ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಚಳ್ಳಕೆರೆ > ನಾಯಕನಹಟ್ಟಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿ ತಂದೆ-ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಗರದ ನಾಯಕನಹಟ್ಟಿ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ವೆಂಕಟೇಶ್ವರ ನಗರದ ನಿವಾಸಿ ತಿಪ್ಪೇಸ್ವಾಮಿ(45) ಹಾಗೂ ಪತ್ನಿ ಪದ್ಮ(40) ತೀವ್ರವಾಗಿ ರಕ್ತಗಾಯಗಳಿಂದ ಇಲ್ಲಿನಸಾರ್ವಜನಿಕರ ಆಸ್ಪತ್ರೆಗೆ ದಾಖಲಾಗಿದ್ದರೆ, ಅವರ ಏಕೈಕ ಪುತ್ರಿ
ಶ್ರಾವಣಿ(6) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಾಯಕನಹಟ್ಟಿ ಹೋಬಳಿಯ ಬಂಗಾರಕ್ಕನಹಳ್ಳಿಗೆ ಬೈಕ್ನಲ್ಲಿ ತಿಪ್ಪೇಸ್ವಾಮಿ ಪತ್ನಿ ಹಾಗೂ ಪತ್ರಿಯೊಂದಿಗೆ ಶನಿವಾರ ಬೆಳಗ್ಗೆ ನಗರದ ನಾಯಕನಹಟ್ಟಿ ರಸ್ತೆ ತಿರುವಿನಲ್ಲಿ ಹೋಗುತ್ತಿದ್ದಾಗ ನಾಯಕನಹಟ್ಟಿ ಕಡೆಯಿಂದ ಎದುರಿಗೆ ಬಂದ ಮತ್ತೊಂದು ಬೈಕ್ ನೇರವಾಗಿ ತಿಪ್ಪೇಸ್ವಾಮಿ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಿಪ್ಪೇಸ್ವಾಮಿ, ಪತ್ನಿ ಪದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಸ್ವಗ್ರಾಮ ಬಂಗಾರಕ್ಕನಹಳ್ಳಿಯ ಮನೆಯಲ್ಲಿ ನಡೆಯುವ ಶುಭಕಾರ್ಯಕ್ಕೆ ಬೈಕಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮತ್ತೊಂದು ಬೈಕಿನಲ್ಲಿದ್ದ ಇಬ್ಬರು ಸವಾರರು ಗಾಯಗೊಂಡು ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಜನಸಾಗರ: ಅಪಘಾತದಲ್ಲಿ ಮಗುವಿನ ಸಾವಿನ ಸುದ್ದಿ ಕೇಳಿದ ಅವರ ಬಂಧುಗಳು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಧಾವಿಸಿ ಬಂದು ಗಾಯಗೊಂಡ ದಂಪತಿಗಳನ್ನು ಸಂತೈಸಿದರು. ಇಲ್ಲಿನ ವಿಠಲನಗರ ನಿವಾಸಿ ಶಿಕ್ಷಕ ದುರುಗಪ್ಪ, ಪತ್ನಿ ಸ್ಟಾಫ್ ನಾಗರತ್ನಮ್ಮವರ ಸಹೋದರರಾಗಿದ್ದ ತಿಪ್ಪೇಸ್ವಾಮಿ ಅಪಘಾತ ಸುದ್ದಿ ತಿಳಿದು ಶಿಕ್ಷಕರ ಸಂಘದ ಅನೇಕ ಪದಾಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಸಾಂತ್ವನ ಹೇಳಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
