ಸಿಂಧನೂರು ತಾಲೂಕು ಮಹಾತ್ಮ ಗಾಂಧಿ ವ್ರತ್ತದಲ್ಲಿ ತುಂಗಭದ್ರ ಎಡದಂಡೆ ಕಾಲುವೆ ಏಪ್ರಿಲ್ 15 ವರೆಗೆ ನೀರು ಹರಿಸಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಮಾಡಲಾಯಿತು . ತಾಲೂಕಿನಲ್ಲಿ ಜೋಳ ಬೆಳೆದಿದ್ದು ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ . ಪ್ರತಿ ಎಕರೆಗೆ 15 ಕ್ವಿಂಟಾಲ್ ಜೋಳ ಖರೀದಿಗೆ ಸರ್ಕಾರ ಆದೇಶವಿದೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನುಳಿದ ಜೋಳ ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತರು ನಷ್ಟ ಅನುಭವಿಸಬೇಕಾಗಿದೆ , ಕಾರಣ 25 ಕ್ವಿಂಟಾಲ್ ಗೆ ಏರಿಕೆ ಮಾಡಬೇಕು ಏಪ್ರಿಲ್ನಲ್ಲಿ ಬತ್ತದ ಕಟಾವು ಬರುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಬತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಸೋಮನಗೌಡ ಬಾದರ್ಲಿ , ಹನುಮೇಶ್ ಬಾಗೋಡಿ ,ಖಾಜಾ ರೌಡಕುಂದಾ, ಪ್ರಭು ದೇವರಗುಡಿ, ಅಮರೇಶ ಹತ್ತಿಗುಡ್ಡ, ಧ್ರಾಕ್ಷಾಯಿಣಿ, ಸೇರಿದಂತೆ ಹಲವಾರು ಮಹಿಳೆಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು .ಕಾಂಗ್ರೆಸ್ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು…