ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಪತ್ರಕರ್ತ ಅಲೀಮ್ ಅಗಲಿಕೆಗೆ ಕೂಡ್ಲಿಗಿ ಪತ್ರಕರ್ತರಿಂದ ಸಂತಾಪ ವ್ಯೆಕ್ತ*-ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಪ್ರಜಾಪ್ರಗತಿ ದಿನ ಪತ್ರಿಕೆಯ ವರದಿಗಾರ ಅಲೀಮ್,ಕ್ಯಾನ್ಸರ್ ಎಂಬ ಹೆಮ್ಮಾರಿಗೆ ಬಲಿಯಾಗಿದ್ದು ನಿಜಕ್ಕೂ ದುರಂತವಾಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಬೆಳ್ಳಗಟ್ಟೆ ಕೃಷ್ಣಪ್ಪ ಸಂತಾಪ ವ್ಯಕ್ತ ಪಡಿಸಿದರು.ಅವರು ಸಂತಾಪ ಶ್ರದ್ಧಾಂಜಲಿ ಅರ್ಪಿಸಿ ನುಡಿನ ಸಲ್ಲಿಸಿದರು,35 ವರ್ಷ ಪ್ರಾಯದ ಅಲೀಮ್ ತನ್ನ ವಯಸ್ಸಾದ ತಾಯಿ,ಮಡದಿ ಹಾಗೂ ಮುದ್ದಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಅಗಲಿದ್ದಾರೆ.ವೃತ್ತಿಯಲ್ಲಿ ಕುಶಲಕರ್ಮಿಯಾಗಿ ಮೆಕಾನಿಕ್ ಆಗಿದ್ದುಕೊಂಡು,ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಯುವ ಚೇತನ ಇಲ್ಲವಾಗಿರೋದು ತುಂಬಾ ನೋವುಂಟಾಗಿದೆ.ಅವರು ಸ್ಪಾನರ್ ನಿಂದ ಕೆಟ್ಟುಹೋದ ವಾಹನ ರಿಪೇರಿ ಮಾಡುತ್ತಿದ್ದರು,ಮಾತ್ರವಲ್ಲ
ಪೆನ್ನು ಬಳಸಿ ಲೇಖನದ ಮೂಲಕ ಜಡ್ಡುಗಟ್ಟಿದ ಸಮಾಜವನ್ನು ತಿದ್ದುವಲ್ಲಿ ತೊಡಗಿಸಿಕೊಂಡಿದ್ದರು. ಅವರು ಸದಾ ನೊಂದವರ ಪಾಲಿಗೆ ಆಸರೆಯಾಗುವಂತ ಸೇವಾ ಮನೋಭಾವ ಹೊಂದಿದ್ದರು,ಅವರ ಅಗಲಿಕೆಯ ನೋವನ್ನ ಭರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಅಧ್ಯಕ್ಷ ಬೆಳ್ಳಗಟ್ಟೆ ಕೃಷ್ಣಪ್ಪ ನುಡಿನಮನ ಸಲ್ಲಿಸಿದರು.ಸಂತಾಪ ಸಭೆಯಲ್ಲಿ
ಹಿರಿಯ ಪತ್ರಕರ್ತ ಹಾಗೂ ವಕೀಲರಾದ ಎಲ್.ಎಲ್.ಬಷೀರ್ ಅಗಮ್ಮದ್, ಬಂಡ್ರಿ ಗೋಪಾಲಪ್ಪ, ವಿ.ಜಿ.ವೃಷಭೇಂದ್ರ,ಬಡಿಗೇರ ನಾಗರಾಜ,ಬಾಣದ ಶಿವಮೂರ್ತಿ,ಕೆ.ಎಸ್.ಮುರುಳೀಧರ ಶೆಟ್ರು,ಎಲೆ.ನಾಗರಾಜ,ಹೆಚ್.ವೀರಣ್ಣ,ಟಿ.ಇಬ್ರಾಹೀಂಖಲೀಲ್,ಅಂಬಳಿ ನಾಗರಾಜ, ಅಂಬಳಿ ಇಬ್ರಾಹೀಂ ಖಲೀಲ್,ಗುನ್ನಿ ರಾಘವೇಂದ್ರ,ಡಿ.ಎಮ್.ಈಶ್ವರಪ್ಪ,ಜೂಗಲರ ಸೊಲ್ಲೇಶ,ರಾಜಶೇಖರ, ನಂದೀಶ ನಾಯಕ,ಸೋವೇನಹಳ್ಳಿ ಈಶ್ವರಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
