;

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ: ಮಾನವ ಸರಪಳಿ ನಿರ್ಮಿಸಿ ವಕೀಲರ ಸಂಘದಿಂದ ಸರ್ಕಾರಕ್ಕೆ ಮನವಿ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು / ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯ, ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ವಕೀಲರ ಸಂಘದಿಂದ ಸರ್ಕಾರಕ್ಕೆ ಮನವಿ. ಹೊಸಪೇಟೆ ನೋಟರಿ ತಾರಿಹಳ್ಳಿ ವೆಂಕಟೇಶ ಕೊಲೆ ಪ್ರಕರಣ ಖಂಡಿಸಿ, ವಕೀಲರ ಹಿತ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪಟ್ಟಣದ ಕೆಇಬಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ವಕೀಲರ ರಕ್ಷಣೆಗೆ ಕೂಡಲೇ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಮಾನವ ಸರಪಳಿ ನಿರ್ಮಿಸಿ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ ಪ್ರಕರಣಗಳು ಮರುಕಳಿಸುತ್ತಿವೆ. ಕೊಲೆ ಪ್ರಕರಣ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಕೂಡಲೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಆರ್.ಆನಂದ್, ಉಪಾಧ್ಯಕ್ಷ ಡಿ.ಬಸವರಾಜ, ಕಾರ್ಯದರ್ಶಿ ಎ.ಡಿ. ರಾಘವೇಂದ್ರ, ಕೆ.ಎಂ.ರಾಮಾಂಜಿನೇಯ, ಹಿರಿಯ ವಕೀಲರಾದ ವಸಂತಕುಮಾರ್, ಬಿ.ವಿ.ಚಾಣಕ್ಯ, ಬಿ.ಆರ್.ಸುರೇಶ, ಟಿ. ಚಂದ್ರಶೇಖರಪ್ಪ, ಮಲ್ಲಿಕಾರ್ಜುನ, ಎಂ.ಜಯರಾಂ, ಬಿ.ಟಿ.ಮಲ್ಲಿಕಾರ್ಜುನ, ಕೆ.ಆರ್. ಶಿವಕುಮಾರ್, ಎಚ್.ಸಿ. ಪ್ರದೀಪ್‌ಕುಮಾರ್, ಅನಸೂಯ, ಎಂ. ಚಂದ್ರಣ್ಣಬಸವರಾಜ, ಶಮೀವುಲ್ಲಾ ಪಾಪಯ್ಯ, ಮಂಜುನಾಥ, ವಿನೋದ, ಚಂದ್ರಣ್ಣ, ಜಯರಾಂ, ಗಂಗಮೂರ್ತಿ, ಹುಲುಗಪ್ಪ, ಚಂದ್ರಶೇಖರ್, ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;