ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಬಳ್ಳಾರಿ: ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುವಲಹಟ್ಟಿ ಗ್ರಾಮದಲ್ಲಿ ಇಂದು ಜ-22-2021ರ ಗ್ರಾಮ ಪಂಚಾಯಿತಿ ಗ್ರಂಥಾಲಯದ ವತಿಯಿಂದ ಓದುವಬೆಳಕು ಮತ್ತು ಮಕ್ಕಳ ಸ್ನೇಹಿ ಗ್ರಾಮ ಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ನಡುವಲಹಟ್ಟಿಯಲ್ಲಿ ಬಾಲ್ಯರಂಭದ ರಕ್ಷಣೆ ಮತ್ತು ಅಭಿವೃದ್ಧಿ, ಮತ್ತು ಶಿಶು ಮರಣ ಪ್ರಮಾಣ, ತಾಯಂದಿರ ಸಾವಿನ ಪ್ರಮಾಣ ಹಾಗೂ ಮಾನಸಿಕ ಮತ್ತು ಭೌತಿಕ, ದೈಹಿಕ ಬೆಳವಣಿಗೆ ಮತ್ತು ಕಬ್ಬಿಣಾಂಶ ಮತ್ತು ಜಂತು ನಿವಾರಣೆಯ ಮಾತ್ರೆಗಳ ಬಗ್ಗೆ ಹಾಗೂ ತಾಯಿಯ ಎದೆಹಾಲು ಪೌಷ್ಟಿಕ ಪೂರಕ ಆಹಾರ ಇವುಗಳನ್ನು ಕುರಿತು ಸಪ್ತಾಹ ನಡೆಸಲಾಯಿತು. ಶಾಲಾ ಮಕ್ಕಳು ಅಭಿನಯ ಗೀತೆ ಮತ್ತು ಬಂಡಾಯ ಗೀತೆಗಳನ್ನು ಹಾಡಿದರು. ತಾಯಕನಹಳ್ಳಿ ಸಹಿಪ್ರಾ ಶಾಲೆ ಸಹ ಶಿಕ್ಷಕರಾದ ಮಾರುತಿ ಸರ್ ನಿರೂಪಣೆ ಮಾಡಿದರು. ನಡುವಲ ಹಟ್ಟಿ ಸಹಿಪ್ರ ಶಾಲೆ ಮುಖ್ಯಗುರುಗಳಾದ ರವಿ ಕುಮಾರ್. ಕೆ.ಜೆ .ಸರ್ ಸ್ವಾಗತಿಸಿದರು. ಗೋವಿಂದಪ್ಪ ಸರ್ ಸಪ್ತಾಹದ ಸ್ವವಿವರ ತಿಳಿಸಿದರು.

ಹೂಡೇಂ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಕರಿಬಸಪ್ಪ ಸರ್ ಇವರು ಬಾಲ್ಯ ರಂಭದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ತಿಳಿಸಿದರು. ತಾಯಕನಹಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ರಂಗಪ್ಪ ಸರ್ ಇವರು ಮಾನಸಿಕ ಮತ್ತು ಭೌತಿಕ ,ದೈಹಿಕ ಬೆಳವಣಿಗೆ ಬಗ್ಗೆ ಮಾತನಾಡಿದರು. ಆರೋಗ್ಯ ಇಲಾಖೆಯ ಟಿ.ಎಲ್. ಸ್ವಾಮಿ ಅವರು ಮಾತನಾಡಿ ಕಬ್ಬಿಣಾಂಶ ಮತ್ತು ಜಂತು ನಿವಾರಣೆಯ ಮಾತ್ರೆಗಳ ಬಗ್ಗೆ ಹಾಗೂ ತಾಯಿಯ ಎದೆಹಾಲು ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಿದರು. ತಾಯಕನಹಳ್ಳಿ ಸ ಹಿ ಪ್ರಾ ಶಾಲೆಯ ಬಡ್ತಿ ಮುಖ್ಯಗುರುಗಳಾದ ಪಾಲಯ್ಯ ಡಿ ಇವರು ಗ್ರಂಥಾಲಯ ಪುಸ್ತಕಗಳನ್ನು ಪಡೆದು ಓದಿ ಅದರಲ್ಲಿನ ಸಾರಾಂಶವನ್ನು ಬರೆಯುವಂತೆ ಮಕ್ಕಳಿಗೆ ತಿಳಿಹೇಳಿದರು. ಸುಟ್ಟ ಕರ್ನಾರಹಟ್ಟಿ ಸ.ಹಿ ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಯರಾದ ಕರಿಬಸಮ್ಮ ಇವರು ಬಾಲ್ಯವಿವಾಹವನ್ನು ಕುರಿತು ಮಾತನಾಡಿದರು. ತಾಯಕನಹಳ್ಳಿ ಸಹ ಶಿಕ್ಷಕಿ ಯರಾದ ಶಾಂತಕುಮಾರಿ ಇವರು ಗ್ರಂಥಾಲಯದ ಪುಸ್ತಕಗಳನ್ನೇ ಹೆಚ್ಚು ಹೆಚ್ಚು ಓದಿ ಮಹಾನ್ ವ್ಯಕ್ತಿಗಳು ಆಗಿರುವ ಮಹನೀಯರನ್ನು ಕುರಿತು ಮಾತನಾಡಿದರು. ಶಿಕ್ಷಣ ಇಲಾಖೆಯ ಹೂಡೇಂ ವಲಯದ ಸಂಪನ್ಮೂಲ ಅಧಿಕಾರಿಗಳಾದ ತಿಪ್ಪೇಸ್ವಾಮಿ ಸರ್ ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ಓದುವ ಬಗ್ಗೆ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ ಸ್ವಾಮಿಯವರು, ಕಾರ್ಯದರ್ಶಿಗಳಾದ ಚಂದ್ರಪ್ಪ ಸರ್,ಹಾಗೂ ಹೂಡೇಂ ಶಾಲೆಯಮುಖ್ಯ ಶಿಕ್ಷಕರಾದ ಸೋಮಶೇಖರ್ ಸರ್, ಗ್ರಂಥಾಲಯದ ಮೇಲ್ವಿಚಾರಕರಾದ ತುಡುಮ ಗುರುರಾಜ್, ಹಾಗೂ ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ ಮತ್ತು ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ಶಾಲಾ ಸಹಶಿಕ್ಷಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ವಿ ಆರ್ ಡಬ್ಲ್ಯೂ ಕುಮಾರಿ ಸಲ್ಮಾ , ಊರಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಂಥಪಾಲಕರು ಮತ್ತು ಅತಿಥಿಗಳು ಹಾಗೂ ಎಲ್ಲಾ ಶಾಲಾ ಶಿಕ್ಷಕರಿಂದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶಿಕ್ಷಕರಾದ ಮಚ್ಚಂದ್ರಪ್ಪ ಸರ್ ಹಾಗೂ ಉಮೇಶ್ ಸರ್ ಇವರು ನಿರ್ವಹಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
