ವರದಿ. ಧನಂಜಯ್ ಹಡಗಲಿ

[3/14, 11:29] Ittigi. New: ದಿನಾಂಕ 13/3/2021.ನೇ.ಶನಿವಾರದಂದು ವಿಜಯನಗರ ಜಿಲ್ಲೆ ಹಡಗಲಿ ತಾಲ್ಲೂಕಿನ ಇಟಗಿ ಗ್ರಾಮ ನೂತನ ನಿರ್ಮಾಣವಾಗಿದ್ದ ಕಲ್ಲೇಶ್ವರ ರಥೋತ್ಸವ ಇಟಗಿ ಗ್ರಾಮದಲ್ಲಿ ಶನಿವಾರ ಬಹಳ ಅದ್ದೂರಿಯಾಗಿ ಜರುಗಿತು .ಬೆಳಿಗ್ಗೆ ಉತ್ತಂಗಿ ಸೋಮಶೇಖರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಂತಿ ಹೋಮ ನೆರವೇರಿತು ನಂತರ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ನಡೆಯಿತು ನೂತನ ಕಲ್ಲೇಶ್ವರ ರಥೋತ್ಸವವನ್ನು. ಮರೆಮ ನಹಳ್ಳಿ ಗ್ರಾಮದ ಪತ್ತಾರ್ ರುದ್ರಪ್ಪ ಮತು..ಮಕ್ಕಳು ಪತ್ತಾರ್ ದೇವೆದ್ರಾಚಾರಿ .ಪತ್ತಾರ್ ಷಣ್ಮುಖಾಚಾರಿ .ಮತ್ತು ಅಳಿಯಂದಿರು ನೂತನ ರಥವನ್ನು ನಿರ್ಮಾಣ ಮಾಡಿದಾರೆ .ರಥೋತ್ಸವ ಬಹಳ ವಿಜ್ರಂಬಣೆಯಿಂದ ಜರುಗಿತು .

ವಿಶೇಷ ಪೂಜೆ ಅಲಂಕಾರ ಅಭಿಷೇಕ ನಡೆಸಿದರು ಮಂದಿರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀಕಲ್ಲೇಶ್ವರ ಉತ್ಸವಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಸಾಯಂಕಾಲ 5ಗಂಟೆಯ ವೇಳೆಗೆ ಶ್ರೀ ಕಲ್ಲೇಶ್ವರ ಉತ್ಸವ ಮೂರ್ತಿಯನ್ನು ರಥಕ್ಕೆ ಎರಿಸಲಾಯಿತು ನಂತರ ಸಾವಿರಾರು ಭಕ್ತರು ಜೈಕಾರ ಹಾಕುತ್ತಾ ರಥವನ್ನು ಪ್ರಮುಖ ಬೀದಿಯಲ್ಲಿ ಸಾಗಿ ಪಾದಗಟ್ಟಿ ಬಸವಣ್ಣನ ಗುಡಿ ಹತ್ತಿರ ತಲುಪಿತು ಭಕ್ತರು ಜಯಘೋಷ ಕೂಗುತ್ತಾ ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ಎಸೆದು ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಂಡರು ನವದಂಪತಿಗಳು ಕಲ್ಲೇಶ್ವರ ಕಳಸವನ್ನು ನೊಡಿ .ತಮ್ಮ ಇಷ್ಟಾರ್ಥವನ್ನು ಕೇಳಿಕೊಂಡರು.ಇಟಗಿ ಗ್ರಾಮದ ದೈವಸ್ಥರು ಮತ್ತು ಯುವ ಸೇವಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು ಮತ್ತು ಸಕಲ ಭಕ್ತಾದಿಗಳು ಕಲ್ಲೇಶ್ವರ ದರ್ಶನ ಪಡೆದು ಪುನೀತರಾದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
