ಖಕಿ ಖಡಕ್ ಮಾತಿಗೆ ರೌಡಿಗಳು ಗಲಿಬಿಲಿ, ಸಮಾಜಕ್ಕೆ ಒಳ್ಳೆಯ ವ್ಯಕ್ತಿ ಆಗದಿದ್ರೆ ಅತೀ ಕಠಿಣ ಕ್ರಮ – ಎಸ್.ಪಿ ಜಾಹ್ನವಿ….!!!!

ಖಕಿ ಖಡಕ್ ಮಾತಿಗೆ ರೌಡಿಗಳು ಗಲಿಬಿಲಿ, ಸಮಾಜಕ್ಕೆ ಒಳ್ಳೆಯ ವ್ಯಕ್ತಿ ಆಗದಿದ್ರೆ ಅತೀ ಕಠಿಣ ಕ್ರಮ – ಎಸ್.ಪಿ ಜಾಹ್ನವಿ

ರೌಡಿಗಳಿಗೆ ಬೆವರಿಳಿಸಿದ ಪೊಲೀಸ್

ಹೊಸಪೇಟೆ : ಜಿಲ್ಲೆಯಲ್ಲಿ ಬಂದೋಬಸ್ತ್ ವಿಚಾರವಾಗಿ ವಿಜಯನಗರ ಎಸ್.ಪಿ ಜಾಹ್ನವಿ ರೌಡಿಗಳ ಪರೇಡ್ ನಡೆಸಿ ಬೆವರಿಳಿಸಿದ್ದಾರೆ. ಇದೇ ವೇಳೆ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿ ಅಸಾದುಲ್ ಗೆ ಎಸ್ಪಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೊದಲು ಸರಿಯಾಗಿ ನಿಲ್ಲೋದು ಕಲಿ. ಯಾವುದೇ ಸಣ್ಣ ಕೇಸ್ ಲ್ಲಿ ಇರೋದಲ್ಲ ನೀನು ಓವರ್ ಸ್ಮಾರ್ಟ್ ಆಗಿ ಆಡಬೇಡ. ಭಯೋತ್ಪಾದಕ ಕೃತ್ಯ ಆರೋಪದಲ್ಲಿ ಆರೋಪಿ ಅಸಾದುಲ್ಲಾಗೆ ಎಸ್ಪಿ ಎಸ್ ಜಾಹ್ನವಿ ಖಡಕ್ ವಾರ್ನ್ ಮಾಡಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ DAR ಗ್ರೌಂಡ್ ನಲ್ಲಿ ನಡೆದ ರೌಡಿಗಳ ಪರೇಡ್’ನಲ್ಲಿ ವಿಜಯನಗರ ಜಿಲ್ಲೆಯ 21 ಪೊಲೀಸ್ ಠಾಣೆಗಳ 220 ರೌಡಿಶೀಟರ್ ಗಳು ಭಾಗಿ ಆಗಿದ್ರು. ಅಪರಾಧಿ ಚಟುವಟಿಕೆಗಳಿಂದ ದೂರ ಇರಬೇಕು. ಮತ್ತೇನಾದ್ರೂ ಕಮಕ್ – ಕಿಮಕ್ ಅಂದು ಬಾಲ ಬಿಚ್ಚಿದ್ರೆ ಕಟ್ ಮಾಡ್ತಿವಿ ಅಂತ ವಾರ್ನ್ ಮಾಡಿದ್ರು. ಸುಧಾರಣೆ ಆಗದೇ ಚಟುವಟಿಕೆಗಳು ಮುಂದುವರೆದರೆ, ಇದಕಿಂತ ಕಠಿಣ ಕ್ರಮ ಆಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು‌ ಸುಧಾರಣೆ ಆಗುವುದಕ್ಕೆ ಅವಕಾಶ ಪ್ರತಿದಿನ ಇರುತ್ತೆ. ಒಳ್ಳೆ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಿ. ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಬೇಕು ರೌಡಿಗಳಿಗೆ ಎಸ್ಪಿ ಎಸ್. ಜಾಹ್ನವಿ ನೀಡಿದ್ರು.

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend