ಖಾನಾಪೂರದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಬಸ್ : 11 ಪ್ರಯಾಣಿಕರಿಗೆ ಗಂಭೀರ ಗಾಯ..!
ಬೆಳಗಾವಿ : ಸಾರಿಗೆ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ 11 ಜನರು ಗಂಭೀರವಾಗಿ ಗಾಅಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡವರಲ್ಲಿ ಜ್ಯೋತಿ ತಹಶಿಲ್ದಾರ(20), ಶ್ರೇಯಸ್ ಮಾದಾರ(17), ಮೆಹಬೂಬಿ ಸನದಿ(60), ಅಣ್ಣಪೂರ್ಣ ಹುಡೇದಾರ್(36), ಸುನೀತಾ ಕಡಬಿ(27), ಮಂಜುಳಾ ಹುಡೇದಾರ್(28), ಪವಿತ್ರಾ ಹುಡೇದಾರ್(28), ಶಿವಾನಿ ಅಂಬೇವಾಡ್ಕರ್(37) ಮತ್ತು ಶೀಲಾ ಮಿಟಗಾರ (35) ಎಂದು ಗುರುತಿಸಲಾಗಿದೆ.
ಖಾನಾಪುರ ತಾಲೂಕಿನ ನಂದಗಡದ ಸರಕಾರಿ ಆಸ್ಪತ್ರೆ ಎದುರುಗಡೆ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹನ್ನೊಂದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾನಾಪುರ ಘಟಕಕ್ಕೆ ಸೇರಿದ ಬಸ್ಸು ಖಾನಾಪುರದಿಂದ ಬೀಡಿಗೆ ತೆರಳುತ್ತಿತ್ತು. ನಂದಗಡದ ಸರಕಾರಿ ಆಸ್ಪತ್ರೆ ಎದುರುಗಡೆ ಬರುತ್ತಿದ್ದಾಗ, ಏಕಾಏಕಿ ರಸ್ತೆಗೆ ಅಡ್ಡ ಬಂದ ಕಾರನ್ನು ತಪ್ಪಿಸಲು ಯತ್ನಿಸಿದ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
