ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣದ ಜೆ.ಎಂ.ಎಫ್ಸಿ ನ್ಯಾಯಾಲಯದ ಸಭಾಂಗಣದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳು ಉಲ್ಲಂ ಘನೆಯಾದರೆ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳುವ ಅವಕಾಶ ಇದೆ ಎಂದು ಸಿವಿಲ್ ನ್ಯಾಯಾ ಧೀಶರಾದ ಎಸ್.ನಿರ್ಮಲ ಹೇಳಿದರು. ಪಟ್ಟಣದ ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘದ ಸಹ ಯೋಗದಲ್ಲಿಷಆಯೋಜಿಸಿದ್ದ ವಿಶ್ವಾಹಕ ದಿನಾಚರಣೆಯಲ್ಲಿ ಮಾತನಾಡಿದರು. ಗ್ರಾಹಕರಿಗೆ ನ್ಯಾಯ ಒದಗಿಸಲು ಗ್ರಾಹಕರಿಗೆ ಆದ ಕಾಯ್ದೆಗಳಿವೆ. ಗ್ರಾಹಕರ ಹಕ್ಕುಗಳು ಉಲ್ಲಂಘನೆಯಾಗದಂತೆ ಪ್ರತಿಯೊಬ್ಬ ಮಾರಾಟಗಾರರು ಎಚ್ಚರ ಮಹಿಸಬೇಕು. ಜಿಲ್ಲಾ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ನ್ಯಾಯಾಲಯವಿದ್ದು, ಮಾರಾಟಗಾರರಿಂದ ಗ್ರಾಹಕರಿಗೆ ಅನ್ಯಾಯವಾಗಿದೆ ಎಂದು ಖಚಿತವಾದರೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು. ಪ್ರತಿ ಯೊಬ್ಬರೂ ಯಾವುದೇ ವಸ್ತುಗಳನ್ನು ಖರೀದಿ ಸುವ ಮುನ್ನಾ ಪುಶೀಲನೆ ನಡೆಸಿ ಪಡೆಯ ಬೇಕು. ತಪ್ಪು ಕಂಡು ಬಂದರೆ ಮಾರಾಟಗಾರರನ್ನು ಪ್ರಶ್ನಿಸುವ ಜತೆಗೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದು ಹೇಳಿದರು. ಹಣಕೊಟ್ಟುಕೊಂಡು ಕೊಳ್ಳುವಂತೆ ಗ್ರಾಹಕರಿಗೆ ತಮ್ಮದೇ ಆದ ಹಕ್ಕುಗಳಿಗೆ ಎಂಬುದೇಗೊತ್ತಿರುವುದಿಲ್ಲ. ತಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯುವಂತೆ ಮಾಡುವುದೇಗ್ರಾಹಕರ ಹಕ್ಕುದಿನಾಚರಣೆಯ ಉದ್ದೇಶವಾಗಿದೆ. ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಆರ್.ಆನಂದ್, ಉಪಾಧ್ಯಕ್ಷ ಡಿ.ಬಸವರಾಜ, ಕಾರ್ಯದರ್ಶಿ ಎ.ಡಿ.ರಾಘ ವೇಂದ್ರ, ಹಿರಿಯ ವಕೀಲ ಸಮೀವುಲ್ಲಾ ವಿಜ ಯಲಕಿ ಅನಸೂಯ,ರಾಮಾಂಜಿನೇಯ, ಪಾಪಯ್ಯ, ಮಂಜುನಾಥ, ಸುರೇಶ, ಯಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
