;

ಕೂಡ್ಲಿಗಿ, ಗುಡೇಕೋಟೆ,ಪಿಎಸ್ಐ ಸೇರಿದಂತೆ 3 ಜಿಲ್ಲೆಯ 14 ಪಿಎಸ್ಐ ಗಳ ವರ್ಗಾವಣೆ….!!!

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ,ಗುಡೇಕೊಟೆ PSIಸೇರಿದಂತೆ,3ಜಿಲ್ಲೆಯ 14 ಪಿಎಸ್ಐಗಳ ವರ್ಗಾವಣೆ*<> ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಒಟ್ಟು14ಪಿಎಸೈಗಳ ವರ್ಗಾವಣೆ ಮಾಡಿ,ಐಜಿಪಿ ಎಂ ನಂಜುಂಡಸ್ವಾಮಿರವರು ಆದೇಶ ಹೊರಡಿಸಿದ್ದಾರೆ.

ಕೂಡ್ಲಿಗಿ ಪೊಲೀಸ್ ಠಾಣಾ ಪಿಎಸ್ಐ ತಿಮ್ಮಣ್ಣ ಚಾಮನೂರು ಅವರನ್ನು, ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ.ತಾಲೂಕಿನ ಗುಡೇಕೋಟೆ ಠಾಣೆಯ ಕೆ.ರಾಮಪ್ಪ ರವರನ್ನು, ಹೊಸಪೇಟೆ ಸಂಚಾರ ಠಾಣೆಗೆ ವರ್ಗಾಯಿಸಲಾಗಿದೆ. ಗುಡೇಕೋಟೆ ಠಾಣೆಗೆ ಕೊಪ್ಪಳದ ಸಿಇಎನ್ ಠಾಣೆಯ,ಶಂಕರಪ್ಪ ಲಮಾಣಿ ಅವರನ್ನು ನೇಮಿಸಲಾಗಿದೆ.ಬಳ್ಳಾರಿ ತಾಲೂಕಿನ ಪಿಡಿಹಳ್ಳಿ ಠಾಣೆಯ ಡಿ.ಪಿ.ಶರತ್ ರನ್ನು ಕುಮಾರ ನಗರದ ಡಿಎಸ್ಎ ಘಟಕಕ್ಕೆ.ದೇವದುರ್ಗದ ಕೆ.ರಂಗಯ್ಯ ಯರಗೇರಾ ಠಾಣೆಗೆ.ಹೊಸಪೇಟೆ ತಾಲೂಕಿನ ಕಮಲಾಪುರ ಠಾಣೆಯ ವೈ.ಶಶಿಧರ, ಪಿ.ಡಿ.ಹಳ್ಳಿಗೆ. ಹಿರೇಹಡಗಲಿಯ ಅರುಣ್ ಕುಮಾರ ರಾಠೋಡ್ ರನ್ನು ಕಮಲಾಪುರಕ್ಕೆ.ರಾಯಚೂರಿನ ಸದರ ಬಜಾರ್ ಠಾಣೆಯ ಟಿ.ಡಿ.ಮಂಜುನಾಥ ಪಶ್ಚಿಮ ಠಾಣೆಗೆ.ಪಶ್ಚಿಮ ಠಾಣೆಯ ಕೆ.ಹೆಚ್.ದಾದವಲಿ ಕೊಪ್ಪಳ ಸಿಇಎನ್ ಠಾಣೆಗೆ.ಬಳ್ಳಾರಿ ಕೌಲ್ ಬಜಾರ್ ಠಾಣೆಯ ಎನ್.ರಘು ಮೋಕಾ ಠಾಣೆಗೆ.ಸಿಂಧನೂರು ಗ್ರಾಮೀಣ ಠಾಣೆಯ ಜಿ.ಎಸ್.ರಾಘವೇಂದ್ರ ಬಳ್ಳಾರಿ ಮಹಿಳಾ ಠಾಣೆಗೆ. ಸಿರುಗುಪ್ಪ ಠಾಣೆಯ ಗಂಗಪ್ಪ ಬುರ್ಲಿ ಬಳ್ಳಾರಿ ಐಎಸ್ ಡಿ ಘಟಕಕ್ಕೆ.ಬಳ್ಳಾರಿ ಮೋಕಾ ಠಾಣೆಯ ಡಿ.ಪಿ.ಭರತ್ ಪ್ರಕಾಶ ದೇವದುರ್ಗ ಠಾಣೆಯ ಅಪರಾಧ ವಿಭಾಗಕ್ಕೆ.ವರ್ಗ ಮಾಡಲಾಗಿದೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;