;

ಸಿಡಿ ವಿಚಾರ ಮಾಜಿ ಸಚಿವರ ರಾಜೀನಾಮೆ ಸೂಕ್ತ ತನಿಖೆಯಾಗಲಿ ದಲಿತ ಸಂಘರ್ಷ ಸಮಿತಿ…!!!

ವರದಿ.ಮಹಾಲಿಂಗ ಗಗ್ಗರಿ ಬೆಳಗಾವಿ

ಸಿಡಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಚಿವ ರಾಜೀನಾಮೆ ನೀಡಿರುವುದನ್ನು ಖಂಡಿಸಿ ಸರಿಯಾದ ತನಿಖೆ ಮುಖಾಂತರ ನಿಜ ರೂಪ ಹೊರಬರಬೇಕು ಎಂದು ಬೆಳಗಾವಿಯಲ್ಲಿ ದಲಿತ ಸಂಘರ್ಷ ಸಮಿತಿ ಚಂದ್ರಕಾಂತ್ ಕಾದ್ರೊಳ್ಳಿ ಬಣದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕುರಿತು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಚಂದ್ರಕಾಂತ ಕಾದ್ರೊಳ್ಳಿ ಬಣದಿಂದ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಯಿತು. ಆದರೆ ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಾರಿ ಕುತೂಹಲ ಕೆರಳಿಸಿದೆ ಆದರೆ ದಲಿತ ನಾಯಕರು ಆಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋಗಳನ್ನು ಬಿಡುಗಡೆ ಮಾಡಿ ರಾಜಕೀಯದಿಂದ ತುಳಿಯುವ ಹುನ್ನಾರ ನಡೆಯುತ್ತಿದೆ ಎಂದರು.
ಹಾಗಾಗಿ ದಲಿತರಿಗೆ ಅನ್ಯಾಯವಾದಂತಾಗಿದೆ ಆದರೆ ಸರ್ಕಾರ ಆದಷ್ಟು ಬೇಗನೆ ತನಿಖೆ ಮುಖಾಂತರ ರಮೇಶ್ ಜಾರಕಿಹೊಳಿ ಅವರಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಬಯಕೆ. ಇದರಿಂದ ಸಹ ಸತ್ಯವನ್ನು ಬಿಚ್ಚಿಡುವ ಕೆಲಸಗಳನ್ನು ಸರಕಾರ  ಮಾಡಬೇಕು ಎನ್ನುವುದು ಚಂದ್ರಕಾಂತ ಕಾದ್ರೊಳ್ಳಿ ಬಣದ ಆಗ್ರಹವಾಗಿದೆ. ಬರುವ ಬುಧುವಾರದಂದು 11 ಗಂಟೆಗೆ  ಪ್ರತಿಯೊಂದು ತಾಲೂಕಿನಿಂದ 2-3 ವಾಹನಗಳು ಬರುವ ಸಾಧ್ಯತೆ ಇದೆ ಹಾಗೆಯೇ ಸುಮಾರು 500 ಜನರನ್ನು ಸೇರಿಸುವ ಮೂಲಕ ಆರಟಿಓ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರಭಾವಶಾಲಿ ನಾಯಕನನ್ನು ಉಳಿಸುವಂತ ಕೆಲಸ ನಾವು ಮಾಡಬೇಕು ದಿನೇಶ್ ಕಲ್ಲಹಳ್ಳಿಗೆ ಸಿಡಿಯನ್ನು ಯಾರು ಕೊಟ್ಟರು ಅವನ ಹಿಂದೆ ಯಾರು ಇದ್ದಾರೆ ಎನ್ನುವುದು ಮೊದಲು ಪತ್ತೆ ಆಗಬೇಕು ಎಂದರು. ಹಾಗೆಯೇ ದಿನೇಶ್ ಕಲ್ಲಹಳ್ಳಿ ವಿರುದ್ಧ ಪ್ರತಿಭಟನೆ ಮಾಡುವುದು ನಮ್ಮೆಲ್ಲರ  ಉದ್ದೇಶ ಅಷ್ಟೇ ಎಂದು ತಿಳಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;