ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ14-3-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕಾನಹೊಸಹಳ್ಳಿ*
ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಲ್ಲಹಳ್ಳಿ ಗ್ರಾಮದಲ್ಲಿ ಪೊಲೀಸ್ ಠಾಣಾ ವತಿಯಿಂದ ದಲಿತ ಸಭೆ( ಶಾಂತಿ ಸಭೆ) ಮಾಡಲಾಯಿತು. ಹೊಸಹಳ್ಳಿ ಪೊಲೀಸ್ ಠಾಣೆಯ ಮಾನ್ಯ ಪಿಎಸ್ಐ ನಾಗರಾಜ್ ರವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ದಲಿತರನ್ನು ಉದ್ದೇಶಿಸಿ ಮಾನ್ಯ ಪಿಎಸ್ಐ ನಾಗರಾಜ್ ರವರು ಮಾತನಾಡಿ ಎಲ್ಲರೂ ಮೊದಲನೇದಾಗಿ ತಮ್ಮ ಮಕ್ಕಳನ್ನು ತಪ್ಪದೇ ವಿದ್ಯಾಭ್ಯಾಸಕ್ಕೆ ಶಾಲೆಗೆ ಕಳುಹಿಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ವಾಹನ ಸವಾರರು ತಪ್ಪದೇ ಕಡ್ಡಾಯವಾಗಿ ಹೆಲ್ಮೆಟ್ ಅನ್ನು ಬಳಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ. ಡ್ರೈವಿಂಗ್ ಲೈಸೆನ್ಸ್ ಮತ್ತು ಗಾಡಿ ಇನ್ಸೂರೆನ್ಸ್ ಹೊಂದಿರಬೇಕು. ನಿಮ್ಮ ಊರಿನಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಮ್ಮ ಇಲಾಖೆಗೆ ತಿಳಿಸಿ. ನಾವುಗಳು ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ಆದಷ್ಟು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸುವಲ್ಲಿ ಪ್ರಯತ್ನಪಡುತ್ತೇವೆ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ವಿಚಾರಿಸಿ ಕೆಲವು ಸಮಸ್ಯೆಗಳ ಬಗ್ಗೆ ಪರಿಹಾರ ಹೇಳಿದರು.
ಈ ಸಭೆಯಲ್ಲಿ ತಾಲೂಕ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಹಾಗೂ ವರದಿಗಾರ ಡಿಎನ್ ಈಶ್ವರಪ್ಪ ಸಿದ್ದಾಪುರ ಇವರ ಮಾತನಾಡಿ. ಅಸ್ಪೃಶ್ಯತೆ ನಿವಾರಣೆಯಾಗಬೇಕಾದರೆ ದೇವಸ್ಥಾನ ಪ್ರವೇಶ ಮಾಡುವುದರಿಂದ ನಿವಾರಣೆಯಾಗಲು ಮಾತ್ರ ಸಾಧ್ಯವಿಲ್ಲ. ನಾವುಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಶೈಕ್ಷಣಿಕವಾಗಿ ಮುಂದುವರೆದು ಉತ್ತಮ ವಿದ್ಯಾಭ್ಯಾಸ ಮಾಡಿ ಒಂದು ಉನ್ನತ ಹುದ್ದೆಗೆ ಹೋದಾಗ ತನ್ನಷ್ಟಕ್ಕೆ ತಾನೇ ಅಸ್ಪಶತೆ ನಿವಾರಣೆ ಆಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಹಾಗೂ ಕರೋನವೈರಸ್ ವ್ಯಾಪಕವಾಗಿ ಹಾಡುವುದರಿಂದ ,ಬೇರೆ ಸ್ಥಳಕ್ಕೆ ವಲಸೆ ಹೋಗುವ ಬದಲು ನಮ್ಮ ಗ್ರಾಮದಲ್ಲೇ ಇದ್ದು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿಕೊಂಡು ಆರೋಗ್ಯದಿಂದ ಇರಲು ಪ್ರಯತ್ನಮಾಡಿ. ಇನ್ನೂ ಕಲ್ಲಳ್ಳಿಯ ದಲಿತ ಮುಖಂಡರು ಕೆಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪನೆ ಮಾಡಿದರು. ಈ ವಿಚಾರವಾಗಿ ಮಾನ್ಯ ಪಿಎಸ್ಐ ನಾಗರಾಜ್ ರವರು ಸೂಕ್ತ ಸಲಹೆ ನೀಡಿದರು. ಈ ಸಭೆಯಲ್ಲಿ ಕಲಹಳ್ಳಿ ಗ್ರಾಮದ ದಲಿತ ಮುಖಂಡರು ಸಾರ್ವಜನಿಕರು ಕಾನಹೊಸಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ತಾಲೂಕ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕರಾದ ಡಿಎಂ ಈಶ್ವರಪ್ಪ ಸಿದ್ದಾಪುರ . ಇನ್ನು ಕೆಲವರು ಸಾರ್ವಜನಿಕರು ಮುಂತಾದವರು ಭಾಗವಹಿಸಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
