ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಸಾರ್ವಜನಿಕ ಆಸ್ಪತ್ರೆ ದುರಾವಸ್ಥೆ ಸುಧಾರಿಸದಿದ್ದಲ್ಲಿ ಹೋರಾಟ-ಗುನ್ನಳ್ಳಿ ರಾಘವೇಂದ್ರ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೇಬಿಸ್ ಲಸಿಕೆ ಅಲಭ್ಯ,ವಿಷಯ ತಿಳಿದ ಕಾರ್ಮಿಕ ಮುಖಂಡ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಯಿ ಕಚ್ಚಿದ ಮಗುವಿನೊಂದಿಗೆ ಚಿಕಿತ್ಸೆಗಾಗಿ ಅವರು ಆಸಚಪತ್ರೆಗೆ ತೆರಳಿದ್ದು,2ತಾಸುಗಳ ಕಾಲ ಯಾವೊಬ್ಬ ವೈದ್ಯರು ಅಥವಾ ಸಿಬ್ಬಂದಿ ಅವರಿಗೆ ದೊರಕಿಲ್ಲ.ಅವ್ಯವಸ್ಥೆಯನ್ನ ತಾವೇ ಅನುಭವಿಸಿದ ಕಾರಣ,ಅಸ್ಪತ್ರೆಯಲ್ಲಿ ಸಾರ್ವಜನಿಕರು ಹಾಗೂ ರೋಗಿಗಳು ಅನುಭವಿಸುವ ನರಕಯಾತೆನೆಯನ್ನ ಕಂಡ ಅವರು.ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಅವ್ಯವಸ್ಥೆಯನ್ನ ಖಂಡಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿಗಳ ಹೊಣೆಗೇಡಿತನಕ್ಕೆ ಇದು ಸಾಕ್ಷಿ,ಅವರು ಪ್ರಾಮಾಣಿಕರಾಗಿದ್ದರೆ ದುರಾವಸ್ಥೆ ಸರಿಪಡಿಸಲಿ ಮತ್ತು ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ವಿರುದ್ಧ ಶಿಸ್ಥು ಕ್ರಮ ಜರುಗಿಸಲಿ ಎಂದು ಸವಾಲು ಹಾಕಿದ್ದಾರೆ.ತಾಲೂಕು ಕೇಂದ್ರದಲ್ಲಿರುವ 100ಹಾಸಿಗೆ ಆಸ್ಪತ್ರೆಯಲ್ಲಿ,ಇಂಥಹ ದುರಾವಸ್ಥೆನಾ.? ನಾಯಿಕಡಿತಕ್ಕೆ ಲಸಿಕೆ ಇಲ್ಲವೇ ಎಂದು ಸಿಬ್ಬಂದಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಆಸ್ಪತ್ರೆ ಸಿಬ್ಬಂದಿ ವಿರುಪಾಕ್ಷಪ್ಪರಿಂದ 100ರೂ ಪಡೆದು ಖಾಸಗಿ ಮೆಡಿಕಲ್ ಸ್ಟೋರ್ ನಿಂದ ಲಸಿಕೆ ಖರೀದಿ ಮಾಡಿ ತಂದು,ಆಸ್ಪತ್ರೆಯ ಸಿಬ್ಬಂದಿ ವಿರುಪಾಕ್ಷಪ್ಪ ಕರೆತಂದಿದ್ದ ಮಗುವಿಗೆ ಲಸಿಕೆ ಹಾಕಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈಧ್ಯಧಿಕಾರಿಗಳು ನಿಷ್ಠಾವಂತರಾಗಿದ್ದರೆ,ಇಲ್ಲಿಯ ಸೋಮಾರಿ ಸಿಬ್ಬಂದಿಯನ್ನ ಬದಲಿಸಲಿ ಹಾಗೂ ಸಮರ್ಪಕವಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸಲಿ ಎಂದಿದ್ದಾರೆ.ನಿರ್ಲಕ್ಷಿದಲ್ಲಿ ಕಾನೂನಾತ್ಮಕ ಹೋರಾಟ ಅನಿವಾರ್ಯವಾಗಲಿದೆ, ಹಾಗೂ ಬ್ರಷ್ಠರ ವಿರುದ್ಧ ಕ್ರಮಕ್ಕಾಗಿ ಆಸ್ಪತ್ರೆ ಮುತ್ತಿಗೆ ಹಾಕಿ ಹೋರಾಟ ಹೋರಾಟ ಮಾಡಲಾಗುವುದು ಎಂದು ವಿರುಪಾಕ್ಷಪ್ಪ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಕೀಲರಾದ ಹೆಚ್.ವೆಂಕಟೇಶ್ ಮಾತನಾಡಿ,ಸಿಬ್ಬಂದಿಗಳು ಕರ್ಥವ್ಯದಲ್ಲಿ ಮಗ್ನರಾಗದೇ ಸದಾ ಮೊಬೈಲ್ ಹಿಡಿದು ರೋಗಿಗಳನ್ನ ನಿರ್ಲಕ್ಷ್ಯ ತೋರುತ್ತಾರೆ.ಇನ್ನೂ ಹಲವು ಸಿಬ್ಬಂದಿಗಳು ಹೆಸರಿಗಷ್ಟೇ ಹಾಜರಾತಿಯಲ್ಲಿ ಸಹಿ ಮಾಡಿ,ಅನಗತ್ಯವಾಗಿ ಪಟ್ಟಣದೆಲ್ಲೆಡೆ ಮೊಜು ಮಸ್ಥಿ ಮಾಡಿ ಕಾಲಹರಣ ಮಾಡುತ್ತಿರುತ್ತಾರೆ.ಇದರಿಂದಾಗಿ ರೋಗಿಗಳು ತೀವ್ರ ಪರದಾಡುವಂತಾಗಿದೆ,ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕಿದೆ ಎಂದು ದೂರಿದರು.ವಕೀಲರಾದ ಯು.ಚಂದ್ರು ಮಾತನಾಡಿ ಆಸ್ಪತ್ರೆಗೆ ತೆರಳಬೇಕಾದರೆ, ಹಣ ತೆಗೆದುಕೊಂಡು ಹೋಗಬೇಕು ಬಿಟ್ರೆ ಅಲ್ಲಿರುವ ಕೆಲ ಸಿಬ್ಬಂದಿಗೆ ಮಸ್ಕ ಹೊಡಿಬೇಕು.
ಅಥವಾ ಪ್ರಭಾವಿ ರಾಜಕಾರಣಿಗಳೊಂದಿಗೆ ಫೊನ್ ಮಾಡಿಸಬೇಕು, ಇಲ್ಲದಿದ್ದರೆ ಬೊಬ್ಬೆ ಹೊಡೆದ್ರೂ ಮಾತನಾಡಿಸೋಲ್ಲ ಎಂದು ಗಂಭೀರವಾಗಿ ದೂರಿದ್ದಾರೆ. ಎಸ್ಡಿಎಮ್ಸಿ ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿ,
ತಾಲೂಕು ಆಸ್ಪತ್ರೆಯಾಗಿದ್ದು ಅಗತ್ಯ ವೈದ್ಯರಿಲ್ಲ.ಅಗತ್ಯ ಸಿಬ್ಬಂದಗಳಿಲ್ಲ ಇದ್ದರೂ ಮೊಬೈಲ್ ನಲ್ಲಿ ತೇಲುತಿರುತ್ತಾರೆ.ರೋಗಿಗಳನ್ನ ಆಲಿಸಲ್ಲ ರೋಗಿಗಳಿಗೆ ಔಷಧಿ ಸಮರ್ಪಕವಾಗಿ ಒದಗಿಸಲ್ಲ,ಕೆಲ ನೌಕರರು ಖಾಸಗೀ ಮೆಡಿಕಲ್ ಸ್ಟೋರ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬಂದಿವೆ.ಸಾಕ್ಷಿ ಪುರಾವೆ ಯೊಂದಿಗೆ ಜಿಲ್ಲಾಧಿಕಾರಿಗಳ ಸಮ್ಮಖದಲ್ಲಿ ಲಿಖಿತ ದೂರು ನೀಡಲಾಗುವುದು,ಸಾರ್ವಜನಿಕರ ಹಾಗೂ ರೊಗಿಗಳ ಕ್ಷೇಮಕ್ಕಾಗಿ ನಾವು ಬ್ರಷ್ಠರ ವಿರುದ್ಧ ಕಾನೂನು ಸಮರ ಸಾರುತ್ತೇವೆ ಎಂದಿದ್ದಾರೆ. ಹಳ್ಳಿಗಲಿರುವ ಹಾಗೂ ಅರಣ್ಯ ಪ್ರದೇಶವನ್ನ ಹೊಳಗೊಂಡಿರುವ ತಾಲೂಕಾಗಿದ್ದು,ತಾಲೂಕು ಕೇಂದ್ರದ 100ಹಾಸಿಗರ ಆಸ್ಪತ್ರೆಯಾಗಿದೆ. ವಿಷಕ್ರಿಮಿಗಳ,ನಾಯಿ,ವನ್ಯ ಪ್ರಾಣಿಗಳ ಹಾವಳಿಗೆ ತುತ್ತಾಗೋದು ಹೆಚ್ಚು,ಕಾರಣ ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ಇಲಾಖೆ ಒದಗಿಸಬೇಕಿದೆ.ಸಿಬ್ಬಂದಿಯವರು ಔಷಧಿಗಳನ್ನ ಸಾಮಾಗ್ರಿಗಳನ್ನು ಮಾರಿಕಳ್ಳಬಾರದು.ಸರ್ಕಾರಿ ಸಂಬಳ ತಿಂದು ಜನರಿಗೆ ದ್ರೋಹ ಮಾಡಬಾರದು, ಅವರ ಕಣ್ಣೀರು ಶಾಪ ನಿಮಗೇ ನಿಮ್ಮ ಮನೆತನಕ್ಕೇ ತಟ್ಟುತ್ತದೆ.ಶಾಪಕ್ಕೆ ಗುರಿಯಾದವರಾಗಲಿ ಅವರ ಮನೆತನವಾಗಲೀ ಉದ್ದಾರವಾಗಲ್ಲ.ಔಷಧಿ ಮಾರಿಕೊಳ್ಳಬೇಡಿ ಸರಿಯಾಗಿ ಕೆಲಸ ಮಾಡಿ ಸಂಬಳ ತಿನ್ನಿರಿ,ಇದನ್ನ ಮನಸ್ಸಿನಲ್ಲಿ ಎಲ್ಲರೂ ಇಟಗಬೇಕು ಎಂದರು.ಸಣ್ಣ ಸಣ್ಣ ಚಿಕಿತ್ಸೆಗೂ ಬಳ್ಳಾರಿಗೆ ಕಳುಹಿಸುತ್ತಿದ್ದು,ಇದು ಇಲ್ಲಿಯ ವೈಧ್ಯಾಧಿಕಾರಿ ಹಾಗೂ ವೈಧ್ಯರ ಹೊಣೆಗೇಡಿತನದ ಲಕ್ಷಣವಾಗಿದೆ,ಸಿಬ್ಬಂದಿಯ ಸೋಮಾರಿತನಕ್ಕೆ ಸಾಕ್ಷಿಯಾಗಿದೆ.ವೈದ್ಯರಿಗೆ ಸಿಬ್ಬಂದಿಗೆ ಸರ್ಕಾರ ಪ್ರತಿ ತಿಂಗಳು ಲಕ್ಷಾನುಲಕ್ಷ ಸಂಬಳ ನೀಡುತ್ತಿದೆ,ಸಾಕಷ್ಟು ಔಷಧಿ ಸೌಲಭ್ಯ ನೀಡುತ್ತಿರುವುದು ವ್ಯರ್ಥವಾಗುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಸಿದರು.ಇಲ್ಲಿಯ ಕೆಲ ಅವ್ಯವಹಾರ ಹಾಗೂ ಸಿಬ್ಬಂದಿಯ ಕರ್ಥವ್ಯ ಲೋಪಕ್ಕೆ ಸಂಬಂಧಿಸಿದಂತೆ,ಅಗತ್ಯ ಸಾಕ್ಷಿ ಪುರಾವೆ ದಾಖಲೆಗಳೊಂದಿಗೆ ಉನ್ನಾಧಿಕಾರಿಗಳಿಗೆ ದೂರು ನೀಡಲಾಗುವುದು ಮತ್ತು ಆಸ್ಪತ್ರೆಗೆ ಮುತ್ತಿಗೆ ಹಾಕಿ ಬೀಗ ಹಾಕಿ ಅನ್ಯಾಯದ ವಿರುದ್ಧ ಪ್ರತಿಭಟಿಸಲಾಗುವುದೆಂದುಗುನ್ನಳ್ಳಿ ರಾಘವೇಂದ್ರ ಎಚ್ಚರಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
