;

ಆಧುನಿಕ ಪಶುಪಾಲನಾ ಪದ್ಧತಿಗಳ ಕುರಿತು ತರಬೇತಿ ಕಾರ್ಯಕ್ರಮ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ.27.2.2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು*
*ಆಧುನಿಕ ಪಶುಪಾಲನಾ ಪದ್ಧತಿಗಳ ಕುರಿತು ತರಬೇತಿ ಕಾರ್ಯಕ್ರಮ*
ದಿನಾಂಕ. 25 .2 .2021.* ರಂದು ಪಟ್ಟಣದ ಕೆಎಂಎಫ್ ಹಾಲು ಶೀತಲೀಕರಣ ಕೇಂದ್ರ ಕೂಡ್ಲಿಗಿಯಲ್ಲಿ ಹೈನುಗಾರಿಕೆ ಕುರಿ ಮತ್ತು ಮೇಕೆ ಸಾಕಾಣಿಕೆ ಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾ.ಬ. ಕೋ .ಹಾಲು ಒಕ್ಕೂಟದ ನಿರ್ದೇಶಕರಾದ ಮಾನ್ಯ ಶ್ರೀ ಹೆಚ್ . ಮರುಳಸಿದ್ದಪ್ಪನವರು ನೆರವೇರಿಸಿದರು. ಈ ಕಾರ್ಯಕ್ರಮ ಕುರಿತು ಡಾಕ್ಟರ್ ಶಶಿಧರ್ ರವರು ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಮೇಕೆ ಸಾಕಾಣಿಕೆ ಬಗ್ಗೆ ರಾ ಸು ನಿರ್ವಹಣೆ ಪಶು ಸಂಬಂಧಿ ಕಾಯಿಲೆಗಳ ಬಗ್ಗೆ ಮಾತನಾಡಿದರು. ಕೂಡ್ಲಿಗಿ ತಾಲೂಕಿನ ಪಶುವೈದ್ಯಾಧಿಕಾರಿ ಡಾಕ್ಟರ್ ಸುನಿಲ್. ಡಾಕ್ಟರ್ ರವಿಶಂಕರ್. ಡಾಕ್ಟರ್ ಲೋಹಿತ್ ಕುಮಾರ್. ಇವರು ಗಳು ಪಶು ಸಂಬಂಧಿ ಕುರಿ ಸಾಕಾಣಿಕೆ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರೈತರಿಗೂ ಹಾಗೂ ರೈತ ಮಹಿಳೆಯರಿಗೆ ಹಸು ಮೇಕೆ ಕುರಿಗಳನ್ನು ಯಾವ ರೀತಿ ರೋಗ-ರುಜಿನಗಳಿಂದ ರಕ್ಷಿಸಬೇಕೆಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ಹಾಲು ಒಕ್ಕೂಟದ ಎಲ್ಲಾ ಅಧಿಕಾರಿಗಳು ಹಾಲು ಒಕ್ಕೂಟಕ್ಕೆ ಸಂಬಂಧಿಸಿದ ಸಿಬ್ಬಂದಿ ಹಳ್ಳಿಯ ರೈತರು ಮಹಿಳೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;