;

ಮೊಳಕಾಲ್ಮುರು: ತಾಲೂಕು ಕಚೇರಿಯಲ್ಲಿ “ದಲಿತ ವಚನಕಾರರ ಜಯಂತೋತ್ಸವ” ಆಚರಿಸಲಾಯಿತು.

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ “ದಲಿತ ವಚನಕಾರರ ಜಯಂತೋತ್ಸವ” ವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಟಿ.ಸುರೇಶ್‌ಕುಮಾರ್. 12 ನೇ ಶತಮಾನದ ಸಮಾಜದಲ್ಲಿ ಜಾತೀಯತೆ ತುಂಬಿ ತುಳುಕಾಡುವ ಕಾಲಘಟ್ಟದಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ದಲಿತ ವಚನಕಾರರ ಶ್ರಮವು ಸಮಾಜಕ್ಕೆ ಆದರ್ಶವಾಗಿದ್ದಾರೆ ಎಂದು ತಹಶೀಲ್ದಾರ್ ಟಿ.ಸುರೇಶ್‌ಕುಮಾರ್ ತಿಳಿಸಿದರು. ಬಸವಣ್ಣನವರ ಕಾಲಾವಧಿಯಲ್ಲಿನ ವಚನಗಳು ಮುಂದಿನ ಪೀಳಿಗೆಗೆ ಪ್ರಾಮುಖ್ಯತೆ ಹೊಂದಿವೆ. ಅನುಭವ ಮಂಟಪದಲ್ಲಿದ್ದ ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಅವರು ವಚನ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದು ವಚನ ಸಾಹಿತ್ಯದಿಂದ ಜಾತೀಯತೆ ನಿರ್ಮೂಲನೆ ಮಾಡಲು ಶ್ರಮಿಸಿದ್ದಾರೆ. ಇವರ ಕಾರ್ಯಕ್ಷಮತೆಯನ್ನು ಬಸವಣ್ಣನವರು ಮೆಚ್ಚಿ ಇವರನ್ನು ಶರಣು ಶರಣಾರ್ಥಿ ಎಂದು ಹೇಳುವಂತಾಗಿರುವುದು ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದರು ಎಂದರು. ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ ಮಾತನಾಡಿ, ದಲಿತ ವಚನಕಾರರು ಸಮಾಜದಲ್ಲಿನ ಅನಿಷ್ಟ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ್ದಾರೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಶ್ರೇಷ್ಠರ ಜಯಂತ್ಯುತ್ಸವಗಳಿಗೆ ಸರ್ವ ಸಮುದಾಯಗಳವರನ್ನು ಜನಪ್ರತಿನಿಧಿಗಳು ಮತ್ತು ಎಲ್ಲಾ ಅಧಿಕಾರಿಗಳಿಗೆ ಆಹ್ವಾನಿಸಿ ಮಹನೀಯರಿಗೆ ಗೌರವಿಸಬೇಕು ಎಂದು ತಿಳಿಸಿದರು. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಓಬಣ್ಣ ಮಾತನಾಡಿದರು. ಶಿರಸ್ತೆದಾರ ಎಚ್.ಆಂಜೀನಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾದ ವಾಲೇಕಾರ್, ಮಲ್ಲಿಕಾರ್ಜುನ, ಸಿಬ್ಬಂದಿ ರಂಗನಾಥ, ರಮೇಶ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ನಾಗರಾಜ್, ಪಿ.ಪಾಲಯ್ಯ, ಪಿ.ಒ.ಓಬಯ್ಯ, ಜಿ.ರವಿ, ಇನ್ನು ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;