ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಕಾರ್ ಬೈಕ್ ಡಿಕ್ಕಿ ಓರ್ವ ಮೃತ ಓರ್ವನಿಗೆ ತೀವ್ರ ಗಾಯ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ರಾಜೀವಗಾಂಧೀನಗರದ ಹಿಂಬದಿಯ ಪ್ಲೈಓವರ್ ರಾಷ್ಟ್ರೀಯ ಹೆದ್ಧಾರಿ50ರಲ್ಲಿ,ಕಾರ್ ಬೈಕ್ ಡಿಕ್ಕಿ ಸಂಭವಿಸಿದ್ದು ಓರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ಮುಂಜಾನೆ ಜರುಗಿದೆ.ಬೆಂಗಳೂರಿನಿಂದ ಬಿಜಾಪುರಕ್ಕೆ ತೆರಳುತ್ತಿದ್ದ ಕಾರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಕೊಟ್ರೇಶ(30) ಮೃತಪಟ್ಟಿದ್ದಾನೆ.ಹಿಂಬದಿ ಸವಾರ ದುರುಗೇಶ ತೀವ್ರ ಗಾಯಗೊಂಡಿದ್ದಾನೆ.ಕಾರ್ನಲ್ಲಿದ್ದ ಕೆಲವರಿಗೆ ಗಾಯಗಳಾಗಿವೆ.ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ,ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
