ಏಕಾಂಗಿಯಾಗಿ ನಾಮಫಲಕ ಹಿಡಿದು ಯುವಕ ಹೋರಾಟ…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ನಾಮಫಲಕ ಹಿಡಿದು ಯುವ ಸಾಹಿತಿ ಧನುಂಜಯ ಲೋಕಿಕೆರೆ ಹೋರಾಟ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಲೋಕಿಕೆರೆ ಗ್ರಾಮದಲ್ಲಿ ತಾಲ್ಲೂಕು ಆಡಳಿತದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಸರ್ಕಾರದ ವಿನೂತನ ಯೋಜನೆ ಕಾರ್ಯಕ್ರಮ ನಡೆಯುತ್ತಿತ್ತು. ಅದರ ಎದುರಿಗೆ ಇತ್ತ ಗ್ರಾಮದ ಯುವ ಸಾಹಿತಿ ಧನಂಜಯ ಏಕಾಂಗಿಯಾಗಿ ನಾಮಫಲಕ ಹಿಡಿದು ಹೋರಾಟ ನಡೆಸಿದರು.
ಅವರು ಆಡಳಿತದ ವಿರುದ್ಧ ಏಕಾಂಗಿಯಾಗಿ ನಾಮಫಲಕ ಹಿಡಿದು ಅಕ್ರಮ ಸಾಗುವಳಿ ಭೂಮಿಯನ್ನು ತೆರೆವುಗೊಳಿಸಿ ಉಳ್ಳವರು ಉಳುಮೆ ಮಾಡುತ್ತಿದ್ದಾರೆ. ಇದನ್ನು ಪರಿಶೀಲನೆ ಮಾಡಬೇಕು. ಅಂಥವರಿಂದ ಬಿಡಿಸಿ ದನ-ಕರುಗಳಿಗೆ/ಕುರಿಗಳಿಗೆ /ಮೇಕೆಗಳಿಗೆ ಜಾನುವಾರುಗಳಿಗೆ – ಮೇಯಲು ಅನುಕೂಲ ಮಾಡಬೇಕು ಹಾಗೂ ಮನೆ ವಿತರಣೆಯಲ್ಲಿ ಗ್ರಾಮಪಂಚಾಯಿತಿಯ ತಾರತಮ್ಯ ಮಾಡುತ್ತಿದ್ದು ಎಂದು ಪ್ರತಿಭಟನೆ ಮಾಡಿದರು ಹೊಸಹಳ್ಳಿಯ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿ ನಂತರ ಧನಂಜಯ ಹೋರಾಟದ ಮನವಿ ಪತ್ರವನ್ನು ತಹಸೀಲ್ದಾರ್ ರವರಿಗೆ ಸಲ್ಲಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend