ಹಾಕಿದ ಗುಂಡು ಮತ್ತೇರಲಿಲ್ಲ : ಮತ್ತೆ ಕುಡಿಯಲು ಹಣವಿರಲಿಲ್ಲ : ಹಣಕ್ಕಾಗಿ ದರೋಡೆಗಿಳಿದ ಯುವಕರು.!!!

ಹಾಕಿದ ಗುಂಡು ಮತ್ತೇರಲಿಲ್ಲ : ಮತ್ತೆ ಕುಡಿಯಲು ಹಣವಿರಲಿಲ್ಲ : ಹಣಕ್ಕಾಗಿ ದರೋಡೆಗಿಳಿದ ಯುವಕರು.!

ಅಂದು ಫ್ರೆಂಡ್ ಬರ್ತಡೇ ಇತ್ತು. ಒಂದೇ ಊರಿನ ಐದು ಮಂದಿ, ಒಬ್ಬ ಕೋಲಾರದ ಮಾಲೂರು ಮೂಲದವನು ಸೇರಿ ಬರ್ತಡೇ ಬಾಯ್ ಗೆ ಕೇಕ್ ಕಟ್ ಮಾಡಿ, ಬರ್ತಡೇ ಪಾರ್ಟಿ ಮಾಡಲು ಮಾ.10 ರಾತ್ರಿ ಸುಮಾರು 11 ಗಂಟೆಗೆ ಬಾರ್ ನಿಂದ ಎಣ್ಣೆ ತಂದು ಕುಡಿಯಲು ಗೀತಂ ಕಾಲೇಜು ಹಿಂಭಾಗ ಕುಳಿತುಕೊಳ್ಳುತ್ತಾರೆ. ತಂದಿದ್ದ ಎಲ್ಲಾ ಎಣ್ಣೆ ಒಂದೇ ರೌಂಡ್ ಗೆ ಮುಗಿಸಿಬಿಡುತ್ತಾರೆ. ಮತ್ತೆ ಏರದೇ ಇದ್ದಾಗ ಅದು ಆ ಕುಡುಕರಿಗೆ ಸಾಕಾಗೋದಿಲ್ಲ. ಇನ್ನೂ ಕಿಕ್ ಬೇಕೆಂದರೆ ಮತ್ತೆ ಎಣ್ಣೆ ಬೇಕು. ಆದರೆ, ಯಾರ ಜೇಬಲ್ಲೂ ದುಡ್ಡು ಇರೋಲ್ಲ. ಏನಾದರೂ ಮಾಡಿ ಕುಡಿಲೇ ಬೇಕು ಎಂದು ತೀರ್ಮಾನಿಸಿ ಗೀತಂ ಕಾಲೇಜು ರೋಡ್.

ಮಾ. 11ರ ಮುಂಜಾನೆ ಸುಮಾರು 12:40ರ ಸಮಯದಲ್ಲಿ ಈ ಪೊರ್ಕಿಗಳಿಗೆ ಸಿಕ್ಕಿದ್ದು ಗೀತಂ ಕಾಲೇಜಿನ ವಿದ್ಯಾರ್ಥಿಗಳು, ಅನ್ಯ ಕೆಲಸದ ಮೇರೆಗೆ ಪಿಜಿಯಿಂದ ಹೊರಬಂದಿದ್ದಾಗ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡುತ್ತಾರೆ. ಹೊಡೆದು ಬಡೆದು ಮೊಬೈಲ್ ಹಾಗೂ ಜೇಬುಗಳಲ್ಲಿ ಇದ್ದ ಹಣವನ್ನು ಕಸಿದುಕೊಳ್ಳುತ್ತಾರೆ. ನಂತರ ಬಲವಂತವಾಗಿ ಮೊಬೈಲ್ ಪಾಸ್ ವರ್ಡ್ ಪಡೆದು ಆನ್ ಲೈನ್ ಮೂಲಕ ಹಣವನ್ನು ದೋಚುತ್ತಾರೆ… ಹೀಗೆ ಇಬ್ಬರ ಬಳಿ ಸಾವಿರಾರು ರೂಪಾಯಿ ಹಣವನ್ನು ರಾಬರಿ ಮಾಡಿ ಕುಡಿದು ಎಂಜಾಯ್ ಮಾಡುತ್ತಾರೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಾ.11ರಂದು ದೂರು ದಾಖಲಾಗುತ್ತದೆ. ದೂರು ದಾಖಲಾಗುತ್ತಿದ್ದಂತೆ ಪೋಕರಿಗಳು ಮಂಗ ಮಾಯವಾಗುತ್ತಾರೆ. ಆದರೆ, ಪೊಲೀಸರು ಪೊರ್ಕಿಗಳ ಬೆನ್ನತ್ತಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಐವರನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ… ಓರ್ವ
ತಲೆಮರೆಸಿಕೊಂಡಿದ್ದಾನೆ. ಅವನ ಸೆರೆಗೂ ಪೊಲೀಸರು ಬಲೆ ಬೀಸಿದ್ದಾರೆ….

ಬಂಧಿತ ಆರೋಪಿಗಳ ವಿವರ

ಸೊಣ್ಣಪ್ಪನಹಳ್ಳಿ ಗ್ರಾಮದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಎ1 ಆನಂದ್ ಕುಮಾರ್ (25), ಎ2 ಡ್ರೈವರ್ ತಿಲಕ್ (19) ಎ3 ಗಾರೆ ಕೆಲಸಗಾರ ಆಕಾಶ್ (21), ಎ4 ಡ್ರೈವರ್ ಮುನೇಗೌಡ (21), ಎ5 ಕೋಲಾರದ ಮಾಲೂರು ಮೂಲದ ಅಕ್ಷಯ್ ಕುಮಾರ್, ಸದ್ಯ ತಲೆಮರೆಸಿಕೊಂಡಿದ್ದಾನೆ. ಎ6 ಗೌತಮ್ ಬಂಧಿತ ಆರೋಪಿಗಳು.

ಈ ಖದೀಮರಿಗೆ ಯುವಕರು ಸಿಕ್ಕಿದ್ದಕ್ಕೆ ಹಣ ಮಾತ್ರ ದೋಚಿ ಸುಮ್ಮನಾದ್ರು, ಒಂದು ವೇಳೆ ಯುವತಿಯರು ಸಿಕ್ಕಿದ್ರೆ ಏನು ಗತಿ….? ಈ ಪುಂಡರಿಗೆ ತಕ್ಕ ಪಾಠವಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend