;

ಯಾದಗಿರಿಯಲ್ಲಿ ಡಾ.ಫ.ಗು.ಹಳಕಟ್ಟಿ ಜನ್ಮದಿನ ಮತ್ತು ವಚನ ಸಂರಕ್ಷಣಾ ದಿನಾಚರಣೆ…!!!

ಯಾದಗಿರಿಯಲ್ಲಿ ಡಾ.ಫ.ಗು.ಹಳಕಟ್ಟಿ ಜನ್ಮದಿನ ಮತ್ತು ವಚನ ಸಂರಕ್ಷಣಾ ದಿನಾಚರಣೆ
ವಚನ ಸಾಹಿತ್ಯದ ಉಳಿವಿಗೆ ಫ.ಗು.ಹಳಕಟ್ಟಿ ಅವರ
ಕೊಡುಗೆ ಅಪಾರ-ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ

ಯಾದಗಿರಿ : ವಚನ ಸಾಹಿತ್ಯದ ಉಳಿವಿಗೆ ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರವಿದೆ. ಅವರು ಈ ಸಮಾಜದ ವಚನಗುಮ್ಮಟ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಬಣ್ಣಿಸಿದರು.
ಅವರು ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಲಿಂಗೇರಿ ಕೊನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಸಿದ್ದ ವಚನ ಪಿತಾಮಹಾ ಡಾ. ಫ.ಗು.ಹಳಕಟ್ಟಿ ಅವರ ಜನ್ಮದಿನ ಮತ್ತು ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.
ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು, ಅದರಲ್ಲಿನ ಅರ್ಥ ಬಿಡಿಸಿ ಬರೆದ ಇವರು, ತಾವು ಸಂಗ್ರಹಿಸಿದ ರಾಶಿ,ರಾಶಿ ವಚನಗಳನ್ನು ಮುದ್ರಿಸಿ ಆ ಸಾಹಿತ್ಯ ಜನರಿಗೆ ತಲುಪಲು 1925ರಲ್ಲಿ ಹಿತಚಿಂತಕ ಮುದ್ರಣಾಲಯ ಆರಂಭಿಸಿದರು. ಮುದ್ರಣ ಯಂತ್ರ ಖರೀದಿಸಲು ಆರ್ಥಿಕ ತೊಂದರೆ ಉಂಟಾದಾಗ ವಕೀಲಿ ವೃತ್ತಿಯಿಂದ ಸಂಪಾದಿಸಿ ಕಟ್ಟಿದ್ದ ತಾವಿದ್ದ ಮನೆಯನ್ನೇ ಮಾರಿ ಬಾಡಿಗೆ ಮನೆಯಲ್ಲಿ ಅಂದು ಜೀವನ ಸಾಗಿಸಿದ ಮಹಾನ ವ್ಯಕ್ತಿ ಎಂದು ಬಣ್ಣಿಸಿದರು.
ಹಳಕಟ್ಟಿಯವರು ಸ್ವತಃ ಮೊಳೆಗಳನ್ನು ಜೋಡಿಸಿ. ಅಚ್ಚು ಹಾಕಿ ತಮ್ಮ ಕಾಲುಗಳಿಂದ ಪೆಡಲ್ ತುಳಿದು, ಮುದ್ರಿಸಿ ಪ್ರಕಟಿಸಿದ ಸಾಹಿತ್ಯದಿಂದ 250 ವಚನಕಾರರ ವಚನಗಳನ್ನು, ಸಾಹಿತ್ಯವನ್ನು ಹೊರತಂದರು. ಇವರ ಈ ಕಾರ್ಯ ಕೈಗೊಳ್ಳುವ ಮುಂಚೆ ಕೇವಲ 50 ವಚನಕಾರರ ವಚನಗಳು ಮಾತ್ರ ಬೆಳಕು ಕಂಡಿದ್ದವು. ಇದು ವಚನ ಸಾಹಿತ್ಯಕ್ಕೆ ಇವರು ನೀಡಿದ ಅಪಾರ ಕೊಡುಗೆ ಎಂದು ಶಾಸಕರು ಮಾರ್ಮಿಕವಾಗಿ ಹೇಳಿದರು.
1880 ಜುಲೈ 2 ರಂದು ಜನಿಸಿದ್ದ ಇವರು, ಬದುಕಿನುದ್ದಕ್ಕೂ ಸಂಘರ್ಷಗಳನ್ನೆ ಎದುರಿಸಿ,ಸಾಮಾಜಿಕ, ಶೈಕ್ಷಣಿಕ, ವಚನ ಸಾಹಿತ್ಯ, ಪತ್ರಿಕಾ ರಂಗಕ್ಕೆ ಅವಿರತ ಶ್ರಮ ಹಾಕಿದ ವಚನ ಪಿತಾಮಹಾ ಎಂದು ಹೇಳಿದ ಶಾಸಕರು,ಇವರ ಜೀವನಾರ್ದಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಉಪನ್ಯಾಸಕ ಸತೀಶಕುಮಾರ್ ಹವಾಲ್ದಾರ ಮಾತನಾಡಿ, ನಾಡಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಫ.ಗು.ಹಳಕಟ್ಟಿ ಅವರು ವಿಜಯಪುರ ನಗರಸಭೆ ಅಧ್ಯಕ್ಷರಾಗಿದ್ದಾಗ ಬೆಳೆಯುತ್ತಿರುವ ನಗರಕ್ಕೆ ಕುಡಿಯುವ ನೀರು ಒದಗಿಸಲು ಸರ್ ಎಂ.ವಿಶ್ವೇಶ್ವರಯ್ಯನವರನ್ನು ಅಲ್ಲಿಗೆ ಕರೆಯಿಸಿ, ಅವರ ತಾಂತ್ರಿಕ ಸಹಾಯ ಪಡೆದು ನಗರದ ಹೊರವಲಯದಲ್ಲಿ ಭೂತನಾಳ ಕೆರೆಯನ್ನು ಸ್ಥಾಪಿಸಿದ್ದು ಅವರ ದೂರದೃಷ್ಟಿಗೆ ಸಾಕ್ಷಿ. ಈ ಕೆರೆಯ ಕುಡಿಯುವ ನೀರಿನ ಯೋಜನೆ ನೂರು ವರ್ಷಗಳ ನಂತರ ಇಂದಿಗೂ ನಗರದ ಶೇ.30 ಭಾಗಕ್ಕೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ ಎಂದು ಹೇಳಿದರು.
ಮುಂಬೈ ವಿಧಾನಪರಿಷತ್ ಸದಸ್ಯರಾಗಿ ಬಿಜಾಪುರದಲ್ಲಿ ಬರಗಾಲ ನಿವಾರಣಾ ಸಂಸ್ಥೆ ಆರಂಭಿಸಿ. ಕೃಷಿ ಪರ್ಯಾಯ ಚಟುವಟಿಕೆ ಕೇಂದ್ರವಾಗಿಸಿದರು. ಹಳಕಟ್ಟಿಯವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಅಧ್ಯಕ್ಷರಾದ ಎಂ.ಬಿ. ಪಾಟೀಲರು ಹಳಕಟ್ಟಿ ಸ್ಮಾರಕ ಭವನ ನಿರ್ಮಿಸಿ ಅವರನ್ನು ಜೀವಂತಗೊಳಿಸಲು ವಚನಸಾಹಿತ್ಯ ಸಂಶೋಧನ ಕೇಂದ್ರ ಆರಂಭಿಸಿ, ಹಳಕಟ್ಟಿಯವರು ಜೀವಿತಾವಧಿಯಲ್ಲಿ ಪ್ರಕಟಿಸಿದ ಎಲ್ಲ ಸಾಹಿತ್ಯವನ್ನು 15 ಸಮಗ್ರ ಸಂಪುಟಗಳಲ್ಲಿ ಹತ್ತು ಸಾವಿರ ಪುಟಗಳಲ್ಲಿ ಹೊರತಂದಿದ್ದಾರೆ. ಹಳಕಟ್ಟಿಯವರ ಜನ್ಮದಿನವನ್ನು ಸರ್ಕಾರ ವಚನ ಸಾಹಿತ್ಯ ಸಂರಕ್ಷಣಾ ದಿನವಾಗಿ ಘೋಷಣೆ ಮಾಡಿದೆ ಎಂದು ಅವರು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಯುಡಾ ಅಧ್ಯಕ್ಷರಾದ ಬಾಬುರಾವ ಕಾಡ್ಲೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಉಪನ್ಯಾಸಕರಾದ ಬಸವರಾಜ ಜುಗೇರಿ, ಕಾಲೇಜಿನ ಪ್ರಾಂಶುಪಾಲರಾದ ಗುರುಪ್ಪಚಾರ್ಯ ಎಂ. ವಿಶ್ವಕರ್ಮ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಅಶೋಕ ರಾಜನಕೋಳ್ಳೂರ ಮತ್ತು ಸಂಗಡಗರಿAದ ನಾಡಗೀತೆ ನಡೆಯಿತು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;