;

ಚಿತ್ರದುರ್ಗ: ಜಿಲ್ಲೆಯ ಹಿಂದೂ ಮಹಾಗಣಪತಿ ಏಷ್ಯಾದಲ್ಲೇ ಅತಿ ದೊಡ್ಡ ಶೋಭಾಯಾತ್ರೆ ಎಂಬ ಹೆಗ್ಗಳಿಕೆ…!!!

ಚಿತ್ರದುರ್ಗ: ಜಿಲ್ಲೆಯ ಹಿಂದೂ ಮಹಾಗಣಪತಿ ಏಷ್ಯಾದಲ್ಲೇ ಅತಿ ದೊಡ್ಡ ಶೋಭಾಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಬಾರಿ ಶೋಭಾಯಾತ್ರೆಯನ್ನು ಸಂಸದರು, ಮೈಸೂರಿನ ರಾಜಮನೆತನದ ಯದುವೀರ್ ಅವರು ಉದ್ಘಾಟನೆ ಮಾಡಿದರು.ಶೋಭಾಯಾತ್ರೆ ಉದ್ಘಾಟನೆಯಲ್ಲಿ ಸಾಧು ಸಂತರು, ಪಕ್ಷಾತೀತವಾಗಿ ರಾಜಕೀಯ ಗಣ್ಯರು, ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.
ಈ ಬಾರಿ ತಿರುಪತಿ ತಿಮ್ಮಪ್ಪನ ಮಾಡೆಲ್, ಭಗವಾಧ್ವಜ, ಬೃಹತ್ ಹೂವಿನ ಹಾರಗಳ ಹರಾಜುಮಾಡಲಾಗಿದ್ದು
ಭಗವಾ ಧ್ವಜವನ್ನು ಬಿಜೆಪಿ ಮುಖಂಡ ಹನುಮಂತೇಗೌಡ 6 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು.ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯನ್ನು ವಜ್ರ ಮಹೇಶ್ 5.25 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು.
ಗಣಪತಿಯ ಫಲಾಹಾರವನ್ನು ಐಶ್ವರ್ಯಾ ಗ್ರೂಪ್ ಕಿರಣ್ ಕುಮಾರ್ 1.25 ಲಕ್ಷ ರೂ.ಗಳಿಗೆ ಪಡೆದುಕೊಂಡರು.ಕೈಯಲ್ಲಿ‌ ರಚಿಸಿರುವ ಗಣಪತಿ ಕಲಾಕೃತಿಯನ್ನು ಮಂಜುನಾಥ್ ಎಂಬುವವರು 1.05 ಲಕ್ಷ ರೂ.ಗಳಿಗೆ ಪಡೆದುಕೊಂಡರು.
ಗಣಪತಿಯ ಹೂವಿನ ಹಾರವನ್ನು ಚಿತ್ರಹಳ್ಳಿ ಲವಕುಮಾರ್ 1 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು.
ವೇದಿಕೆಯಲ್ಲಿ ಶಿವಲಿಂಗಾನಂದ ಶ್ರೀ, ಶಾಂತವೀರ ಶ್ರೀ, ಮಾದಾರ ಚನ್ನಯ್ಯ, ಭಗೀರಥ ಶ್ರೀ, ಇಮ್ಮಡಿ‌ ಸಿದ್ದರಾಮೇಶ್ವರ ಶ್ರೀ, ಸರ್ದಾರ್ ಸೇವಾಲಾಲ್ ಶ್ರೀ, ಬಸವ ಮಾಚಿದೇವ ಶ್ರೀ, ವಿಎಚ್ಪಿ ಮುಖಂಡರಾದ ಷಡಾಕ್ಷರಪ್ಪ, ಕೂಡಾ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಡಾ.ಮಂಜುನಾಥ್, ಸಂಸದ ಗೋವಿಂದ ಕಾರಜೋಳ, ಎಂಎಲ್ಸಿ ಕೆ.ಎಸ್.ನವೀನ್, ಡಾ.ಸಿದ್ದಾರ್ಥ್, ಚಂದ್ರಶೇಖರ್ ಇತರರಿದ್ದರು. ಗಣಪತಿ ಶೋಭಾಯಾತ್ರೆ ಮಧ್ಯಾಹ್ನ‌ 2.30ಕ್ಕೆ‌ಚಾಲನೆ ಪಡೆದುಕೊಂಡಿತು.
ಡಿಜೆಗೆ ಈ ಬಾರಿ ಸರ್ಕಾರ ಹಲವು ನಿಬಂಧನೆಗಳನ್ನು ಹೇರಿದ್ದು, ಸರ್ಕಾರದ ಆದೇಶ ಹಾಗೂ ಕಾನೂನಿನಲ್ಲಿ ಏನು ಅವಕಾಶ ಇದೆಯೋ ಅದೆಲ್ಲವನ್ನು ಸಂಪೂರ್ಣವಾಗಿ ಬಳಸಿಕೊಂಡು ಯಾರ ನಿರೀಕ್ಷೆಯನ್ನು ಹುಸಿಗೊಳಿಸಿದೆ ಶೋಭಾಯಾತ್ರೆ
4 ವಾಹನಗಳಲ್ಲಿ ಸ್ಪೀಕರ್ ಗಳನ್ನು ಅಳವಡಿಕೆ ಮಾಡುತ್ತೇವೆ. ಶೋಭಾಯಾತ್ರೆ ವೇಳೆ ಜನರಿಗೆ ಯಾವ ರೀತಿಯ ಸೌಂಡ್ ಬೇಕು ಅದಕ್ಕೆ ತಕ್ಕಂತೆ ತಯರಾಗಿದ್ದು ಜಿಲ್ಲಾಡಳಿತದ ವತಿಯಿಂದ ಸಹ ಅನುಮತಿ ಪಡೆಯುವ ಮುಖಾಂತರ 6 ಡಿಜೆ ಗಳ ಶೋಭಾಯಾತ್ರೆಗೆ ಬಳಸುವ ಮೂಲಕ ಅಬ್ಬರಿಸಿದವು ನಾಲ್ಕೈದು ಲಕ್ಷ ಮಂದಿ ಡಿಜೆ ಶಬ್ದಕ್ಕೆ ನೃತ್ಯವನ್ನು ಮಾಡಿದರು ನಂತರ ಚಂದ್ರವಳ್ಳಿ ಕೆರೆಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು. ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾದ ಶರಣ್‌ ಕುಮಾರ್‌, ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್‌, ಮುಖಂಡರಾದ ಟಿ.ಬದರೀನಾಥ್‌, ಕೇಶವ್‌, ಸಂದೀಪ್‌, ಅಶೋಕ್‌, ವಿಠಲ್‌ ಸೇರಿದಂತೆ ರಾಜಕೀಯ ಮುಖಂಡರು ಭಾಗಿಯಾಗಿದ್ದರು..

ವಿನಾಯಕ ಆರ್ ಜಿ
ವರದಿಗಾರರು ಚಿತ್ರದುರ್ಗ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;