ನಾಯಕನಹಟ್ಟಿ: ಪಿ.ಎಸ್.ಐ ಮಹೇಶ್: ರಸ್ತೆ ಸುರಕ್ಷೆ ಜೀವ ರಕ್ಷೆ ಜಾಗೃತಿ: ವಾಹನ ಚಾಲಕರಿಗೆ ಎಚ್ಚರಿಕೆ.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ನಾಯಕನಹಟ್ಟಿ: ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಮದ್ಯಪಾನ ಮಾಡಿದರೆ ನಿಮ್ಮ ವಾಹನಗಳನ್ನು ಸೀಜ್ ಮಾಡಲಾಗುತ್ತದೆ. ಎಂದು ನಾಯಕನಹಟ್ಟಿಯ ಪಿ.ಎಸ್.ಐ ಮಹೇಶ್ ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರು ನಾಯಕನಹಟ್ಟಿ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಸ್ತೆ ಸುರಕ್ಷತಾಶ ಸಪ್ತಾಹ ಮತ್ತು ರಸ್ತೆ ಸುರಕ್ಷೆ ಜೀವ ರಕ್ಷೆ ಜಾಗೃತಿ ಮೂಡಿಸಿದರು ೧೦ನೇ ತರಗತಿ ಹಾಗೂ ಪಿಯೂಸಿ ಮಕ್ಕಳ ಕೈಗೆ ವಾಹನಗಳು ಸಿಗುತ್ತಿವೆ ಹಿಗಾದಂತೆ ತಡೆಯುವುದು ಅಪ್ಪ ಅಮ್ಮನ ಜವಬ್ದಾರಿಯಾಗಿದೆ. ಅವರಿಗೆ ವಾಹನಗಳನ್ನು ಕೊಡಬಾರದು. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಸಮಿತಿ ರಚಿಸಲಾಗುವುದು. ಸಾರ್ವಜನಿಕರಿಂದಲೇ ಮಾಹಿತಿ ಸಂಗ್ರಹಿಸಿ ಸಂಚಾರಕ್ಕೆ ಹೊಸ ನಿಯಮಗಳನ್ನು ಅಳವಡಿಸಲು ಸಿದ್ದತೆ ನಡೆಸಿದ್ದೇವೆ ಎಂದರು. ಯುವ ಶಕ್ತಿಯಿಂದಲೇ ಬದಲಾವಣೆಶಎಂಬುವದಾಗಿದೆ. ಮುಂದಿನ ಯುವ ಪೀಳೆಗೆಯನ್ನು ಗುರಿಯಾಗಿಟ್ಟು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಸಂಚಾರ ನಿಯಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ವಾಹನ ಚಲಾಯಿಸುವವನು ಅವರ ಜೀವ ಮಾತ್ರವಲ್ಲ ಇತರರ ಜೀವವನ್ನೂ ರಕ್ಷಿಸಬೇಕಾಗಿದೆ. ಆದ್ದರಿಂದ ಸಂಚಾರ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ರಸ್ತೆಯಲ್ಲಿ ನಾನು ಮೊದಲು ಎನ್ನುವುದು ಅಪಘಾತಕ್ಕೆ ಮೂಲ ಕಾರಣವಾಗಿದೆ ನಾವೇಲ್ಲರೂ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ರಾಜ್ಯವನ್ನು ಅಪಘಾತ ಮುಕ್ತ ರಾಜ್ಯವನ್ನಾಗಿಸೋಣ ಎಂದು ಹೇಳಿದರು. ದೇಶದಲ್ಲಿ ಆತಂಕ ಹುಟ್ಟಿಸುವ ಸಂಘತಿ ಎಂದರೆ ರಸ್ತೆ ಅಪಘಾತವಾಗಿದೆ ಇತ್ತೀಚಿನ ಅಪಘಾತಗಳು ಅಷ್ಟೊಂದು ಅಪಘಾತಗಳು ಉಂಟುಮಾಡುತ್ತಿವೆ. ಅಪಘಾತಗಳ ಸಂಖ್ಯೆ ಕಡಿಮೆಗೊಳಿಸಲು ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು ವಾಹನ ಚಾಲನೆಯ ವೇಳೆ ಚಾಲಕರು ವಹಿಸಿಕೊಳ್ಳಬೇಕಾದ ಮುಂಜಾಗೃತ ಕ್ರಮಗಳು ಸಂಚಾರಿ ನಿಯಮಗಳ ಪಾಲನೆ ಕಾನೂನು ಕ್ರಮಗಳ ಕುರಿತು ಪೊಲೀಸ್ ಮಾಹಿತಿ ನೀಡಿದರು. ಮತ್ತು ಯುವಕರು ಅತೀ ವೇಗವಾಗಿ ವಾಹನ ಚಲಾಯಿಸಬೇಡಿ ಚಲಾಯಿಸಿದರೆ ನಿಮ್ಮ ಪ್ರಾಣಕ್ಕೆ ಆಪತ್ತು ಬರುತ್ತದೆ ಹುಷಾರಾಗಿ ವಾಹನ ಚಲಾಯಿಸಿ ದ್ವಿಚಕ್ರ ವಾಹನರು ಲೈಸೆಸ್ಟ್ ಡಿಎಲ್ ಮಾಡಿಸಿಕೊಳ್ಳಿ ಎಂದು ಹೇಳಿದರು. ವಾಹನ ಚಾಲಕರು, ಆಟೋ ಚಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend