ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಗಜಾಪುರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಅಸ್ಪುರ್ಶತೆ ಜೀವಂತ,ದಲಿತ ಮುಖಂಡರ ಆರೋಪ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗಜಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ,ಅಸ್ಪುರ್ಶತೆ ಇನ್ನೂ ಜೀವಂತ ಇದೆ ಪರಿಶೀಲಿಸಿ ಸೂಕ್ತ ಕ್ರಮಗಳನ್ನ ಶೀಘ್ರವೇ ಕೈಗೊಳ್ಳಬೇಕೆಂದು ದಲಿತ ಮುಖಂಡರು ಒತ್ತಾಯಿಸಿದರು. ಮಾ14ರಂದು ಠಾಣೆಯಲ್ಲಿ ಜರುಗಿದ ದಲಿತರ ಸಭೆಯಲ್ಲಿ ಯುವ ಮುಖಂಡರಾದ ಸಾಲುಮನಿ ರಾಘವೇಂದ್ರ,ಮಾಜಿ ಸೈನಿಕ ರಮೇಶ ಹಾಗೂ ಡಿ.ಹೆಚ್.ದುರುಗೇಶ ಸಭೆಯಲ್ಲಿ ದೂರಿದರು.ಸಿಪಿಐ ವಸಂತ ಅಸೋದೆ ಮಾತನಾಡಿ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ,ಅಗತ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶೀಘ್ರವೇ ಮುಂದಾಗುವುದಾಗಿ ಭರವಸೆಯನ್ನು ನೀಡಿದರು.ಡಿ.ಹೆಚ್.ದುರುಗೇಶ ಮಾತನಾಡಿ,ದಲಿತರ ಸಭೆ ಯಶಸ್ವಿಯಾಗಲು ಸಭೆಯನ್ನ ಸುವ್ಯವಸ್ಥಿತವಾಗಿ ಆಯೋಜಿಸಬೇಕು, ದೇಯೋದ್ಧೇಶಗಳು ಈಡೇರುವ ನಿಟ್ಟಿನಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಪ್ರಾಮಾಣಿಕತೆ ತೋರಬೇಕೆಂದರು.ಸಾಲುಮನಿ ರಾಘವೇಂದ್ರ ಮಾತನಾಡಿ ಅಮ್ಮನಕೇರಿ,ಕೊಂಬೆಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ದಲಿತರಿಗೆ ನಿರಂತರ ಶೋಷಣೆ ಜರುಗುತ್ತಿದೆ ಶೀಘ್ರವೇ ಪರಿಶೀಲಿಸಿ ಕ್ರಮ ಜರುಗಿಸಬೇಕೆಂದರು.ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದೆಂದು ಸಿಪಿಐ ವಸಂತ ಅಸೋದೆ ತಿಳಿಸಿದರು.ಪಟ್ಟಣದ ಹಿರಿಯ ಮತ್ತು ಯುವ ದಲಿತ ಮುಖಂಡರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
