ಕಂಪಳ ರಂಗಸ್ವಾಮಿ ಪ್ರೌಢಶಾಲೆಯ ಮುಖ್ಯ ಗುರುಗಳಾಗಿ ಶ್ರೀ . B.j ಅಜ್ಜಯ್ಯ ನವರು ಅಧಿಕಾರ ವಹಿಸಿಕೊಂಡರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 23. 2 .2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೂಡೇಮ್ ಗ್ರಾಮ*

ತಾಲೂಕಿನ ಹೂಡೇಂ ಗ್ರಾಮದ ಕಂಪಳ ರಂಗಸ್ವಾಮಿ ಪ್ರೌಢಶಾಲೆಯ ಮುಖ್ಯ ಗುರುಗಳಾಗಿ ಶ್ರೀ . B.j ಅಜ್ಜಯ್ಯ ನವರು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ನರಸಿಂಹನಗಿರಿ ವಿದ್ಯಾ ಸಂಸ್ಥೆ ಬಗ್ಗೆ ಸ ಹಿ ಪ್ರಾ ಶಾಲೆ ಯ ಬಡ್ತಿ ಮುಖ್ಯಗುರುಗಳಾದ ಜಿ ಸೋಮಶೇಖರಪ್ಪ ನವರು ಅಧಿಕಾರ ಎನ್ನುವುದು ಒಂದು ರೀತಿ ಮುಳ್ಳಿನ ಹಾಸಿಗೆ ಇದ್ದಾಗೆ ಮತ್ತೊಂದು ರೀತಿ ಹೂವಿನ ಹಾಸಿಗೆ ಇದ್ದಹಾಗೆ ಹೂವಿನ ಹಾಸಿಗೆ ಆಗಬೇಕೆಂದರೆ ಸಹಶಿಕ್ಷಕರು ಸಿಬ್ಬಂದಿ ವರ್ಗದವರು ಎಲ್ಲಾ ರೀತಿಯಿಂದಲೂ ಸಹಕಾರ ಕೊಟ್ಟರೆ ಮಾತ್ರ ಈ ಸಂಸ್ಥೆ ಪ್ರಜ್ವಲವಾಗಿ ಬೆಳೆದು ಇತರರಿಗೂ ಬೆಳಕು ಕೊಡುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಮುಖ್ಯಗುರುಗಳಾಗಿ ಅಧಿಕಾರ ಸ್ವೀಕರಿಸಿದ ಬಿ ಜೆ ಅಜ್ಜಯ್ಯ ನವರು ನಿಮ್ಮೆಲ್ಲರ ಸಿಬ್ಬಂದಿಯವರ ಸಹಕಾರ ಸಹಾನುಭೂತಿ ಸಹಾಯ ಒಂದಿದ್ದರೆ ನಾವೆಲ್ಲರೂ ಸೇರಿ ಈ ಸಂಸ್ಥೆಯ ಮಕ್ಕಳ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯ ಎಂದರು. ಸದ್ರಿ ಶಾಲೆಯ ಡಿ ಕಲಂದರ್ ರವರು ಎಲ್ಲರನ್ನೂ ಸ್ವಾಗತಿಸಿದರು ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗೋವಿಂದಪ್ಪನವರು ಸಹ ಶಿಕ್ಷಕರಾದ ಮಾಯಿ ಚಂದ್ರಪ್ಪ ನವರು ಶ್ರೀಮತಿ ಕೆ.ಜಿ. ದೇವಿರಮ್ಮ. ಜಂಬುನಾಥ್. ಜಿ ರಮೇಶ್ ಕೆ ಚಿನ್ನಸ್ವಾಮಿ ಸುಪ್ರೀತ್ ಕುಮಾರ್. ಎಂ. ಸೋಮಣ್ಣ ಈ ಕಾರ್ಯಕ್ರಮದಲ್ಲಿ ಒಂದನಾರ್ಪಣೆ ಸಲ್ಲಿಸಿ ಸಭೆಯನ್ನು ಮುಕ್ತಾಯಗೊಳಿಸಿದರು ಈ ಒಂದು ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಸಂಸ್ಥೆಯ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend