;

ಹೊಸಪೇಟೆ :ಸಂಚು ಹಾಕಿ ಕುಳಿತಿದ್ದ 13ಜನ ದರೋಡೆಕೊರರನ್ನ ಹೆಡೆ ಮುರಿಕಟ್ಟಿದ ಪೊಲೀಸರು…

ವರದಿ. ಮಂಜುನಾಥ್ ದೊಡ್ಡಮನಿ

*ಹೊಸಪೇಟೆ:ಸಂಚು ಹಾಕಿ ಕುಳಿತಿದ್ದ,13ಜನ ದರೋಡೆ ಕೊರರನ್ನ ಹೆಡೆ ಮುರಿಕಟ್ಟಿದ ಪೊಲೀಸರು*

ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಸಿನಿಮೀಯ ರೀತಿಯಲ್ಲಿ ಮನೆಗಳ್ಳತನಕ್ಕೆ ಹೊಂಚು ಹಾಕಿಕುಳಿತಿದ್ದ,13ಜನ ದರೋಡೆಕೋರರನ್ನು ಹೊಸಪೇಟೆ ನಗರ ಠಾಣೆ ಪೊಲೀಸರು ಫೆಬ್ರವರಿ 25ರಂದು ಬಂಧಿಸಿದ್ದಾರೆ.ಬಂಧಿತರಿಂದ ಎರೆಡು ಕಾರು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೊಸಪೇಟೆ ನಗರದ ಪೊಲೀಸ್ ಠಾಣೆಯಲ್ಲಿ ಹಂಪಿ ಡಿವೖೆಎಸ್ಪಿ ಕಾಶಿಗೌಡರು,ಈ ಕುರಿತು ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.ಬೆಂಗಳೂರು ಮೂಲದ ಕುಖ್ಯಾತ ದರೋಡೆಕೋರರ ಗುಂಪೊಂದು ನಗರದಲ್ಲಿ,ಆರೋಪಿಗಳು ದರೋಡೆ ಹಾಗೂ ಮನೆಗಳ್ಳತನಕ್ಕಾಗಿ ಹೊಂಚು ಹಾಕಿರುವ ಖಚಿತ ಮಾಹಿತಿ ಆಧರಿಸಿ,ಪೊಲೀಸ್ ಸಿಬ್ಬಂದಿ ದಾಳಿ ನಡೆಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.ಬೆಂಗಳೂರು ಮೂಲದ 7ಹಾಗೂ ಹೊಸಪೇಟೆಯ 6ಜನ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದರು.ಆರೋಪಿಗಳಾದ ಜಮೀರ್ ಪಾಷಾ(32),ಮೊಹಮದ್ ಅಯಾಸ್ ಖಾನ್(33),ಸಯದ್ ಇಂತಿಯಾಜ್(32),ನಾಲ್ಪರ್ ಖಾಸೀಂ(32),ಇಸ್ಮಾಯಿಲ್(30)ಮಂಜನಾಥ(36),ಸುರೇಶ್(41),ನಾಗೇಶ್(38),ರಾಘವೇಂದ್ರ ರೆಡ್ಡಿ(63),ಶೇಖರ್(26) ಸೇರಿದಂತೆ ಒಟ್ಟು 13ಜನ ದರೋಡೆ ಕೋರರನ್ನ. ಹೊಸಪೇಟೆ ನಗರ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಜಿಲ್ಲಾ ವರಿಷ್ಠಾದಿಕಾರಿಗಳ ನೇತೃತ್ವದಲ್ಲಿ 2ತಂಡವನ್ನು ರಚಿಸಿ ಪ್ರಕರಣ ಬೇಧಿಸಲಾಗಿದ್ದು,ಪ್ರಕರಣ ಕುರಿತಂತೆ ಇನ್ನೋರ್ವ ಆರೋಪಿ ಸದ್ದಾಂ ಹುಸೇನ್ ಎಂಬಾತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧಕಾರ್ಯ ನಡೆದಿದೆ ಎಂದರು.ಸಿಪಿಐ ಎಂ.ಶ್ರೀನಿವಾಸ,ಪಿಎಸ್ಐ ಯಲ್ಲಪ್ಪ,ಜಡಿಯಪ್ಪ,ಎಸೈಐ ಮಲ್ಲೇಶಪ್ಪ ಸೇರಿದಂತೆ ಇತರರು ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;