;

ಮಳೆ ನೀರು ಕೊಯ್ಲು ಪದ್ಧತಿಯನ್ನ ಅಳವಡಿಸಿಕೊಳ್ಳಿ ನ್ಯಾಯದೀಶ ದೊಡ್ಡಮನಿ ಸಲಹೆ….

ವರದಿ. ದುಗ್ಗಪ್ಪ ಸಿಂಧನೂರು

ಸಿಂಧನೂರು:ಮಾ.22- ಮಳೆನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಳ್ಳದ ಹೊಸ ಕಟ್ಟಡ ಗಳಿಗೆ ಪರವಾನಿಗೆ ನೀಡಬಾರದು ಎಂದು ಗೌರವಾನ್ವಿತ ಪ್ರದಾನ ಸಿವಿಲ್ ನ್ಯಾಯಾಧೀಶರಾದ ಶ್ರೇಯಾಂಸ ದೊಡ್ಡಮನಿ ಸಲಹೆ ನೀಡಿದರು.
ನಗರದ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ತಾಲ್ಲೂಕು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ನಗರಸಭೆ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ವಿಶ್ವಜಲ ದಿನಾಚರಣೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಭಾರತದಲ್ಲಿ ದೇಶದಲ್ಲಿ ಉಚಿತವಾಗಿ ಸಿಗುವ ನೈಸರ್ಗಿಕ ಸಂಪನ್ಮೂಲಗಳನ್ನು ಖರೀದಿ ಮಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಇತರೆ ದೇಶಗಳಲ್ಲಿ ನೀರು ದೊರೆಯುವ ಸ್ಥಳದಲ್ಲಿ ಪೆಟ್ರೋಲ್ ಸಿಗುವ ಕಾರಣ ಅಲ್ಲಿನ ಜನತೆ ನೀರಿನ ಬಾಟಲನ್ನು ಖರೀದಿ ಮಾಡುತ್ತಾರೆ ನಮ್ಮಲ್ಲಿ ಕಾರ್ಖಾನೆಯ ನೀರು ಚರಂಡಿ ನೀರು ಸೇರಿದಂತೆ ಇನ್ನಿತರ ಕಲುಷಿತ ನೀರನ್ನು ಹಳ್ಳಕೊಳ್ಳ ನದಿ ಗಳಿಗೆ ಹರಿ ಬೀಡುವುದರಿಂದ ನಾವು ಸಹ ಬಾಟಲ್ ನೀರು ಖರೀದಿ ಮಾಡಿ ನೀರು ಕುಡಿಯುವ ಪರಸ್ಥಿತಿ ಉದ್ಭವವಾಗಿದೆ. ಅತಿಹೆಚ್ಚು ಭೊರವೆಲ್ ಹಾಕುವುದರಿಂದ ಅಂತರ್ಜಾಲ ಮಟ್ಟ ಕುಸಿದಿದೆ ಆದ್ದರಿಂದ ನಗರಸಭೆಯು ನಗರದಲ್ಲಿ ಮಳೆಕೊಯ್ಲು ಪದ್ದತಿ ಅಳವಡಿಸಿಕೊಳ್ಳದ ಯಾವ ವ್ಯಕ್ತಿಗೂ ಕಟ್ಟಡ ಪರವಾನಿಗೆ ನೀಡಬಾರದು ಒಂದು ವೇಳೆ ಮಳೆಕೊಯ್ಲು ಪದ್ದತಿ ಅಳವಡಿಸಿಕೊಳ್ಳದೆ ಕಟ್ಟಡ ನಿರ್ಮಾಣಕ್ಕೆ ಮುಂದಾದ ವ್ಯಕ್ತಿಗಳಿಗೆ ಸೂಕ್ತ ಕಠಿಣ ಕ್ರಮ ಜರುಗಿಸಬೇಕೆಂದು ಸಲಹೆ ನೀಡಿದರು…ಮಳೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;