ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 5 3.2021 . ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು*
*ನರೇಗಾ ಯೋಜನೆ ಅಡಿ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭ:— ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಂದ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭ. ಈ ದಿನ ಸಿದ್ದಾಪುರ ಗ್ರಾಮಕ್ಕೆ ಅಂಟಿಕೊಂಡಂತೆ ಹಳ್ಳಿಯ ಪಕ್ಕದಲ್ಲಿನ ಹಳ್ಳದಲ್ಲಿ ಕಾರ್ಮಿಕರಿಂದ ಹೂಳೆತ್ತುವ ಕೆಲಸ ಪ್ರಾರಂಭವಾಯಿತು. ಸುಮಾರು 160 ಕೂಲಿಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸ ಮಾಡಲು ನೋಂದಾಯಿಸಿದ್ದಾರೆ.
ಈ ದಿನ ಸುಮಾರು ನೂರಕ್ಕೂ ಹೆಚ್ಚು ಕೂಲಿಕಾರ್ಮಿಕರು ಹಳ್ಳದಲ್ಲಿ ಹೂಳೆತ್ತುವ ಕೆಲಸವನ್ನು ಮಾಡಿದರು. ಈ ಒಂದು ಸಮಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ ಎಂ ಜೀವ ಪ್ರಕಾಶ ಮತ್ತು ವಿಜಯಕುಮಾರ್ ರವರು ಕೂಲಿ ಕಾರ್ಮಿಕರ ಜೊತೆ ಉದ್ಯೋಗ ಖಾತ್ರಿ ಕೆಲಸದ ಬಗ್ಗೆ ಮಾತನಾಡಿದರು. ಸದಸ್ಯರಾದ ವಿಜಯಕುಮಾರ್ ಅವರ ಮಾತನಾಡಿ ಬೆಂಗಳೂರು-ಮಂಗಳೂರು ಕಾಫಿ ಎಸ್ಟೇಟ್ ಗೆ ವಲಸೆ ಹೋಗುವ ಬದಲು ಇದ್ದ ಊರಲ್ಲೇ ಇದ್ದು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು. ಸದಸ್ಯರಾದ ಡಿ ಎಂ ಜೀವ ಪ್ರಕಾಶ್ ಮಾತನಾಡಿ. ಯೋಜನೆಯಲ್ಲಿ 18 ವರ್ಷದ ಒಳಗಿನ ಮಕ್ಕಳು ಯಾರು ಕೆಲಸ ಮಾಡುವಂತಿಲ್ಲ. ಕೆಲಸ ಮಾಡುವುದು ಕಾನೂನು ಬಾಹಿರ. ಯೋಜನೆಯಲ್ಲಿ ಗಂಡು ಮಕ್ಕಳಿಗೂ ಹಾಗೂ ಹೆಣ್ಣುಮಕ್ಕಳಿಗೂ ಸರಿಸಮನಾದ ಕೂಲಿ ಇರುತ್ತದೆ. ಈ ಯೋಜನೆಯ ಉಪಯೋಗವನ್ನು ಪಡೆದುಕೊಂಡು ನಮ್ಮ ಊರಿನಲ್ಲಿ ಇದ್ದುಕೊಂಡು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿ. ವಲಸೆ ಹೋಗಿ ಕೋರೋನ ವೈರಸ್ ಹೆಮ್ಮಾರಿಯನ್ನು ಊರಿಗೆ ತಂದುಕೊಳ್ಳಬೇಡಿ ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಬೇರೆ ಕಡೆಗೆ ವಲಸೆ ಹೋಗದೆ ನರೇಗಾ ಯೋಜನೆಯ ಕೆಲಸವನ್ನು ಸದುಪಯೋಗ ಮಾಡಿ ಕೊಂಡು ಆರೋಗ್ಯದಿಂದ ಬಾಳಿ ಎಂದು ಕಿವಿಮಾತು ಹೇಳಿದರು. ಈ ಒಂದು ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಕೂಲಿ ಕಾರ್ಮಿಕರ ಕಾಯಕಬಂದು ಸಾರ್ವಜನಿಕರು ಉಪಸ್ಥಿತರಿದ್ದರು. ಯೋಜನೆ ಅಡಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
