;

ಮಳೆಗಾಗಿ ಹಗರಿ ಗಜಾಪುರದಲ್ಲಿ ವಿಶೇಷ ಪೂಜೆ: ಬಸವಣ್ಣನ ಮೂರ್ತಿ ಹಳ್ಳದಲ್ಲಿ ಪ್ರತಿಷ್ಠಾಪನೆ…!!!

ಮಳೆಗಾಗಿ ಹಗರಿ ಗಜಾಪುರದಲ್ಲಿ ವಿಶೇಷ ಪೂಜೆ: ಬಸವಣ್ಣನ ಮೂರ್ತಿ ಹಳ್ಳದಲ್ಲಿ ಪ್ರತಿಷ್ಠಾಪನೆ

ಹಗರಿ ಗಜಾಪುರ: ಸಕಾಲಕ್ಕೆ

ಮಳೆಯಾಗದೆ ಕಂಗಾಲಾಗಿರುವ ಗ್ರಾಮೀಣ ಭಾಗದ ಜನತೆ, ವರುಣ ದೇವನ ಕೃಪೆಗಾಗಿ ವಿಶಿಷ್ಟ ಆಚರಣೆಗಳಿಗೆ ಮೊರೆ ಹೋಗುತ್ತಿದ್ದಾರೆ. ಜೂನ್ 26ರ ಶುಕ್ರವಾರದಂದು ಸಮೀಪದ ಹಗರಿ ಗಜಾಪುರ ಗ್ರಾಮದಲ್ಲಿ ರೈತರು ಮತ್ತು ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಜೇಡಿಮಣ್ಣಿನಿಂದ ಸಿದ್ದಪಡಿಸಿದ

ಬಸವಣ್ಣನ ಮೂರ್ತಿಯನ್ನು ಮಾಡಿ. ಗ್ರಾಮದ ಹಳ್ಳದಲ್ಲಿ ಹೂತು ಹಾಕಿ (ಪ್ರತಿಷ್ಠಾಪಿಸಿ) ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮದಲ್ಲಿ ಉತ್ತಮ ಮಳೆಯಾಗಿ, ಕೆರೆ-ಕಟ್ಟೆಗಳು ತುಂಬಿ, ರೈತರ ಬೆಳೆಗಳು ಹಸನಾಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸಲಾಯಿತು. ಈ ವಿಶೇಷ ಪೂಜಾ

ಕೈಂಕರ್ಯದ ನಂತರ ಸಾರ್ವಜನಿಕರಿಗೆ ಕಡುಬು, ಅನ್ನ ಮತ್ತು ಸಾಂಬಾರ್ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಊರಿನ ಮುಖಂಡರು ಹಾಗೂ

ಸಾರ್ವಜನಿಕರು ಒಟ್ಟಾಗಿ ಪ್ರಸಾದ ಸ್ವೀಕರಿಸಿ

ಮಳೆರಾಯನ ಕೃಪೆಗಾಗಿ ಪ್ರಾರ್ಥಿಸಿದರು.

ಈ ವಿಶಿಷ್ಟ ಧಾರ್ಮಿಕ ಆಚರಣೆಯಲ್ಲಿ ಗ್ರಾಮದ ಪ್ರಮುಖರಾದ ಬಸವರಾಜಯ್ಯ, ಗುರುಬಸವರಾಜ ಎನ್.ಜಿ. ಶ್ರೀಕಾಂತಯ್ಯ ಸಿ.ಎಂ. ಜಗದೀಶಯ್ಯ ಎಸ್. ಎಂ. ವೀರೇಶ ಎಸ್. ಎಂ. ವಿಜಯಕುಮಾರ ಎಸ್,
ಪೂಜಾರ್ ಗಂಗಾಧರ್ ರವೀಂದ್ರ ಗೌಡ ಎಸ್.ಜಿ ಎಸ್ ಎಂ ಗುರುಸ್ವಾಮಿ ಅಸಗೌಡ್ರು
ಭರತ್ ಎಸ್ ರಾಜೇಂದ್ರ
ಪೂಜಾರ್ ಹಾಗೂ ಮಹಿಳೆಯರು ಸೇರಿದಂತೆ ಹಗರಿ ಗಜಾಪುರ ಗ್ರಾಮದ ನೂರಾರು ರೈತರು ಮತ್ತು ಊರಿನ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ : ಗುರುಬಸವರಾಜ
ನಿಲುವಂಜಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;