- ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

- *ಶಿವಪುರWTP:ವಂದೇ ಮಾತರಂ ಮೊಳಗಿಸಿ ಧ್ವಜಾರೋಹಣ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮದ ಹೊರವಲಯದಲ್ಲಿ,ಡಬ್ಲ್ಯೂಟಿಪಿ ಕಂಪನಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಜ26ರಂದು “ವಂದೇ ಮಾತರಂ”ಗೀತೆ ಯೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು.ಜನರಲ್ ಮೇನೆಜರ್ ವಿಜಯ ಕುಮಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು,ನಮ್ಮ ದೇಶದ ಗಣತಂತ್ರದ ವ್ಯವಸ್ಥೆ ಪ್ರಪಂಚಕ್ಕೇ ಮಾದರಿಯಾಗಿದೆ.ಪ್ರಜಾಪ್ರಭುತ್ವದ ಸಾರ್ವಭೌಮತ್ವದ ಸಂಕೇತ ಗಣರಾಜ್ಯೋತ್ಸವ ಎಂದರು.ಪ್ರಾಜೆಕ್ಟ್ ಮೇನೆಜರ್ ರಾಘವೆಂದ್ರ ಪಾಟೀಲ್,ಸಂತೋಷ,ಬಾಬು,ಸೇರಿದಂತೆ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರು.ಶಿವಪುರ ಗೊಲ್ಲರಹಟ್ಟಿಯ ಕೆ.ಯರ್ರಿಸ್ವಾಮಿ,ಬಿ.ಶಿವುಕುಮಾರ,ಟಿ.ವೀರೇಶ ಮುಂತಾದವರಿದ್ದರು.ಗಣರಜ್ಯೋತ್ಸವ ಕಾರ್ಯಕ್ರಮ ಪ್ರಾರಂಭದಿಂದ ಅಂತ್ಯದವರೆಗೂ,”ವಂದೇ ಮಾತರಂ”ಹಿನ್ನಲೆ ಗೀತೆ ಮೊಳಗುವಂತೆ ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
