ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರ

ರಕ್ಷಣೆಯಿಲ್ಲದ..ಆರಕ್ಷಕರು, ರಾಕ್ಷಸರಾದರು.!?ಸಾರ್ವಜನಿಕರು.*
ಹೀಗೆ ಮೊಬೈಲ್ನಲ್ಲಿ ವಾಟ್ಸಪ್ ಸ್ಟೇಟಸ್ ನೋಡುವಾಗ ಜನಸಂದಣಿಯ ದೊಡ್ಡ ಗುಂಪು ಒಬ್ಬ ಟ್ರಾಫಿಕ್ ಪೊಲೀಸ್ ಮೇಲೆ ದಾಳಿ ಮಾಡಿ ಚೆನ್ನಾಗಿ ಹೊಡೆಯುತ್ತಿದ್ದದ್ದನ್ನು ಕಂಡ ಸಾವಿರಾರು ಜನ ಹಾಕ್ಬೇಕು ಅವರಿಗೆ ಹಾಗೆ ಆಗಬೇಕು, ಲಂಚ ತಿಂತಾರೆ ನನ್ ಮಕ್ಕಳು, ಅಂತ ತುಂಬಾ ಜನ ಬೈದುಕೊಂಡಿರಿ ಅಲ್ವಾ. ? ಆರಕ್ಷಕರಿಗೆ ರಕ್ಷಣೆ ಇಲ್ಲದ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಅಂತಹ ಒಂದು ಕ್ಷಣ ನೆನಪಿಸಿಕೊಳ್ಳಲು ಸಾಧ್ಯವಾಗದ ಈ ಮನಸ್ಸಿಗೆ ಸಾವಿರಾರು ಜನರ ರಕ್ಷಣೆಯಲ್ಲಿ ಆರಕ್ಷಕರ ಪಾತ್ರವೇನೆಂದು ಪ್ರಶ್ನಿಸುತ್ತದೆ. ಅಷ್ಟಕ್ಕೂ ಅರಕ್ಷಕರ ಮೇಲೆ ಸಾರ್ವಜನಿಕರು ದಾಳಿಮಾಡಲು ಕಾರಣವಾದರೂ ಏನು? ಎಂದು ಯೋಚಿಸುವಾಗ ವೇಗವಾಗಿ ಹೋಗುತ್ತಿದ್ದಂತಹ ಬೈ ಕಂಡುಹಿಡಿಯಲು ಹೋಗಿ ಆ ಬೈಕ್ ಅಪಘಾತಕ್ಕೆ ತುತ್ತಾದ ಕಾರಣ ಜನರೆಲ್ಲಾ ಪೊಲೀಸರ ಮೇಲೆ ದಾಳಿ ಮಾಡಿ ಚೆನ್ನಾಗಿ ಹೊಡೆದಿದ್ದಾರೆ. ಇತ್ತೀಚಿನ ಯುವಜನತೆ ಓವರ್ ರೈಡಿಂಗ್, ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುವುದು, ಒನ್ ವೆನಲ್ಲಿ ಡ್ರೈವ್ ಮಾಡಿ ಫೈನ್ ಕಟ್ಟುವುದು. ಎಲ್ಲಾ ಕಾಮನ್ ಆದ್ರೂ ಯುವಜನರ ಅಸಹಾಯಕತೆಯೇ ಸರಿ, ಯಾಕೆಂದರೆ ಇದು ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಹೌದು ಇದೇರೀತಿಯ ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿಯ ಬೈಕ್ ಹಿಡಿಯಲು ಪೊಲೀಸ್ ಅವರನ್ನು ಹಿಂಬಾಲಿಸಿ ರಬಹುದು ಅಥವಾ ಪೊಲೀಸ್ ಕಂಪ್ಲೇಂಟ್ ಬಂದಂತಹ ಯಾವುದೋ ಕೇಸನ್ನು ಇನ್ವೆಸ್ಟಿಗೇಶನ್ ಮಾಡಲು ಬೈಕನ್ನು ಹಿಂಬಾಲಿಸಿರಬಹುದು. ಅದು ಅವರ ಕರ್ತವ್ಯವೂ ಹೌದು ಅಲ್ಲವಾ? ಎಷ್ಟು ಸಮಸ್ಯೆಗಳಿಗೆ ಪೋಲಿಸ್, ಪೊಲೀಸ್ ಕಂಪ್ಲೆಂಟ್, ಕ್ರೈಂ ಎಂದು ಬಡಬಡಿಸುವ ಸಾರ್ವಜನಿಕರಿಗೆ ಆ ಸಮಯದಲ್ಲಿ ಪೋಲಿಸ್ ಬಗ್ಗೆ ತಪ್ಪು ತಿಳುವಳಿಕೆ ಮಾಡಿಕೊಂಡು ಹೊಡೆದದ್ದು ಯಾಕೆ?, ಟ್ರಾಫಿಕ್ ಪೊಲೀಸ್, ಸಿಟಿ ಪೊಲೀಸ್ ಅಂದ್ರೆ ಜನರಲ್ಲಿ ಇರುವಂತಹ ತಪ್ಪು ಕಲ್ಪನೆ ದುಡ್ಡು ತಿಂತಾರೆ, ಅವರಿಗೇನು ಕಡಿಮೆ?, ಲಂಚ ತಿಂತಾರೆ, ಈ ರೀತಿಯ ಉಡಾಫೆಗಳು ಅಲ್ಲವೇ? ಓದುಗರೆ ಒಂದು ನಿಮಿಷ ಸುಮ್ಮನೆ ಯೋಚಿಸಿ ಒಂದು ಸಿಟಿಯ ಹೆಚ್ಚು ಟ್ರಾಫಿಕ್, ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಬಿಸಿಲು-ಮಳೆ, ದೊಡ್ಡ ದೊಡ್ಡ ಆಫೀಸರ್ ಗಳ ಒತ್ತಡ ಏನೇ ಇದ್ದರೂ ಎಲ್ಲವನ್ನು ಸಹಿಸಿ ಜೊತೆಗೆ “ಸಾರ್ವಜನಿಕರ ಹಿತಾಸಕ್ತಿಗೆ ದುಡಿಯುವ ಜೀವಗಳೇ ಅರಕ್ಷಕರು” ಗಂಡ ಹೆಂಡತಿ ಜಗಳದಿಂದ ಹಿಡಿದು, ನನ್ನ ಮಗ ಕಾಣಿಸ್ತಿಲ್ಲ, ನನ್ನ ಮಗಳು ಕಾಣುತ್ತಿಲ್ಲ, ಅನ್ನುವ ಭಯದಿಂದ ಹಿಡಿದು, ನನ್ನಪ್ಪನ ಹುಡುಕಿಕೊಡಿ ಅನ್ನುವ ಬರವಸೆ ತನಕನೂ ಪೊಲೀಸ್ ಮೇಲೆ ಇರುವ ಗೌರವ, ಪೋಲಿಸ್ ಮೇಲೆ ಇರುವ ನಂಬಿಕೆ, ಎಲ್ಲಿಗೆ ಹೋಗಿದೆ? “ಸಮಾಜದ ರಕ್ಷಣೆಗಾಗಿ ಬಂದಂತಹ” ಆರಕ್ಷಕರಿಗೆ ಸಮಾಜದಿಂದಲೇ ಆಪಾಯ ಆದರೆ ಸಮಾಜದಲ್ಲಿ ಯಾರಿಂದ ಯಾರಿಗೆ ರಕ್ಷಣೆ ದೊರೆಯುತ್ತದೆ. ಸಾರ್ವಜನಿಕರ ರಕ್ಷಣೆ ಹಿತದೃಷ್ಟಿ ಗಳಿಗಾಗಿ ಹಗಲಿರುಳು ದುಡಿಯುವ ಕೈಗಳಿಗೆ ಸಾರ್ವಜನಿಕರಿಂದಲೇ ಅಪಾಯ ಅಂದರೆ ಒಂದೊಮ್ಮೆ ಯೋಚಿಸಿ. ನಮ್ಮ ಸಮಾಜ ಯಾವ ಹಂತಕ್ಕೆ ಬಂದು ನಿಂತಿದೆ. ತಾಳ್ಮೆಯಿಲ್ಲದ ಪಾಪಿಗಳಿಗೆ ಶ್ರಮಜೀವಿಗಳು ಸಿಲುಕಿಕೊಂಡು ಧರ್ಮದೇಟು ತಿನ್ನುವಾಗ ಯೋಚಿಸಿ. ಕರ್ತವ್ಯ ನಿಷ್ಠೆಗೆ ಬೆಲೆ ಇಲ್ಲವೇ? “ಪೋಲಿಸ್ ಅಂದರೆ ಭಯ ಅಲ್ಲ ಭರವಸೆ”. ಹಾಗೆಯೇ “ಪೊಲೀಸ್ ಎಂದರೆ ಗುಲಾಮರಲ್ಲ, ಗುಂಡೆದೆಯ ಸಾಹಸಿಗರು.” ಅರಿತು ಕಲಿತು ಗೌರವಿಸಿ. ಉತ್ತಮ ಸಮಾಜಕ್ಕೆ ಸಹಕಾರ ನೀಡಿ. ಅತ್ಯುತ್ತಮ ಸಮಾಜದ ನಿರ್ಮಾಣದಲ್ಲಿ ನಿಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
