ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಹೊಸಪೇಟೆ:ಮದ್ಯ ಮಾರಾಟ ನಿಷೇಧಕ್ಕೆ ಸಮಿತಿ ರಚಿಸಿ-ಹೋರಾಥಗಾರ್ತಿ ಎಮ್.ಬಿ.ಕೊಟ್ರಮ್ಮ ಆಗ್ರಹ*-ಅಕ್ರಮ ಮದ್ಯ ಮಾರಾಟ ತಡೆಗೆ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ,ಐವರು ಮಹಿಳಾ ಹೋರಾಟಗಾರರನ್ನೊಳಗೊಂಡ ಸಮಿತಿುನ್ನ ರಚಿಸುವಂತೆ ಕ್ರಮಕೈಗೊಳ್ಳಬೇಕೆಂದು ಹೋರಾಟಗಾರ್ತಿ ಎಮ್.ಬಿ.ಕೊಟ್ರಮ್ಮ ಆಗ್ರಹಿಸಿದ್ದಾರೆ. ಅವರು ಹೊಸಪೇಟೆಯಲ್ಲಿ ವಿವಿದ ಭಾಗದ ಮಹಿಳಾ ಹೋರಾಟಗಾರರಿದಂ ಮದ್ಯ ಮಾರಾಟ ನಿಷೇಧಿಸುವಂತೆ ಕ್ರಮಕ್ಕಾಗಿ ಆಗ್ರಹಿಸಿ,ಮಹಿಳೆಯರು ಸರ್ಕಾರಕ್ಕೆ ತಮ್ಮ ಹಕ್ಕೋತ್ತಾಯ ಮಾಡಿ ಸೂಕ್ತ ಕ್ರಮಕ್ಕಾಗಿ,ಅವರು ಹೊಸಪೇಟೆ ತಾಪಂ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಅಕ್ರಮ ಮದ್ಯ ತಡೆಗೆ ಸರ್ಕಾರ ಮುಂದಾಗಬೇಕಿದೆ ನಿರ್ಲಕ್ಷ್ಯ ತೋರಿದ್ದಲ್ಲಿ ಹೋರಾಟ ಮುಂದುವರೆಸಲಾಗುವುದೆಂದು ಅವರು ಎಚರಿಸಿದರು. ಹರಪನಹಳ್ಳಿಯ ರೈತ ಹೋರಾಟಗಾರ್ತಿ ಭಾಗ್ಯಮ್ಮ ಮಾತನಾಡಿದರು.ಹೋರಾಟದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು. ಹರಪನಹಳ್ಳಿ ತಾಲೂಕು ಹಾಗೂ ಹೊಸಪೇಟೆ ತಾಲೂಕು,ಸಂಡೂರ್ ತಾಲೂಕು,ಹಡಗಲಿ ತಾಲೂಕು ಸೇರಿದಂತೆ ವಿವಿದ ಗ್ರಾಮೀಣ ಪ್ರದೇಶಗಳಿಂದ ಹೋರಾಟಗಾರರು ಆಗಮಿಸಿದ್ದರು.ಅಕ್ರಮ ಮಧ್ಯಾಮಾರಾಟ ತಡೆಯಲು ಪಂಚಾಯಿತಿ ಮಟ್ಟದಲ್ಲಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಪಂಚಾಯಿತಿ ಮಟ್ಟದಲ್ಲಿ. ವಿಶೇಷ ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.ಜಿಲ್ಲೆಯ ಪ್ರತಿ ತಾಲ್ಲೂಕಿನ ಹಲವು ಹಳ್ಳಿಗಳ ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿದ್ದರು. ಹಗರಿಬೊಮ್ಮನಹಳ್ಳಿಯ ತ್ರಿವೇಣಿ,ಸುಜಾತಾ,ಅಕ್ಕಮಹಾದೇವಿ,ಚಾಂದ್ ಬೀ,ಉಮಾದೇವಿ,ಅಂಜಿನಮ್ಮ ಹರಪನಹಳ್ಳಿ ಶೃತಿ,ಗೀತಾ,ರೇಣುಕ,ಕಾಳಮ್ಮ,ದಂಡೇಮ್ಮ.ಸಂಡೂರು ತಾಲೂಕಿನ ಶಂಕ್ರಮ್ಮ,ಹಡಗಲಿ,ಶಬ್ಬೀರ್ ಭಾಷಾ,ಬಿಠಲ್ ಮರಬ್ಬೀಹಾಳ್ ಕೊಟ್ರಮ್ಮ,ಶಬ್ಜೀರ್ ಹಡಗಲಿ.ಸೀನಮ್ಮ,ನಾಗಮ್ಮ,ಕಡಕ್ಕ,ಉಮಕ್ಕ,ಕಮಲಮ್ಮ,ರತ್ನಮ್ಮ,ಪವಿತ್ರ,ನೇತ್ರ,ರೇಣುಕಮ್ಮ,ಕರಿಬಸಮ್ಮ,ಶಾಂತಮ್ಮ,ಲಕ್ಷ್ಮೀದೇವಿ ಸೇರಿದಂತೆ ಅನೇಕ ಮಹಿಳಾ ಹೋರಾಟಗಾರರು ಭಾಗಹಿಸಿದ್ದರು.
ಸಂಜೆ ಹೋರಾಟಗಾರರು ಮಹಾತ್ಮಗಾಂಧಿಜಿಯವರ ಪ್ರತಿಮೆಯ ಮುಂದೆ,ಸಂಜೆಹೊತ್ತಲ್ಲಿ ಸಾಮೂಹಿಕವಾಗಿ ಮೇಣದ ಬತ್ತಿಯನ್ನ ಬೆಳಗಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಲಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
