ಬಿಷ್ಣಳ್ಳಿ:ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ, ನಿರ್ಮಾಣ ಹಂತದ ಕಟ್ಟಡ ಪರಿಶೀಲಿಸಿದ-ಶಾಸಕ ಡಾ”ಎನ್.ಟಿ.ಶ್ರೀನಿವಾಸ್-ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಕ್ಷೇತ್ರದ ವ್ಯಾಪ್ತಿಯ ಬಿಷ್ಣಹಳ್ಳಿ ಸಮೀಪದಲ್ಲಿ. ನಿರ್ಮಾಣ ಹಂತದಲ್ಲಿರುವ ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ, ನೂತನ ಕಟ್ಟಡ ಕಾಮಗಾರಿಯನ್ನು ಸೆ4ರಂದು ಬೆಳಗಿನ ಜಾವ ವೀಕ್ಷಣೆ ಮಾಡಿದರು.
ಶಾಸಕರು ಆ್ಯಕ್ಷನ್ ಪ್ಲಾನ್ ಮೂಲಕ ಮಾಹಿತಿ ಪಡೆದರು, ವಿವಿದ ಕಟ್ಟಡಗಳ ಶಿಲಾನ್ಯಾಸದ ನೀಲನಕಾಶೆ ರಚನೆಯನ್ನು ಗಮಿನಿಸಿದರು. ವಸತಿ ಶಾಲೆಯ ಒಳಾಂಗಣ, ತರಗತಿಗಳ ಕಟ್ಟಡ, ವಸತಿ ನಿಲಯದ ಕಟ್ಟಡ, ಸಿಬ್ಬಂದಿ ವಸತಿ ಕಟ್ಟಡ, ಕಾಂಪೌಂಡ್ , ರಸ್ತೆ , ಪಾಕ್೯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ. ನಿರ್ಮಾಣ ಹಂತದ ಪ್ರಗತಿ ಹಂತದಲ್ಲಿರುವದು, ಸೇರಿದಂತೆ ಇತ್ಯಾದಿಯಾಗಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊಂದಿರುವ, ಇಂಜಿನಿಯರ್ ಹಾಗೂ ಗುತ್ತಿಗೆದಾರರು ಹಾಜರಿದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
