ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟಣ್ಣದಲ್ಲಿ ಇಂದು ಮಾರ್ಚ್-1- 2021ರ ತಾಲೂಕು ವಕೀಲರ ಸಂಘದ ವತಿಯಿಂದ. ವಕೀಲ ವೆಂಕಟೇಶ್ ಅಂತ್ಯ ಆರೋಪಿಗೆ ಶಿಕ್ಷೆಗೆ ಆಗ್ರಹ. ಕೊಡುವಂತೆ ಮೊಳಕಾಲ್ಮೂರು ತಾಸಿಲ್ದಾರ್ ಗೆ ಮನವಿ ಸಲ್ಲಿಸಿದರು. ಕಳೆದ ಪ್ರಬ್ರವರಿ 27-2021 ರಂದು ಬೆಳಿಗ್ಗೆ ಬಳ್ಳಾರಿ ಜಿಲ್ಲೆ, ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ವಕೀಲರು ಹಾಗೂ ನೋಟರಿ ಆದ ತಾರೀಕಟ್ಟೆ ವೆಂಕಟೇಶ್ ಅವರ ಭೀಕರ ಹತ್ಯೆ ದುರ್ಘಟನೆಯ ಬಗ್ಗೆ ನಮ್ಮ ಸಂಘದ ವತಿಯಿಂದ ಪ್ರತಿಭಟಿಸುವ ಕುರಿತು. ವಕೀಲರಾದ ತಾರೀಕಟ್ಟೆ ವೆಂಕಟೇಶ್ ರವರ ಮೇಲೆ ಕೆಲವು ವ್ಯಕ್ತಿಗಳು ಅಮಾನುಷವಾಗಿ ಮಚ್ಚಿನಿಂದ ಕೊಲೆ ಮಾಡಿರುತ್ತಾರೆ. ಸದರಿ ವಿಷಯವಾಗಿ ವಕೀಲರ ಸಂಘದಿಂದ ಸಭೆಯನ್ನು ಮಾಡಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಘಟನೆಯನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರನ್ನು ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕೆಂದು ಹಾಗೂ ವಕೀಲರಿಗೆ ಸರ್ಕಾರದಿಂದ ಸೂಕ್ತ ರಕ್ಷಣೆಯನ್ನು ಒದಗಿಸಬೇಕೆಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಮೊಳಕಾಲ್ಮೂರು ವಕೀಲರ ಸಂಘದಿಂದ ಮಾನ್ಯ ತಹಶೀಲ್ದಾರರಿಗೆ ಮನವಿಯನ್ನು ನೀಡಿ ಮಾತನಾಡಿದರು. ತಾವುಗಳು ನಮ್ಮ ಮನವಿಯನ್ನು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಕಳುಹಿಸಿಕೊಡಲು ಕೋರಿದೆ. ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷರಾದ ಆರ್ ಆನಂದ, ಡಿ ಬಸವರಾಜ್ ಉಪಾಧ್ಯಕ್ಷರು, ವಿ.ಡಿ ರಾಘವೇಂದ್ರ, ಕೆ.ಎಂ ರಾಮಾಂಜನೇಯ, ಸದಸ್ಯರುಗಳು- ಬಿ.ಆರ್ ಸುರೇಶ್, ಚಂದ್ರಶೇಖರಪ್ಪ, ಮಲ್ಲಿಕಾರ್ಜುನ್ ಆರ್.ಚಿ, ಮಲ್ಲಿಕಾರ್ಜುನ್ ಜಿ.ಟಿ, ಶಿವಕುಮಾರ್ ಕೆ.ಆರ್, ಪ್ರದೀಪ್, ಅನುಸೂಯ, ಚಂದ್ರಣ್ಣ, ಬಸವರಾಜ್, ಶಿವಣ್ಣ, ವಕೀಲ ಸಂಘದ ಎಲ್ಲಾ ವಕೀಲರು ಉಪಸ್ಥಿತರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
