;

ಕಾನಹೊಸಹಳ್ಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಹಿಳಾದಿನಾಚರಣೆ…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು, ಇದರಲ್ಲಿ ನೂತನವಾಗಿ ಆಯ್ಕೆಯಾದ ಎಸ್ ,ಡಿ,ಎಂ.ಸಿ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಮತ್ತು ಸದಸ್ಯರು ರಾಜಣ್ಣ,ಮಹದೇವಿ ಕವಿತಾ ,ಮಾರಕ್ಕ, ನಿಸ್ಸಾರ್ ಅಹ್ಮದ್ ,ಭಾಗವಹಿಸಿದ್ದರು.ಶಿಕ್ಷಕರಾದ ಶ್ಯಾಮಸುಂದರ್ ಅವರು ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ಭಾರತದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉನ್ನತವಾದ ಸ್ಥಾನವನ್ನು ನೀಡಲಾಗಿದೆ,
ಅದರಲ್ಲಿ ಭೂಮಿತಾಯಿ ಹೆಚ್ಚಾನು ಹೆಚ್ಚು ನದಿಗಳಿಗೆ ಮಹಿಳೆಯರ ಹೆಸರುಗಳನ್ನು ಇಟ್ಟಿದ್ದಾರೆ.ಹಾಗೇಯ ವಿದ್ಯಾಅಧಿದೇವತೆ,ಲಕ್ಷ್ಮೀ,ಇನ್ನಿತರೆ ಹೆಸರುಗಳೀಂದ ನೋಡಬಹುದಾಗಿದೆ, ಎಂದು ತಿಳಿಸಿದರು ,
ಹಿಂದಿ ಭಾಷಾ ಶಿಕ್ಷಕರಾದ ಚನ್ನಬಸವನಗೌಡ ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ‘’ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎನ್ನುವಂತೆ’’
ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವಂತೆ ಮುನ್ನಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರುಗಳಾದ ಚಂದ್ರಣ್ಣ ಮಾತನಾಡಿ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ” ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ , ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಎಂದು ನುಡಿದರು .ಈ ಕಾರ್ಯಕ್ರಮದಲ್ಲಿ ಗೋಪಾಲನಾಯ್ಕ ,ರವಿಕುಮಾರ ,ವಿಶ್ವನಾಥ , ಆರ್ ಸುಜಾತ ,ಶಿಕ್ಷಕರುಗಳು ಭಾಗಿಯಾಗಿದ್ದರು ಈ ಕಾರ್ಯಕ್ರಮದಲ್ಲಿ ನಿರೂಪಣೆ ಮತ್ತು ಸ್ವಾಗತವನ್ನು ವಿ ಮಾರಪ್ಪ ಕನ್ನಡ ಶಿಕ್ಷಕರು ನೆರವೇರಿಸಿದರು ಹಾಗೂ ಶಾಲೆಯ ಮಕ್ಕಳು ವಿದ್ಯಾರ್ಥಿನಿಯರು ಭಾಗವಹಿಸಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;