ವರದಿ. ದುಗ್ಗಪ್ಪ ಸಿಂಧನೂರು

ಶ್ರೀ ಗುರು ಪಂಚಾಕ್ಷರಿ ಗವಾಯಿಗಳ ಸಂಗೀತ ಸೇವಾ ಸಮಿತಿ (ರಿ) ವತಿಯಿಂದ ಶ್ರೀ ಪಂಚಾಕ್ಷರಿ ಸಂಗೀತ ಸಲಕರಣೆ ಕೇಂದ್ರ ಸುಕಾಲಪೇಟೆ ಸಿಂಧನೂರಿನಲ್ಲಿ “ಸಂಗೀತ ಕಾರ್ಯಕ್ರಮ”ಹಮ್ಮಿಕೊಳ್ಳಲಾಗಿತ್ತು .ಪಂಡಿತ ಡಾಕ್ಟರ್ ಪುಟ್ಟರಾಜ ಗವಾಯಿಗಳು ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹು ರೂಪವಾಗಿ ಅಪಾರ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿ. ಅಧ್ಯಾತ್ಮಿಕ ಸಾಧನೆ ,ಸಂಗೀತ ಸಿದ್ದಿ ,ಅಂದ ಅನಾಥ ಮಕ್ಕಳ ಪೋಷಣೆ ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನ ಪ್ರಸಾರ ಇಂತಹ ಹಲವಾರು ಕ್ಷೇತ್ರಗಳಲ್ಲಿ ನಿತ್ಯವೂ ತಮ್ಮ ಸಾರಥ್ಯದಲ್ಲಿ ಸಮರ್ಥವಾಗಿ ನಡೆಸಿಕೊಂಡು ಬರುವುದರೊಂದಿಗೆ ಬಹುಭಾಷಾ ಪಂಡಿತರಾಗಿ,ವಾದಕರಾಗಿ , ನಾಟಕಕಾರರಾಗಿ ಕವಿಗಳಾಗಿ ವಚನಕಾರರಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ಗಳನ್ನು ನೀಡಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಜಂಬಣ್ಣ ಹಸ್ಮಕಲ್ ಜನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಹಸಮಕಲ್ .ಶ್ರೀ ಇಸ್ಮಾಯಿಲ್ ಸಾಬ್ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ರಂಗಭೂಮಿ ಕಲಾವಿದರು ಸಿಂಧನೂರ. ಶ್ರೀ ಕು ಪುಟ್ಟರಾಜ ಮೋತಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ರಾಯಚೂರ್ ಯುವಜನೋತ್ಸವ ಪ್ರಥಮಸ್ಥಾನ 2021 ಈ ಮೂರು ಜನ ಕಲಾವಿದರಿಗೆ ಸನ್ಮಾನ ಮಾಡಿ ಗೌರವಿಸಿದರು ಈ ಸಂದರ್ಭದಲ್ಲಿ ಶ್ರೀ ಬಸವರಾಜ್ ಮೋತಿ ಅಧ್ಯಕ್ಷರು ಶ್ರೀ ಮತ್ತೆ ಮಲ್ಲಮ್ಮ ಬಸವರಾಜ್ ಮೋತಿ ಉಪಾಧ್ಯಕ್ಷರು ಆಂಜನೇಯ ಮೋತಿ ರಾಚಯ್ಯ ಸ್ವಾಮಿ ಮಧುರಿ ಶರಣಕುಮಾರ್ ಶ್ರೀಮತಿ ಲಲಿತಾ ಲಕ್ಷ್ಮಿ ಆಂಜನೇಯ ಪುಟ್ಟರಾಜ್ ಭಾಗವಹಿಸಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
