ಕೂಡ್ಲಿಗಿ:ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ, “ರಕ್ಷಾ ಬಂಧನ” ಕಟ್ಟಿ ಶುಭಕೋರಿದ-ಈಶ್ವರಿ ಅಕ್ಕಂದಿರು-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಈಶ್ಬರೀಯ ಭ್ರಹ್ಮಕುಮಾರಿ ಅಕ್ಕಂದಿರು, ಸಹೋದರತ್ವ ಹಾಗೂ ಬ್ರಾತೃತ್ವ ಸಾರುವ, ಪರಸ್ಪರರಲ್ಲಿ ಸೌಹಾರ್ದತೆಯನ್ನು ಗಟ್ಟಿಯಾಗಿ ಬಂಧಿಸುವ, ಧಾರ್ಮಿಕ ಆಚರಣೆಯಾದ ಹಬ್ಬ ಸಾಂಪ್ರದಾಯಿಕವಾಗಿ ಆಚರಿಸಿದರು. “ರಕ್ಷಾಬಂದನ” ಹಬ್ಬದ ಆಚರಣೆಯ ಚಟುವಟಿಕೆಗಳನ್ನು, ಅವರು ಪಟ್ಟಣದ ತಮ್ಮ ಧ್ಯಾನಮಂದಿರದಲ್ಲಿ ಆಚರಿಸುವ ಮೂಲಕ ಪ್ರಾರಂಭಿಸಿದರು. ಧಾರ್ಮಿಕ ನೆಲೆಗಟ್ಟಿನಂತೆ ರಕ್ಷಾ ಬಂಧನ ಕಾರ್ಯಕ್ರಮವನ್ನು, ಬಹು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ವಿವಿದ ಧಾರ್ಮಿಕ ಚಟುವಟಿಕೆಗಳು, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿಲ್ಲೆ ಹಾಗೂ ಅನ್ಯ ಜಿಲ್ಲೆಯ ಈಶ್ವರೀಯ ಬ್ರಹ್ಮಕುಮಾರಿ ಪ್ರಮುಖರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ, ಈಶ್ವರಿ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದವರು ಸಕ್ರೀಯವಾಗಿ ಭಾಗಿಯಾಗಿದ್ದರು. ನಂತರ ಅಕ್ಕಂದಿರು ಪಟ್ಟಣದ ಸಾರ್ವಜನಿಕರಿಗೆ, ರಕ್ಷಾ ಬಂಧನದ ಮಹತ್ವ ತಿಳಿಹೇಳುತ್ತಾ ರಕ್ಷಾ ಬಂಧನ ಕಟ್ಟಿದರು. ಪಟ್ಟಣದ ನ್ಯಾಯಾಲಯದ ಇಲಖೆಯವರಿಗೆ, ಪೊಲೀಸ್ ಅಧಿಕಾರಿಗಳಾದ ಡಿ.ವೈ.ಎಸ್ಪಿ.ಮಲ್ಲೇಶಪ್ಪ ವಿ.ಮಲ್ಲಾಪುರ ಪಿಎಸ್ಐ ಧನುಂಜಯಕುಮಾರ, ಹಾಗೂ ಪೊಲೀಸ್ ಸಿಬ್ಬಂದಿಯವರಿಗೆ. ತಹಶಿಲ್ದಾರರಾದ ಟಿ.ಜಗಧೀಶರವರು ಸೇರಿದಂತೆ, ತಾಲೂಕು ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ, ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರಿಗೆ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಕಕುಪ್ಪಿ ರಜನೀಕಾಂತ ಸೇರಿದಂತೆ. ಹಾಲಿ ಸದಸ್ಯರ ನ್ನೊಳಗೊಂಡು, ವಿವಿದ ಜನ ಪ್ರತಿನಿಧಿಗಳಿಗೆ. ಸಾಹಿತಿಗಳಿಗೆ, ವಿವಿದ ಕಲಾವಿದರಿಗೆ, ವಕೀಲರ ಸಂಘದ ಪದಾಧಿಕಾರಿಗಳಿಗೆ, ವಿವಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ, ಹೋರಾಟಗಾರರಿಗೆ, ಹಿರಿಯ ಪತ್ರಕರ್ತರಾದ ಎ.ಎಮ್.ಸೋಮಶೇಖರಯ್ಯ, ಹಾಗೂ ವೀರೇಶ ಅಂಗಡಿ ಸೇರಿದಂತೆ ವಿವಿದ ಪತ್ರಕರ್ತರಿಗೆ. ವಿವಿದ ಸಮಾಜ ಸೇವೆಕರಿಗೆ, ಹಿರಿಯ ನಾಗರೀಕರು ಸೇರಿದಂತೆ, ಬಾಲಕರಿಗೆ ಯುವಕರಿಗೆ. ಕಾರ್ಮಿಕರಿಗೆ, ರೈತ ಮಹೋದರರಿಗೆ, ಅಂಗಡಿ ಮುಂಗಟ್ಟುಗಳ ವರ್ತಕರಿಗೆ, ಮತ್ತು ಹೋಟೆಲ್ ಗಳ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ. ಆಟೋ ಚಾಲಕರು ಹಾಗೂ, ವಿವಿದ ವಾಹನಗಳ ಮಾಲೀಕರು ಚಾಲಕರಿಗೆ, ವಿವಿದ ಗಣ್ಯಮಾನ್ಯರಿಗೆ. ಕಾಂಗ್ರೇಸ್ ಪಕ್ಷದ ಮುಖಂಡರಾದ ಉದಯಜನ್ನು ಹಾಗೂ ಟಿ.ಜಿ.ಮಲ್ಲಿಕಾರ್ಜುನಗೌಡಸೇರಿದಂತೆ, ವಿವಿದ ಪಕ್ಷಗಳ ಮಖಂಡರಿಗೆ. ಬೀದಿ ಬದಿಯ ಅಂಗಡಿಗಳ ವ್ಯಾಪಾರಸ್ತರಿಗೆ, ಕಟ್ಟಡ ಕಾರ್ಮಿಕರು ಸೇರಿದಂತೆ ಹಮಾಲರಿಗೆ. ಒಟ್ಟಾರೆ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿರುವವರಿಗೆ, ಹಿಂದೂ ಧರ್ಮದ ಸಾಂಪ್ರದಾಯಿಕದಂತೆ. ಈಶ್ಬರೀಯ ಬ್ರಹ್ಮಕುಮಾರಿ ಅಕ್ಕಂದಿರು, ರಕ್ಷಾ ಬಂಧನ ಕಟ್ಟಿ ಸಿಹಿ ತಿನಿಸು ನೀಡಿ ಶುಭ ಕೋರಿದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
