ಬೆಳಗಾವಿಯಲ್ಲಿ ರಾಷ್ಟ್ರೀಯ ಪಂಚಾಯತರಾಜ್ ದಿನಾಚರಣೆ ಅದ್ದೂರಿ ಆಚರಣೆ
ಜಿಪಂ 2 ವರ್ಷದ ಸಾಧನೆಯ ವಿಶೇಷ ಸಂಚಿಕೆ ಹಾಗೂ “ಅಕ್ಕ ಕೆಫೆ” ವಿಶೇಷ ಸಂಚಿಕೆ ಬಿಡುಗಡೆ; ಸಾಧಕರಿಗೆ ಸನ್ಮಾನ, ಹೊಸ ವಾಹನಗಳಿಗೆ ಚಾಲನೆ
ಬೆಳಗಾವಿ ಜಿಲ್ಲಾ ಪಂಚಾಯತ ಹಾಗೂ ಅನುಷ್ಟಾನ ಇಲಾಖೆಗಳ ಸಹಯೋಗದಲ್ಲಿ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್ ನಲ್ಲಿ ಇಂದು ಜಿಲ್ಲಾಮಟ್ಟದ ರಾಷ್ಟ್ರೀಯ ಪಂಚಾಯತರಾಜ್ ದಿನಾಚರಣೆ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಲೋಕೋಪಯೋಗಿ ಇಲಾಖೆಯ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು ಸಮಾರಂಭಕ್ಕೆ ಚಾಲನೆ ನೀಡಿದರು.
ಸನ್ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ರವರು ಅಧ್ಯಕ್ಷತೆ ವಹಿಸಿದ್ದರು.
ಮಾನ್ಯ ಶಾಸಕರಾದ ಶ್ರೀ ಆಸೀಫ್ (ರಾಜು) ಸೇಠ್, ಶ್ರೀ ಮಹಾಂತೇಶ ಕೌಜಲಗಿ, ಶ್ರೀ ಬಾಬಾಸಾಹೇಬ ಪಾಟೀಲ, ಶ್ರೀ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಚನ್ನರಾಜ್ ಹಟ್ಟಿಹೊಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮಾನ್ಯ ಜಿಲ್ಲಾಧ್ಯಕ್ಷರಾದ ಶ್ರೀ ವಿನಯ ನಾವಲಗಟ್ಟಿ, ಮಾನ್ಯ ಬುಡಾ ಅಧ್ಯಕ್ಷ ಶ್ರೀ ಲಕ್ಷ್ಮಣರಾವ್ ಚಿಂಗಳೆ, ಮಾನ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಸಂಜಯ ಶೆಟ್ಟೆಣ್ಣವರ, ಮಾನ್ಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ, ಮಾನ್ಯ ಪೊಲೀಸ್ ಆಯುಕ್ತರಾದ ಬೋರಸೆ ಭೂಷಣ, ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಕೆ.ರಾಮರಾಜನ್ ಸೇರಿ ಜಿಪಂ, ಅನುಷ್ಟಾನ ಇಲಾಖೆಗಳು, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಹಾಜರಿದ್ದರು.
ವಿಶೇಷ ಸಂಚಿಕೆಗಳ ಬಿಡುಗಡೆ:
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ಹಾಗೂ ಅನುಷ್ಟಾನ ಇಲಾಖೆಗಳಿಂದ 2024-25 ಮತ್ತು 2025-26ನೇ ಸಾಲಿನಲ್ಲಿ ಕೈಗೊಳ್ಳಲಾದ ವಿನೂತನ ಕಾರ್ಯಕ್ರಮಗಳ ಕಾಫಿ ಟೇಬಲ್ ಬುಕ್ ಹಾಗೂ “ಅಕ್ಕ ಕೆಫೆ” ಕುರಿತಾದ ಕಾಫಿ ಟೇಬಲ್ ಬುಕ್ ಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಸಾಧಕ ಅಧಿಕಾರಿಗಳಿಗೆ ಸನ್ಮಾನ:
ವಿವಿಧ ಯೋಜನೆಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಅಧಿಕಾರಿಗಳು, ವಿಶೇಷ ಕಾರ್ಯಕ್ರಮ ರೂಪಿಸಿ ಗಮನಸೆಳೆದ ಅಧಿಕಾರಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.
ವಿದ್ಯಾರ್ಥಿನಿ ಪ್ರಾರ್ಥನಾಗೆ ಸನ್ಮಾನ:
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಸ ಪ್ರಾರ್ಥನಾ ಬಿರಾದಾರ ಪಾಟೀಲ ಅವರನ್ನು ಗಣ್ಯರು ಕಾರ್ಯಕ್ರಮದಲ್ಲಿ ಸತ್ಕರಿಸಿದರು.
ಹೊಸ ವಾಹನಗಳಿಗೆ ಚಾಲನೆ:
ಆರೋಗ್ಯ ಇಲಾಖೆ, ತಾಪಂ ಹಾಗೂ ಗ್ರಾ.ಕು.ನೀ.ನೈ. ಇಲಾಖೆಯ ಅಧಿಕಾರಿಗಳಿಗೆ ನೀಡಲಾದಂತಹ ಹೊಸ ವಾಹನಗಳಿಗೆ ಸನ್ಮಾನ್ಯ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು ಹಾಗೂ ಗಣ್ಯರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ, ಅನುಷ್ಟಾನ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ತಾಪಂ, ಗ್ರಾಪಂ ಅಧಿಕಾರಿಗಳು ಭಾಗವಹಿಸಿ, ಸಂಭ್ರಮಿಸಿದರು.
ವರದಿ :ಮಹಾಲಿಂಗ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
