ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ನಾಯಕನಹಟ್ಟಿ/ ಸೇವಾ ಮನೋಭಾವವಿರುವ ಕಾರ್ಯಕರ್ತರು ರಾಜಕೀಯ ನಾಯಕರಾಗಿ ಹೊರಹೊಮ್ಮಬಹುದು ಎಂದು ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾ ಪ್ರಧಾನ ಕಾರದರ್ಶಿ ನರಸಿಂಹನಾಯಕ ಹೇಳಿದರು. ಪಟ್ಟಣದ ಯಾತ್ರಿ ನಿವಾಸದಲ್ಲಿ ಬುಧವಾರ ಬಿಜೆಪಿ ಮಂಡಲದಿಂದ ನಡೆದ ಎಸ್.ಟಿ. ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ದೇಶದಲ್ಲಿಂದು ಬಿಜೆಪಿ ಬೃಹತ್ ಪಕ್ಷವಾಗಿ ಹೊರಹೊಮ್ಮಿದೆ. ಇದಕ್ಕೆ ಕಾರ್ಯಕರ್ತರ ಕೊಡುಗೆಯೇ ಕಾರಣ. ಸೇವಾ ಮನೋಭಾವ ವಿರುವ ಕಾರ್ಯಕರ್ತರು ರಾಜಕೀಯ ನಾಯಕರಾಗಿ ಹೊರ ಹೊಮ್ಮಬಹುದು ಎಂದರು. ಪಕ್ಷದ ವಿಚಾರಧಾರೆ ಜನರಿಗೆ ತಲು ಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರಸೇವೆ ಅಪಾರವಾಗಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಹುದ್ದೆಗಳಿಗೂ ನಿವೃತ್ತಿ ಇದೆ. ಆದರೆ, ನಿಷ್ಠಾವಂತ ಕಾರ್ಯಕರ್ತರ ಸ್ಥಾನಕ್ಕೆ ಮಾತ್ರ ನಿವೃತ್ತಿಯೇಷಇಲ್ಲ. ಕಳೆದ 7 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವಾರು ಜನಪರ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಬೇಕು. ಹಾಗೇ ಯಾವುದೇ ಕಾರ್ಯಕರ್ತರಿಗೆ ಬಿಜೆಪಿ ಮೋರ್ಚಾಗಳ ಬಗ್ಗೆ ಕೀಳರಿಮೆ ಇರಬಾರದು ಎಂದು ಹೇಳಿದರು. ನಾಯಕ ಸಮು ದಾಯವನ್ನು ಇಲ್ಲಿಯವರೆಗೂ ಅಸಂಘಟಿತ ಸಮುದಾಯ, ಮೌಡ್ಯ ತುಂಬಿದ ಜನಾಂಗ ಎಂದು ಹಲವು ಪಕ್ಷಗಳು ಅಸಡ್ಡೆ ತೋಸಿದವು. ಆದರೆ, ಬಿಜೆಪಿ ಎಸ್ಟಿ ಮೋರ್ಚಾ ರಚಿಸಿ ಸಮುದಾಯದ ಮುಖಂಡರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಿದೆ. ಹಾಗಾಗಿ, ಕಾರ್ಯಕರ್ತರು ತಮ್ಮ ಜವಬ್ದಾರಿಗಳನ್ನು ಅರಿತು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಹೇಳಿದರು. ಬಿಜೆಪಿ ಜಿಲ್ಲಾಎಸ್‌ಟಿ ಮೋರ್ಚಾ ಅಧ್ಯಕ್ಷ ಬೋರನಾಯಕ ಮಾತನಾಡಿ, ಬಿಜೆಪಿ ಪಕ್ಷದಲ್ಲಿರುವ ವಿವಿಧ ಮೋರ್ಚಾಗಳ ಪೈಕಿ ಎಸ್‌ಟಿ ಮೋರ್ಚಾ ಪ್ರಬಲವಾಗಿದೆ. ರಾಜ್ಯದಲ್ಲಿ ಯಾವುದೇ ಚುನಾವಣೆಗಳು ನಡೆದರೂ ಎಸ್‌ಟಿ ಸಮುದಾಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಮುಂಬರುವ ಜಿಲ್ಲಾಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಜಯಗಳಿಸುವಂತೆ ಪಕ್ಷವನ್ನು ಸಂಘಟನೆಗೊಳಿಸಬೇಕು ಎಂದು ತಿಳಿಸಿದರು. ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದಿವಾಕರ್, ಮಂಡಲಾಧ್ಯಕ್ಷ ಈ.ರಾಮ ರೆಡ್ಡಿ, ಪಪಂ.ಅಧ್ಯಕ್ಷ ಎನ್.ಮಹಾಂತಣ್ಣ, ಸಿ.ಬಿ.ಮೋಹನ್ ಕುಮಾರ್, ಪಿ.ಶಿವಣ್ಣ ನೇತ್ರಾವತಿ, ಮುಖಂಡರಾದ ಡಿ. ಆರ್ ಬಸವರಾಜ್, ತ್ರಿಶೂಲ್‌ಕುಮಾರ್, ಪರ್ವತಯ್ಯ, ವಿಷ್ಣು ಪಿ.ಬಿ.ತಿಪ್ಪೇಸ್ವಾಮಿ, ಜಿ.ಒ.ಓಬಳೇಶ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
