ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಸನ್ಮಾನ: ಅಧ್ಯಕ್ಷ ಖಜಾಸಬ್ ಹಡಗಲಿ….!!!

ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಸನ್ಮಾನ: ಅಧ್ಯಕ್ಷ ಖಜಾಸಬ್ ಹಡಗಲಿ

ಹಂಪಾಪಟ್ಟಣ, ಮೇ 1: ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ವತಿಯಿಂದ ಕಾರ್ಮಿಕರ ದಿನಾಚರಣೆ ಹಂಪಾಪಟ್ಟಣದ ಜೈ ಆಂಜನೇಯ ರಂಗಮಂದಿರದಲ್ಲಿ ಶುಕ್ರವಾರ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕರು ಸಮಾಜದ ನಿಜವಾದ ಶಕ್ತಿ ಎಂದು ಹೇಳಿ, ಅವರ ಪರಿಶ್ರಮದಿಂದಲೇ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜೊತೆಗೆ ಕಾರ್ಮಿಕರ ಶ್ರಮಕ್ಕೆ ಸಮಾಜವು ಯೋಗ್ಯ ಗೌರವ ನೀಡಬೇಕು ಎಂದು ಒತ್ತಿಹೇಳಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ. ಕುಬೇರ ಅವರು ಮಾತನಾಡಿ, ಕಾರ್ಮಿಕರ ಹಕ್ಕುಗಳು ಹಾಗೂ ಜೀವನಮಟ್ಟದ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟರು. ನ್ಯಾಯಯುತ ವೇತನ ಮತ್ತು ಸಮಾನ ಗೌರವ ಕಾರ್ಮಿಕರಿಗೆ ದೊರಕಬೇಕು ಎಂದು ಹೇಳಿದರು.
ಶ್ರೀಮಾತಾ ಸೇವಾ ಟ್ರಸ್ಟ್ ಅಧ್ಯಕ್ಷ ಜಿ. ಶ್ರೀನಿವಾಸ ಅವರು ಮಾತನಾಡಿ, ಕಾರ್ಮಿಕರ ಶ್ರಮ ಮತ್ತು ತ್ಯಾಗವನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ತಾಲೂಕು ಅಧ್ಯಕ್ಷ ಹಡಗಲಿ ಖಾಜಾ ಅವರು ಮಾತನಾಡಿ, ಕಾರ್ಮಿಕರ ಏಳಿಗೆಗಾಗಿ ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಎಸ್. ಚಂದ್ರು, ರೆಡ್ಡಿ ಖಾದರ್, ಸಾಬು.ಉಪ್ಪಾರ್ ಕನಕಪ್ಪ, ಬಳಗಾರ ಬಸವರಾಜ್, ಹಡಗಲಿ ಬಕ್ಷಿ, ಕೆ.ಎಸ್. ಹುಲುಗಪ್ಪ, , ಮಡಿವಾಳ ಶ್ರೀನಿವಾಸ್ ಮೂರ್ತಿ ಕಿಟಗಿ ಮಂಜುನಾಥ. ಬಾಬು. ಹಡಗಲಿ ಶಕ್ಸಾವಲಿ. ಮಡಿವಾಳ ಮಾಂತೇಶ್.. ಎಸ್ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿ. ಫಕೀರಪ್ಪ ಅವರು ನಿರೂಪಿಸಿದರು.

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend