ಹಾನಗಲ್ ಮುಖ್ಯ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರ ಆಕ್ರೋಶ
ಹಾವೇರಿ ಜಿಲ್ಲೆ ಹಾನಗಲ್ ನಗರದ ಮುಖ್ಯ ರಸ್ತೆಯಲ್ಲಿ ಶಿಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಮಾಡುತ್ತಿರುವವರ ನಿರ್ಲಕ್ಷ್ಯದಿಂದ ನಗರದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕಾಮಗಾರಿ ಆರಂಭದಲ್ಲಿ ನಗರದ ಜನತೆಯ ಕುಡಿಯುವ ನೀರಿನ ಪೈಪ್ಲೈನ್ ಒಡೆದಿದೆ. ಇದರಿಂದ ಚರಂಡಿ ನೀರು ಒಡೆದಿರುವ ಪೈಪ್ಲೈನ್ ಮುಖಾಂತರ ಸೇರಿ ಕುಡಿಯುವ ನೀರು ಕಲುಷಿತವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ರಾತ್ರಿ ವೇಳೆ ಸಂಚರಿಸುವ ಬೈಕ್ ಸವಾರರು ಸೇರಿದಂತೆ ಅನೇಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ತೊಂದರೆ ಇದ್ದರೂ ನಗರದ ಜನತೆಯ ಗೋಳು ಕೇಳುವವರು ಇಲ್ಲದಂತಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶ್ರೀ ರಾಮನಗೌಡ ಪಾಟೀಲ್ ಅವರು ಖಂಡಿಸಿದ್ದಾರೆ.
ಈ ವಿಚಾರ ತಿಳಿದ ನಂತರ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ನಗರದ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನಗರದ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸಂತೋಷ ಬಸಪ್ಪ ಗುಡ್ಡಪ್ಪನವರ
ಜಿಲ್ಲಾ ವರದಿಗಾರರು *ಎಚ್ಚರಿಕೆ ಕನ್ನಡ ನ್ಯೂಸ್24*7 ವಿಜಯ ನಗರ ಸಾಮ್ರಾಜ್ಯ…..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
