35 ಸಾವಿರ ಲಂಚದ ಹಣ ಬಿಸಾಕಿ ಎಸ್ಕೇಪ್,ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಸಹಾಯಕ ಡ್ರಗ್ ಕಂಟ್ರೋಲರ್..!!!

35 ಸಾವಿರ ಲಂಚದ ಹಣ ಬಿಸಾಕಿ ಎಸ್ಕೇಪ್,ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಸಹಾಯಕ ಡ್ರಗ್ ಕಂಟ್ರೋಲರ್..!!!

ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಲಂಚದ ಹಣ ಬಿಸಾಡಿ ಪರಾರಿಯಾಗಿದ್ದ ಎಫ್‌‌ಡಿಸಿ ಶ್ಯಾಮಲಾ ಹಾಗೂ ಇಬ್ಬರು ಸಹಾಯಕರು ಕೊನೆಗೂ‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.‌ 35,000 ಸಾವಿರ ಲಂಚ ಸ್ವೀಕಾರ ಮಾಡಿ ಲೋಕಾ ಅಧಿಕಾರಿಗಳ ಕಂಡ ಕೂಡಲೇ ಪರಾರಿಯಾಗಿದ್ದರು. ಮಾರ್ಗಮಧ್ಯದಲ್ಲೇ ಲಂಚದ ಹಣವನ್ನು ಬಿಸಾಡಿ ಬಂದಿದ್ದರು. ತಡರಾತ್ರಿವರಗೂ ಹಣಕ್ಕಾಗಿ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಹುಡುಕಾಡಿದ್ರೂ ಹಣ ಸಿಗಲಿಲ್ಲ.‌ ಹೀಗಾಗಿ ಹಣ ಸ್ವೀಕರಿಸಿರುವ ವಿಡಿಯೋ ಆಧಾರದ ಮೇಲೆ ಎಫ್ ಡಿಸಿ- ಶ್ಯಾಮಲಾ, ನಿವೃತ್ತ ಡಿ ಗ್ರೂಪ್ ನೌಕರ ಶ್ರೀನಿವಾಸ್, ಹಾಗೂ ಡ್ರೈವರ್ ಮಹಂತೇಶ್ ಸದ್ಯ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೀತು. ದಲಿತ ಮುಖಂಡ ಹೂಹಳ್ಳಿ ಪ್ರಕಾಶ್ ಹಾಗೂ ಕೃಷ್ಣಯ್ಯ ಎಂಬುವರು ದೂರು ನೀಡಿದ್ರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend