;

ರಸ್ತೆ ಕಾಣೆಯಾಗಿದೆ ಹುಡುಕಿಕೊಡಿ ಸ್ವಾಮಿ, ಒಮ್ಮೆಯಾದರೂ ಬಂದು ನೋಡಿ ಸೂಕ್ತ ಪರಿಹಾರ ನೀಡಿ…!!!

ರಾಮಕೃಷ್ಣ ರಾಯ್ಕರ್
ಮರಿಯಮ್ಮನಹಳ್ಳಿ:
ಉತ್ತಮ ಮುಂಗಾರು ರೈತನಿಗೆ ಹರುಷ ವುಂಟು ಮಾಡಿದೆ ಯಾಕೆಂದರೆ ಈ ಬರಿ ಬಿತ್ತಿದ ಜೋಳದ ಮತ್ತು ಮೆಕ್ಕೆಜೋಳ ಉತ್ತಮ ಪಸಲು ನೀಡಿದ್ದು, ತೆನೆಗಳು ತುಂಬಿ ಮುಟ್ಟಿಕ್ಕುತ್ತಿವೆ. ಆದರೆ ಹೋಬಳಿಯ ಕೆಲವೆಡೆ ತೆನೆ ಕಟಾವು ಮಾಡಲು ಹೊಲಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೆ ತೊಂದರೆ ಪಡುವಂತಾಗಿದೆ.

ಹಳ್ಳಿ ಹೊಲಗಳಿಗೆ ಸಂಪರ್ಕ ಕಲಿಪಿಸುವ ರಸ್ತೆಗಳು ಹಿಕ್ಕಾ ಟ್ಟಾಗಿದೆ. ಕೆಲವೆಡೆ ತಗ್ಗು ಗುಂಡಿಗಳು ರಸ್ತೆ ಅಕ್ರಮಿಸಿಕೊಂಡಿವೆ. ರೈತರ ಪರ ಕಾಳಜಿ ಇಲ್ಲದ ಜನಪ್ರತಿನಿದಿಗಳು ಬೂಟಾಟಿಕೆ ಮಾತಿಂದ ರೈತರ ಹಾದಿ ತಪ್ಪಿಸುತ್ತಿದ್ದಾರೆ.

ಈ ಭಾಗದ ರೈತರ ಜೀವನಾಡಿ ಡಣಾಯಕನಕೆರೆ ಮಾಗಾಣಿಗೆ ಹೋಗುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಕಣ್ಣಿದ್ದು ಕುರುಡರಂತೆ ವರ್ಥಿಸುತ್ತಿರುವುದು ದುಃಖಕರ.
ಡಣಾಯಕನಕೆರೆಗೆ, ಡಣಾಪುರ, ದೇವಲಾಪುರ, ಚಲಕನಹಟ್ಟಿ ಗರಗ ನಾಗಲಾಪುರ ಸೇರಿದಂತೆ 33 ಹಳ್ಳಿಗಳಲ್ಲಿ ಜೋಳ ಮತ್ತು ಮೆಕ್ಕೆಜೋಳ ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಉತ್ತಮ ರಸ್ತೆ ಮಾಡಿಕೊಡುವ ಮೂಲಕ ರೈತರ ಗೋಳಿಗೆ ಸ್ಪಂದಿಸ ಬೇಕಿದೆ…


‘ರೈತರ ಜೀವನ ಜೂಜಾಟ ಆಗಿದೆ, ಬಿತ್ತನೆ ಮಾಡಲು ಬೀಜ ಗೊಬ್ಬರ ಸಮಸ್ಸೆ, ಬಿತ್ತನೆ ಮಾಡಿ ಒಳ್ಳೆ ಪಸಲು ಬಂದಾಗ ಸರಿಯಾದ ಬೆಲೆ ಸಿಗಲ್ಲ ಈ ನಡುವೆ ತಗ್ಗು ಗುಂಡಿಗಳ ರಸ್ತೆಯಲ್ಲಿ ಸರ್ಕಸ್ ಬೇರೆ. ಜನಪ್ರತಿನಿದಿಗಳು ನಮಗೆ ಸ್ಪಂದನೆ ಮಾಡಲಿ ‘- ಫಕೀರಪ್ಪ ರೈತ. ಮರಿಯಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;