;

ಕೂಡ್ಲಿಗಿ:ಅಕ್ರಮಗಳನ್ನು ಹತ್ತಿಕ್ಕಿ ನಾಗರೀಕರ ಒತ್ತಾಯ…!!!

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಅಕ್ರಮಗಳನ್ನು ಹತ್ತಿಕ್ಕಿ ನಾಗರೀಕರ ಒತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪಿಕ್ನಿಕ್ ಸ್ಥಳವೆಂದೇ ಗುರುತಿಸಲಾಗುರುವ,ವಾಯು ವಿಹಾರದ ತಾಣ ಹಾಗೂ ಜನತೆಗೆ ವಿಶ್ರಾಂತಿ ಸ್ಥಳ ಹಾಗೂ ಶ್ರೀ ಸಾಯಿ ಧ್ಯಾನ ಮಂದಿರ ಆವರಣದಲ್ಲಿ. ಇತ್ತೀಚೆಗೆ ಪಡ್ಡೆ ಹುಡುಗರಿಂದ ಗಾಂಜಾ ಹಾಗೂ ಮಧ್ಯದ ವಾಸನೆ ಆವರಿಸಿದೆ ಎನ್ನಲಾಗುತ್ತಿದೆ,ನಶೆಯ ಕಿಡಿಗೇಡಿಗಳು ಆಲದಮರದ ಬುಡಕ್ಕೆ ಮಂಗಳವಾರ ಬೆಂಕಿ ಹಚ್ಚಿರಬಹುದೆಂದು ಊಹಿಸಲಾಗುತ್ತಿದೆ.ಬೆಂಕಿ ಕಾಣಿಸಿಕೊಂಡ ಸದ್ದಿ ತಿಳಿದ ಕೂಡ್ಲಿಗಿ ಅಗ್ನಿಶಾಮಕ ಸಿಬ್ಬಂದಿ ಹತ್ತಿದ ಬೆಂಕಿ ಆರಿಸಿ ಮರದ ಸಂರಕ್ಷಣೆಗೆ ಮಾಡಿದ್ದಾರೆ,ಪಟ್ಟಣದ ಕೆಲ ಶಾಲಾ ಕಾಲೇಜು ಮೈದಾನ,ಪಾಳು ಕಟ್ಟಡಗಳು,ಪಡ್ಡೆ ಹುಡುಗರ ಅನೈತಿಕ ತಾಣಗಳಾಗಿವೆ.ಕೆಲ ಸರ್ಕಾರಿ ಕಚೇರಿಗಳ ಆವರಣಗಳು ಅಕ್ರಮ ಚಟುವಟಿಕೆಗಳ ಸ್ಥಳಗಳೆಂದೇ ಗುರುತಿಸಲಾಗುತ್ತಿದೆ.ಮಟ್ಕ ಇಸ್ಪಿಟ್ ಜೂಜು ಪಟ್ಟಣದ ಆಯ್ದ ಕೆಲ ಸ್ಥಳಗಳಲ್ಲಿ ಜರುಗುತ್ತಿವೆ ಎನ್ನಲಾಗುತ್ತಿದೆ,ಮಟ್ಕಾ ಬುಕ್ಕಿಗಳು ಸಾರ್ವಜನಿಕ ಸ್ಥಳಗಳಲ್ಲಿಯೇ ತಮ್ಮ ಕಾರ್ಯ ನಿರತರಾಗಿರುತ್ತಾರೆ.ಆದ್ರೆ ಈವರೆಗೂ ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ,ಮಧ್ಯಮಾರಾಟ ಬೈಕ್ ಗಳಲ್ಲಿಯೇ ಹಾಡುಹಗಲೇ ಸರಬರಾಜು ಆದರೂ ಕೇಳೋರಿಲ್ಲ ಇವೆಲ್ಲದಕ್ಕೂ ಸಿಸಿ ಕ್ಯಾಮೆರಾ ಸಾಕ್ಷಿ ನೀಡುತ್ತವೆ.ಇಂತಹ ಚಟುವಟಿಕೆಗಳನ್ನು ತಹಬದಿಗೆ ತರಬೇಕಿರುವ ಸಂಬಂಧಿಸಿದ ಇಲಾಖೆಗಳು,ನಿರ್ಲಿಪ್ತತೆ ಹಾಗೂ ನಿರ್ಲಕ್ಷ್ಯತೆ ತೋರುತಿರುವುದನ್ನು ಕೆಲ ಸಂಘಟನೆಗಳು ಖಂಡಿಸಿವೆ.
*ಇದು “ಮಾಮೂಲು” ವಿಷಯನಾ.!?*-ಯುವಕರ ದಾರಿ ತಪ್ಪಿಸುವ ಆರೋಗ್ಯವನ್ನು ಹದಗೆಡಿಸುವ ಗಾಂಜಾ ವಾಸನೆ,ಅಕ್ರಮ ಮಧ್ಯ ಘಮಟು ಎಲ್ಲೆ ಮೀರಿದೆ ಎಂಬ ಕೂಗು ಪಟ್ಟಣದೆಲ್ಲೆಡೆ ಪ್ರತಿಧ್ವನಿಸುತ್ತಿದ್ದು. ಕಾಲೇಜು ರಸ್ತೆಗಳಲ್ಲಿ ಕೆಲ ಕಿಡಿಗೇಡಿಗಳು ನಡು ರಸ್ಥೆಯಲ್ಲಿಯೇ ಬೈಕ್ ಸಾಹಸ ಹಾಗೂ ಸರ್ಕಸ್ ಗಳನ್ನು ಮಾಡುತಿದ್ದಾರೆ ಎನ್ನಲಾಗುತ್ತಿದೆ,ಹೆಲ್ಮೆಟ್ ಇಲ್ಲ ಮಾಸ್ಕ್ ಇಲ್ಲ ಎಂದು ಬೈಕ್ ಸವಾರರಿಂದ ಐನೂರು ಸಾವಿರ ಪೀಕುವ ಪೊಲೀಸರಿಗೆ.ಈ ಪುಂಡ ಪೋಕರಿಗಳನ್ನ ಹತೋಟಿಗೆ ತರುವ ಧೈರ್ಯ ಇಲ್ಲವಾ.!? ಹಾಡು ಹಗಲೇ ಅಕ್ರಮ ಮದ್ಯ ಮಾರಾಟ ಮಾಡೋರನ್ನ ತಡೆದು ಪ್ರಕರಣ ಹಾಕೋಕಾಗಲ್ಲವಾ..ರಾಜಾ ರೋಷವಾಗಿ ಜರುಗುತ್ತಿರುವ ಮಟ್ಕಾ ಇಸ್ಪೀಟು ಅಡ್ಡೆಗಳ ಮೇಲೆ ದಾಳಿ ಮಾಡಿ,ಪ್ರಕರಣ ದಾಖಲು ಮಾಡೋ ಮನಸ್ಸೇಕೆ ಇಲ್ಲ .!?.ಹಾಡು ಹಗಲೇ ಬೈಕ್ ಗಳಲ್ಲಿ ಮಧ್ಯ ಸರಬರಾಜು ಮಾಡುವವರ ವಿರುದ್ಧ ಒಂದು ಒಂದು ಪ್ರಕಣ ಇಲ್ಲವಲ್ಲಾ.!?, ಖಾಸಗೀ ವಾಹನಗಳು ಕೋರ್ಟ್ ಮುಂಭಾಗದಲ್ಲಿ ಠಾಣೆ ಮುಂಭಾಗದಲ್ಲಿಯೇ ಸಂಚಾರಿ ನಿಯಮಗಳನ್ನ ಗಾಳಿಗೆ ತೂರಿ ಪುಂಡಾಟಿಕೆ ತೋರಿದರೂ ಅತ್ತಿಕ್ಕುವ ಧೈರ್ಯ ತೋರುತಿಲ್ಲ.!? ಅಕ್ರಮ ಮರಳು ಗಾರಿಕೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಜರುಗಿರುವ ಪ್ರತಿ ಸಭೆಯಲ್ಲಿ ಪ್ರಸ್ಥಾಪಿಸಿದ್ದರೂ, ಯಾವುದೇ ಕ್ರಮಗಳು ಕೈಗೊಂಡಿಲ್ಲ ಅವರು ರಾಜಾರೋಷವಾಗಿಯೇ ರಾತ್ರಿ ಹಗಲು ಅಕ್ರಮ ಮರಳು ಮಾರಾಟ ಮಾಡುತಿದ್ದಾರೆನ್ನಲಾಗುತ್ತಿದೆ. ಇದೆಲ್ಲಾ “ಮಾಮೂಲು” ಅಥವಾ ಪ್ರಭಾವಿ ಬಂಡವಾಳ ಶಾಹಿಗಳ ಮಹಿಮೆನಾ..!?ಎಂಬ ಪ್ರೆಶ್ನೆ ಎಂತಹವರಿಗೂ ಕಾಡದೇ ಇರದು,ಇದನ್ನು ಪೊಲೀಸ್ ಠಾಣೆಯಲ್ಲಿ ಜರುಗಿರುವ ಸಭೆಗಳಲ್ಲಿ ಕೆಲ ಮುಖಂಡರು ಪ್ರೆಶ್ನೆಸಿದ್ದಾರೆ. ಆದರೆ ಪೊಲೀಸರಿಂದ ನಿಖರವಾದ ಪ್ರತಿಕ್ರಿಯೆ ಇಲ್ಲ.
ಪೊಲೀಸರು ರಸ್ಥೆ ಬದಿ ನಿಂತು ಕೈ ಅಂದು ತಪಾಸಣೆ ನೆಪದಲ್ಲಿ ಬೈಕ್ ಸವಾರ ಮಗ್ಗಲು ಮುರಿದು, ತಮ್ಮ ಜೇಬು ತುಂಬಿಸಿಕೊಳ್ಳುವ ಬದಲು ಪೋಲೀಸರು.ತಾವು ಪಡೆಯುವ ಸರ್ಕಾರಿ ಸಂಬಳಕ್ಕೆ ತಕ್ಕಹಾಗೆ ನಿಯತ್ತಾಗಿ ಕರ್ಥವ್ಯ ನಿರ್ವಹಿಸಿದ್ದಲ್ಲಿ ಸಮಾಜದ ಹೀರೋಗಳಾಗಬಹುದಾಗಿದೆ,ಇಲ್ಲವಾದಲ್ಲಿ ಸರ್ಕಾರದ ಸಂಬಳ ಪಡೆದು ಸಾರ್ವಜನಿಕ ಸೇವೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಕ್ಕೆ ಪ್ರಜ್ಞಾವಂತರು ಗುರಿಮಾಡುತ್ತಾರೆ.
*ಠಾಣೆ ಹಾಗೂ ಕೋರ್ಟ್ ಮುಂದೆನೇ ವೈಲೇಷನ್*- ಗುಡೇಕೋಟೆ ರಸ್ಥೆಯ ಕಾಲೇಜು ರಸ್ಥೆಗಳಲ್ಲಿ,ಕೋರ್ಟ್ ಆವರಣದ ಮುಂಭಾಗದಲ್ಲಿ ಮತ್ತು ಠಾಣೆಯ ಮುಂಭಾದಲ್ಲಿಯೇ ಖಾಸಗೀ ವಾಹನಗಳ ಹಾವಳಿ ಮಿತಿಮೀರಿದೆ.ಕೋರ್ಟ್ ಹಾವರಣದ ಮುಂಭಾಗದಲ್ಲಿಯೇ ರಸ್ಥೆ ಸಂಚಾರಿ ನಿಯಮಗಳನ್ನು ರಾಜಾರೋಷವಾಗಿ ಮೀರುತಿದ್ದಾರೆ,ಪೊಲೀಸ್ ಠಾಣೆಗೆ ಕೋರ್ಟ್ ಅ‌ವರಣದೊಳಗೆ ಗಡಚ್ಚಿಕ್ಕುವ ರೀತಿಯಲ್ಲಿ ಕೇಳುವಂತೆ ಹಾರನ್ನು ಹಾಕುತ್ತಾರೆ.‌ಕೋರ್ಟ್ ಮುಂಭಾಗದಲ್ಲಿ ಹಾಗೂ ಪೊಲೀಸ್ ಠಾಣಾ ಮುಂದೆಯೇ ಭಾರೀವಾಹನಗಳು ಟಿಪ್ಪರ್ ಗಳು ವಾಹನಗಳು ಅತಿವೇಗದಲ್ಲಿ ಚಲಿಸಿದರೂ ಪೊಲೀಸರು ಚಕಾರ ಎತ್ತುತಿಲ್ಲ.ಒಂದೇ ಒಂದು ಪ್ರಕಣ ನ್ಯಾಯಾಲಯದ ಮೆಟ್ಟು ಹತ್ತಿಲ್ಲ. ಆದ್ರೆ ಪೊಲೀಸರು ಬಡಪಾಯಿ ಬೈಕ್ ಸವಾರರಿಂದ ಹೆಲ್ಮೆಟ್ ಮಾಸ್ಕ್ ಇತ್ಯಾದಿ ಕಾರಣಕ್ಕೆ,ಬೈಕ್ ರವರಿಂದ ಸಾವಿರಾರು ರೂಗಳನ್ನ ಪೀಕಿ ಜೇಬಿಗಿಟ್ಟುಕೊಳ್ಳುತಿದ್ದಾರೆ ಎಂಬ ಆರೋಪ ಪಟ್ಟಣ ಮಾತ್ರವಲ್ಲ.ಬೈಕ್ ಪಾಸ್ ಗಳಲ್ಲಿ “ಹೈವೇ ಪೆಟ್ರೋಲ್” ನವರದ್ದು ಇದೇ ಪ್ರಮುಖ ಕಾರ್ಯವಾಗಿದೆ ಎಂಬ ಅಭಿಪ್ರಾಯ ತಾಲೂಕಿನಾಧ್ಯಂತ ಪ್ರತಿಧ್ವನಿಸುತ್ತಿದೆ. ಕಾಲೇಜು ರಸ್ತೆಯಲ್ಲಿ ಬೈಕ್ ಮಲಗಿಸಿ ಓಡಿಸುವ ಸಾಹಸ ಮಾಡುವವರು ಹಲವರಿದ್ದು,ಅವರನ್ನು ಹತೋಟಿಗೆ ತರುವಲ್ಲಿ ಪೊಲೀಸರು ಮನಸ್ಸು ಮಾಡುತಿಲ್ಲ,ಬುದ್ಧಿ ಹೇಳುವ ಹಿರಿಯರೊಂದಿಗೆ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸಿರುವ ನಿದರ್ಶನಗಳಿವೆ.ಕೆಲ ಕಿಡಿಗೇಡಿಗಳು ಧ್ಯಾನಮಂದಿರ ಆವರಣದಲ್ಲಿರುವ ಆಲದಮರ ಬುಡಕ್ಕೆ ಬೆಂಕಿ ಹಚ್ಚಿದ ಘಟನೆ ಜರುಗಿದೆ.ಸಂಬಂಧಿಸಿದ ಸ್ಥಳೀಯ ಆಡಳಿತ ಪಿರಾಮಿಡ್ ಆಲದಮರಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಮಾಡಬೇಕಿದೆ, ವಾಯುವಿಹಾರಕ್ಕೆ ಹೋದವರಿಗೆ ವಿಶ್ರಾಂತಿ ಸ್ಥಳ ಇದಾಗಿದ್ದು ಸಂಬಂದಿಸಿದ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.ಪಿರಾಮಿಡ್ ಅಕ್ರಮ ಮುಕ್ತಗೊಳಿಸಬೇಕಿದೆ, ಪ್ರಶಾಂತವಾದ ಧ್ಯಾನ ಮಂದಿರ ಅಕ್ರಮಗಳ ತಾಣವಾಗದಿರಲಿ ನಾಗರೀಕರಿಗೆ ಹಾಗೂ ಸಾರ್ವಜನಿಕರಿಗೆ ನೆಮ್ಮದಿ ನೀಡುವ ತಾಣವಾಗಲಿ ಎಂಬುದು ಪಟ್ಟಣದ ಹಿರಿಯ ನಾಗರೀಕರ ಪ್ರಜ್ಞಾವಂತರ ಆಶಯವಾಗಿದೆ.
*ಅಕ್ರಮಗಳನ್ನ ಹತ್ತಿಕ್ಕಿ, ಮುಖಂಡರ ಒತ್ತಾಯ*- ಪಟ್ಟಣದಲ್ಲಿನ ಕೆಲ ಸ್ಥಳಗಳಲ್ಲಿ ಅಕ್ರಮ ಜೂಜು ಹಾಗೂ ಅನೈಕ ಚಟುವಟಿಕೆಗಳು,ಅಕ್ರಮ ಮಧ್ಯ ಅಕ್ರಮ ಮರಳು ಹಾಗೂ ಇಸ್ಪೀಟು ನಡೆಯುತ್ತಿರುವದರ ಬಗ್ಗೆ ಠಾಣೆಯಲ್ಲಿ ಜರುಗುವ ಸಭೆಯಲ್ಲಿ ಚರ್ಚೆಯಾಗಿದೆ.ಈ ಬಗ್ಗೆ ಪ್ರಮುಖ ಮುಖಂಡರು ಹಾಗೂ ಜನಪ್ರತಿನಿಧಿಗಳು ಕೆಲ ಸಂಘ ಸಂಸ್ಥೆಗಳ ಮುಖಂಡರು ಹಲವು ಭಾರಿ ದೂರಿದ್ದಾರೆ.ಆದ್ರೆ ಸಂಬಂಧಿಸಿದಂತೆ ಇಲಾಖೆ ಯಾವರೀತಿ ಕ್ರಮ ಜರುಗಿಸಿದೆ.?ಎಷ್ಟು ಪ್ರಕರಣಗಳು ದಾಖಲಾಗಿವೆ ಈವರೆಗೂ ತಿಳಿದಿಲ್ಲ.ಇದೆಲ್ಲಾ ಪೊಲೀಸ್ ಇಲಾಖೆ ಸಲ್ಲಿಕೆಯಾಗುತ್ತಿದೆ ಎನ್ನಲಾಗುತ್ತಿರುವ ಮಾಮೂಲು ಪ್ರಭಾವನಾ.!?ಭ್ರಷ್ಟ ಪ್ರಭಾವಿಗಳ ಕಪಿಮುಷ್ಠಿಯ ಭಾಹು ಬಂಧನದಲ್ಲಿ ಪ್ರ‍ಾಮಾಣಿಕ ‍ಅಧಿಕಾರಿಗಳು ಇದ್ದಾರಾ..!?ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಪರಿಶೀಲಿಸಬೇಕಿದೆ.ಸ್ಥಳೀಯ ನಿಷ್ಠ‍ಾವಂತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಹಾಗೂ ನಾಗರೀಕರ ಪ್ರೇಶ್ನೆಗೆ ತಮ್ಮ ಕರ್ಥವ್ಯ ನಿಷ್ಠೆಯ ಮೂಲಕ ಉತ್ತರ ಕೊಡಬೇಕಿದೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;