಸುವ ಭ್ರಷ್ಠ ಅಧಿಕಾರಿಗಳ ಬಣ್ಣ ಬಯಲು ಮಾಡಲಾಗುವುದು.
ಗುಡೇಕೋಟೆ ಹಾಗೂ ಸುತ್ತ ಮುತ್ತ ಅಕ್ರಮಗಳಲ್ಲಿ ತೊಡಗಿರುವ ಅಕ್ರಮ ಕೋರರ,ನಿಜಬಣ್ಣ ಮಾಧ್ಯಮಗಳ ಮುಂದೆ ಸಾಕ್ಷ್ಯಧಾರಗಳೊಂದಿಗೆ ಬಯಲು ಮಾಡಲಾಗುವುದು, ಅಕ್ರಮ ಕೋರರಿಗೆ ಸಹಕರಿಸುವ ಭ್ರಷ್ಠ ಅಧಿಕಾರಿಗಳ ವಿರುದ್ಧ ಕಾನೂನು ಹೋರಟ ಹಮ್ಮಿಕೊಳ್ಳಲಾಗುವುದು ಎಂದು.
ಶಾಲಾ ಹೋರಾಟಗಾರರು ಹಾಗೂ ಹಳೇ ವಿದ್ಯಾರ್ಥಿಗಳ ಒಕ್ಕೂಟ ಈ ಮೂಲಕ ಎಚ್ಚರಿಸಿದೆ. ಹೋರಾಟಗಾರರಾದ ಕೆ.ಸಿ.ತಿಪ್ಪೇಸ್ವಾಮಿ,ವಿರುಪಾಕ್ಷಪ್ಪ,ಮಾಜಿ ಗ್ರಾಪಂ ಸದಸ್ಯ ಮರುಳಸಿದ್ದಪ್ಪ,ಪೂಜಾರಿ ಶಿವಕುಮಾರ,ಈಡಿಗರ ವೆಂಕಟೇಶ,ಪೇಂಟ್ ತಿಪ್ಪೇಸ್ವಾಮಿ,ಖಾಸೀಂ ಫಿರಾಸಾಬ್,ಸೈಯದ್ ಖಲಾಂದರ್,ಬಸವರಾಜ,ಮಹಾಂತೇಶ, ಪಾಲಯ್ಯ,ಸೈಯದ್ ಭಾಷಾ, ನೌಷಾದ್,ಮಂಜುನಾಥ, ಕೊಟ್ರೇಶಪ್ಪ,ಶ್ರೀನಿವಾಸ, ಕೆ.ಟಿ.ನಾಗರಾಜ,ಕಾಮೇಶ,ಷಫಿವುಲ್ಲಾ,ಸೇಪುಲ್ಲಾ ಮುಂತಾದವರು ಉಪಸ್ಥಿತರಿದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
